ಪ್ರವಾಸೋದ್ಯಮದಿಂದ ಸರ್ಕಾರದ ಆದಾಯ ಹೆಚ್ಚಳ

ಧಾರವಾಡ:  ಪ್ರವಾಸ ಯೋಜನೆ ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಇದರಿಂದ ಅವಲಂಬಿತ ಕುಟುಂಬದ ಆದಾಯ ಹೆಚ್ಚಳದೊಂದಿಗೆ ಸರ್ಕಾರದ ರಾಜಸ್ವ ನಿಧಿಯು ಹೆಚ್ಚುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಹೇಳಿದರು.

ನಗರದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಹುಬ್ಬಳ್ಳಿಯ ವಿಜನ್ ಫ್ಲೈ ಬಿಟಿಎ ಮಹಾವಿದ್ಯಾಲಯ ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ವಿಶ್ವ ಪ್ರವಾ ಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಪ್ರತಿ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿ ಮಿತ್ರರನ್ನು ನೇಮಿಸುವ ಮೂಲಕ ಪ್ರವಾಸಿಗರಿಗೆ ಅಗತ್ಯ ಮಾಹಿತಿ, ರಕ್ಷಣಾ ಕ್ರಮ ಕೈಗೊಂಡಿದೆ ಎಂದರು. ಡಾ. ಹರ್ಷವರ್ಧನ ಶೀಲವಂತ, ವಿಶೇಷ ಉಪನ್ಯಾಸ ನೀಡಿದರು. ವಿಜನ್ ಫ್ಲೈ ಬಿಟಿಎ ಕಾಲೇಜ್​ನ ವ್ಯವಸ್ಥಾಪಕ ನಿರ್ದೇಶಕಿ ಅಂಜುಮನ್ ಶೇಖ್ ಮಾತನಾಡಿದರು. ಪ್ರಾಚಾರ್ಯ ಡಾ. ಪ್ರಕಾಶ ಶಿವಳ್ಳಿ, ಹೋಟೆಲ್ ಉದ್ಯಮಿ ಧೀರಜ್ ಸಾಧುನವರ, ಕಾರ್ಯಪಾಲಕ ಇಂಜಿನಿಯರ್ ಅಬ್ದುಲ್​ರಹಿಂ ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸ್ವಾಗತಿಸಿದರು. ರೇಶ್ಮಾ ನಿರೂಪಿಸಿದರು.