ಖಗೋಳ ವಿಸ್ಮಯಕ್ಕೆ ಕ್ಷಣಗಣನೆ

ಪ್ರಸಕ್ತ ವರ್ಷದ 2ನೇ ಸಂಪೂರ್ಣ ಚಂದ್ರಗ್ರಹಣ ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಮೈಕ್ರೋ ಬ್ಲಡ್ ಮೂನ್ ಎಂದು ಕರೆಯಲಾಗುವ ಈ ಗ್ರಹಣ ವೈಜ್ಞಾನಿಕ ಲೋಕದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ವಿದ್ಯಮಾನ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.

ಎಲ್ಲೆಲ್ಲಿ ಗೋಚರವಾಗಲಿದೆ?

ಭಾರತ ಸಹಿತ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್​ನಲ್ಲಿ ಖಗ್ರಾಸ ಚಂದ್ರ ಗ್ರಹಣ ಗೋಚರಿಸಲಿದೆ. ನ್ಯೂಜಿಲೆಂಡ್, ಜಪಾನ್, ರಷ್ಯಾ, ಚೀನಾ, ದಕ್ಷಿಣ ಅಮೆರಿಕದಲ್ಲಿ ಮತ್ತಿತರ ಭಾಗದಲ್ಲಿ ಭಾಗಶಃ ಗೋಚರಿಸಲಿದೆ. ಉತ್ತರ ಅಮೆರಿಕದಲ್ಲಿ ಗೋಚರವಾಗುವುದಿಲ್ಲ.

ಸುದೀರ್ಘ

21ನೇ ಶತಮಾನದಲ್ಲೇ ಇದು ಅತಿ ದೀರ್ಘವಾದ ಚಂದ್ರ ಗ್ರಹಣವಾಗಿದೆ. 1 ಗಂಟೆ 43 ನಿಮಿಷ ಕಾಲ ಗ್ರಹಣ ನಡೆಯಲಿದೆ. ಮುಂದಿನ ಸುದೀರ್ಘ ಚಂದ್ರ ಗ್ರಹಣ 2123ರಲ್ಲಿ ಸಂಭವಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕಳೆದ ಜನವರಿ 31ರಂದು ಸೂಪರ್​ಬ್ಲಡ್ ಮೂನ್ ಸಂಭವಿಸಿತ್ತು.

ಇಷ್ಟು ದೀರ್ಘ ಗ್ರಹಣ ಏಕೆ?

ಭೂಮಿಯಿಂದ ಅತಿ ದೂರದಲ್ಲಿ ಚಂದ್ರ ಇರುವಾಗ ಸಂಭವಿಸುವ ಗ್ರಹಣ ದೀರ್ಘ ಕಾಲ ನಡೆಯುತ್ತದೆ.

ಗ್ರಹಣ ಹೇಗೆ ಸಂಭವಿಸುತ್ತದೆ?

ಸೂರ್ಯ, ಭೂಮಿ ಹಾಗೂ ಚಂದ್ರ ಸರಳ ರೇಖೆಯಲ್ಲಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. – ಸೂರ್ಯ, ಚಂದ್ರ ಹಾಗೂ ಭೂಮಿ ಸರಳ ರೇಖೆಯಲ್ಲಿ ಬಂದಾಗ ಸೂರ್ಯ ಗ್ರಹಣ ಉಂಟಾಗುತ್ತದೆ.

ಮಂಗಳ ದರ್ಶನ

ಗ್ರಹಣ ಸಂಭವಿಸುವಾಗ ಮಂಗಳ ಗ್ರಹ ಚಂದ್ರನ ಅತಿ ಸಮೀಪದಲ್ಲಿ ಇರಲಿದೆ. ಆಕಾಶ ಶುಭ್ರವಾಗಿದ್ದರೆ ಬರಿಗಣ್ಣಿನಿಂದಲೂ ಮಂಗಳ ಗ್ರಹವನ್ನು ನೋಡಬಹುದು.

ಪೆನುಂಬ್ರಾ ಎಂದರೆ?

ಇದು ಚಂದ್ರ ಗ್ರಹಣದ ಆರಂಭಿಕ ಹಂತ. ಈ ಹಂತದಲ್ಲಿ ಚಂದ್ರನ ಅಂಚಿನ ಮೇಲೆ ಭೂಮಿಯ ನೆರಳು ಬೀಳಲು ಆರಂಭವಾಗುತ್ತದೆ.

ಉಂಬ್ರಾ ಎಂದರೆ?

ಚಂದ್ರನ ಮೇಲೆ ಸಂಪೂರ್ಣವಾಗಿ ಭೂಮಿಯ ನೆರಳು ಬೀಳುತ್ತದೆ.

ಮೈಕ್ರೋ ಬ್ಲಡ್​ ಮೂನ್

ಚಂದ್ರ ಭೂಮಿಯ ಅತಿ ಸಮೀಪಕ್ಕೆ ಬಂದಾಗ ಗ್ರಹಣ ಸಂಭವಿಸಿದರೆ, ಚಂದ್ರನ ಬಣ್ಣ ಕೆಂಪು ಮಿಶ್ರಿತ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಬ್ಲಡ್​ವುೂನ್ ಎಂದು ಕರೆಯಲಾಗುತ್ತದೆ. ಆದರೆ 27ರಂದು ಸಂಭವಿಸಲಿರುವ ಗ್ರಹಣದ ವೇಳೆ ಚಂದ್ರ, ಭೂಮಿಯಿಂದ ದೂರದಲ್ಲಿ ಇರಲಿದ್ದಾನೆ. ಹೀಗಾಗಿ ತುಸು ಚಿಕ್ಕದಾಗಿ ಕಾಣಿಸಿಕೊಳ್ಳುತ್ತಾನೆ. ಈ ಕಾರಣಕ್ಕಾಗಿ ಇದನ್ನು ಮೈಕ್ರೋ ಬ್ಲಡ್​ವುೂನ್ ಎಕ್ಲಿಪ್ಸ್ ಎಂದು ವಿಜ್ಞಾನಿಗಳು ಕರೆಯುತ್ತಾರೆ.