ಅಘೋಷಿತ ಆಸ್ತಿ-ಆದಾಯ?

Latest News

ಜಿಪಂ ಸಿಇಒ ಕಚೇರಿಗೆ ರೈತರ ಮುತ್ತಿಗೆ

ಚಾಮರಾಜನಗರ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ರೈತರ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಡಳಿತ...

ಎಲ್ಲರಂತೆ ಸಮಾನವಾಗಿ ಬದುಕುವ ಹಕ್ಕು ಮಕ್ಕಳಿಗಿದೆ

ಯಳಂದೂರು: ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬ ನಾಣ್ಣುಡಿಯನ್ನು ಬದಲಿಸಿ ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂಬುದಾಗಿ ಮಾರ್ಪಾಡು ಮಾಡಿಕೊಳ್ಳಬೇಕು ಎಂದು ಯರಗಂಬಳ್ಳಿ...

ಈಶ್ವರ ದೇವಸ್ಥಾನದಲ್ಲಿ ಮಹಾ ಕುಂಭಾಭಿಷೇಕ

ಕೊಳ್ಳೇಗಾಲ: ಪಟ್ಟಣದ ಭೀಮನಗರ ಬಡಾವಣೆಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀಬಸವಲಿಂಗಪ್ಪಸ್ವಾಮಿ, ಶ್ರೀಗುಡ್ಡದಮ್ಮದೇವಿ ಹಾಗೂ ಶ್ರೀ ಈಶ್ವರ ದೇವರ ದೇವಸ್ಥಾನದ ಅಷ್ಠಬಂಧನ ಹಾಗೂ ಮಹಾ ಕುಂಭಾಭಿಷೇಕ ಪೂಜಾ...

ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅಮೆರಿಕ: ಸಿಪಿಇಸಿಯಿಂದ ದೀರ್ಘಕಾಲದಲ್ಲಿ ಪಾಕ್​ ಆರ್ಥಿಕತೆಗೆ ನಷ್ವ

ವಾಷಿಂಗ್ಟನ್: ಚೀನಾ-ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್(ಸಿಪಿಇಸಿ) ಮೂಲಕ ಚೀನಾದ ತೆಕ್ಕೆಗೆ ಸೇರಿರುವ ಪಾಕಿಸ್ತಾನವನ್ನು ಮರಳಿ ತನ್ನ ಪ್ರಭಾವಲಯಕ್ಕೆ ಸೇರಿಸಿಕೊಳ್ಳಲು ಅಮೆರಿಕ ಮುಂದಾಗಿದೆ. ಪಾಕಿಸ್ತಾನ ದಕ್ಷಿಣ ಏಷ್ಯಾದಲ್ಲಿ...

ಬೈಕ್‌ಗಳ ನಡುವೆ ಡಿಕ್ಕಿಯಾಗಿ ಸವಾರ ಸಾವು

ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಸಮೀಪದ ಕಾರ್ಯ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಸಂಜೆ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ತಾಲೂಕಿನ...

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟರು ಮತ್ತು ಬಿಗ್ ಬಜೆಟ್ ನಿರ್ಮಾಪಕರ ಮನೆ ಮೇಲೆ ಗುರುವಾರ ಆದಾಯ ತೆರಿಗೆ (ಐಟಿ) ಇಲಾಖೆ ನಡೆಸಿದ ದಾಳಿಯ ಮುಂದುವರಿದ ಭಾಗವಾಗಿ ಶುಕ್ರವಾರವೂ ಶೋಧ ನಡೆದಿದ್ದು ಕೆಲವರ ಮನೆಗಳಲ್ಲಿ ಅಘೋಷಿತ ಆದಾಯ ಪತ್ತೆಯಾಗಿದೆ.

ಗುರುವಾರ ತಡರಾತ್ರಿವರೆಗೂ ನಟರಾದ ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ಸುದೀಪ್, ಯಶ್ ಮತ್ತು ನಿರ್ವಪಕರಾದ ರಾಕ್​ಲೈನ್ ವೆಂಕಟೇಶ್, ವಿಜಯ್ ಕಿರಗಂದೂರು, ಜಯಣ್ಣ, ಸಿ.ಆರ್. ಮನೋಹರ್ ಮನೆಗಳಲ್ಲಿ ಐಟಿ ಶೋಧ ನಡೆಯಿತು. ಸಾಕಷ್ಟು ಸ್ಥಿರ-ಚರಾಸ್ತಿ ಸಂಬಂಧ ದಾಖಲೆ ಪತ್ರಗಳು ಪತ್ತೆಯಾದ್ದರಿಂದ ಕೆಲ ಐಟಿ ಅಧಿಕಾರಿಗಳು ರಾತ್ರಿಯಿಡೀ ಅಲ್ಲೇ ಉಳಿದಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ 8ಕ್ಕೆ ಪ್ರತ್ಯೇಕ ತಂಡಗಳಾಗಿ ಮತ್ತೆ ತೆರಳಿ ಶೋಧ ಆರಂಭಿಸಿದರು. ಮನೆಯಿಂದ ಹೊರ ಬರದಂತೆ ನಟ-ನಿರ್ವಪಕರ ಕುಟುಂಬ ಸದಸ್ಯರಿಗೆ ನಿರ್ಬಂಧ ಹೇರಿದ್ದರು.

ಐಟಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿಯೊಬ್ಬರ ಸ್ಥಿರಾಸ್ತಿ-ಚರಾಸ್ತಿ ಕುರಿತು ದಾಖಲೆ ಪಡೆದರು. ದಾಖಲೆ ಇಲ್ಲದ ಆಸ್ತಿಗಳ ಪಟ್ಟಿ ಪ್ರತ್ಯೇಕವಾಗಿ ಮಾಡಿಕೊಂಡರು. ಚಿನ್ನಾಭರಣ, ಕಾರು, ಬೈಕ್​ಗಳು ಸೇರಿ ಬೆಲೆ ಬಾಳುವ ವಸ್ತುಗಳ ಪಟ್ಟಿ ಮಾಡಿ ಮಹಜರ್​ಗೆ ಸಹಿ ಪಡೆದಿದ್ದಾರೆ.

ಪ್ರತಿವರ್ಷ ಬರುತ್ತಿದ್ದ ಆದಾಯ, ಅದಕ್ಕೆ ಪಾವತಿಸುತ್ತಿದ್ದ ತೆರಿಗೆ ಕುರಿತು ಸೂಕ್ತ ದಾಖಲೆ, ಉತ್ತರ ಕೊಡಲು ಸಾಧ್ಯವಾಗದ್ದರಿಂದ ನಟ-ನಿರ್ವಪಕರು ತಮ್ಮ ಕಂಪನಿಗಳ ಆಡಿಟಿಂಗ್ ನಿರ್ವಹಿಸುತ್ತಿದ್ದ ಲೆಕ್ಕಪರಿಶೋಧಕರನ್ನು ಮನೆಗೆ ಕರೆಸಿಕೊಂಡು ಅವರ ಮೂಲಕ ಐಟಿ ಅಧಿಕಾರಿಗಳಿಗೆ ಮಾಹಿತಿ ಕೊಡಿಸಿದರು. ಪ್ರತಿ ಹೇಳಿಕೆಯನ್ನೂ ರೆಕಾರ್ಡ್ ಮಾಡಿಕೊಳ್ಳಲಾಯಿತು.

ಸದಾಶಿವನಗರದ ಪುನೀತ್ ರಾಜ್​ಕುಮಾರ್ ಮನೆ ಮೇಲೆ ದಾಳಿ ಮುಂದುವರಿಸಿದ್ದ ಅಧಿಕಾರಿಗಳು ತಡರಾತ್ರಿವರೆಗೂ ಶೋಧ ನಡೆಸಿದರು. ಪಿಆರ್​ಕೆ ಪ್ರೊಡಕ್ಷನ್ಸ್, ಪಿಆರ್​ಕೆ ಆಡಿಯೋ ಕಂಪನಿಗಳ ಆದಾಯ ವಿವರ ಪಡೆದು ಐಟಿ ರಿಟರ್ನ್ಸ್ ಕುರಿತು ಪ್ರಶ್ನಿಸಿದ್ದಾರೆ. ಪ್ರತಿ ಸಿನಿಮಾಗೆ ಪಡೆದ ಸಂಭಾವನೆ, ಬೇರೆ ಉದ್ಯಮಗಳಲ್ಲಿ ತೊಡಗಿರುವ ಕುರಿತ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಜೆ.ಪಿ. ನಗರದ ಸುದೀಪ್ ಮನೆಯಲ್ಲಿ ಕಿಚ್ಚ ಕ್ರಿಯೇಷನ್ಸ್ ಕಂಪನಿ ಕುರಿತು ಮಾಹಿತಿ ಕಲೆ ಹಾಕಿ, ಐಷಾರಾಮಿ ಕಾರು-ಬೈಕ್​ಗಳ ದಾಖಲೆ ಪಡೆದಿದ್ದಾರೆ. ತಂದೆ ಸರೋವರ್ ಸಂಜೀವ್ ಆರಂಭಿಸಿದ್ದ ಬಾರ್-ಹೋಟೆಲ್, ಪತ್ನಿ ಪ್ರಿಯಾ ನಡೆಸುತ್ತಿದ್ದ 360 ಇವೆಂಟ್ ಮ್ಯಾನೇಜ್​ವೆುಂಟ್ ಕಂಪನಿ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ, ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಶಿವರಾಜ್​ಕುಮಾರ್​ಗೆ ಸೇರಿದ ಶ್ರೀಮುತ್ತು ಸಿನಿ ಸರ್ವೀಸ್ ಕಂಪನಿಯ ದಾಖಲೆ ಪಡೆದಿರುವ ಐಟಿ ಅಧಿಕಾರಿಗಳು, ಇತರ ಕಡೆಗಳಲ್ಲಿ ಬಂಡವಾಳ ಹೂಡಿರುವ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಗೀತಾ ಶಿವರಾಜ್​ಕುಮಾರ್ ಅವರನ್ನು ಐಟಿ ಅಧಿಕಾರಿಗಳು ಬ್ಯಾಂಕಿಗೆ ಕರೆದೊಯ್ದು ಬ್ಯಾಂಕ್ ಖಾತೆಗಳ ವಿವರ ಪಡೆದಿದ್ದಾರೆ.

ನಾಗರಬಾವಿಯ ಮನೆಯಲ್ಲಿ ನಿರ್ವಪಕ ವಿಜಯ್ ಕಿರಗಂದೂರು ಅವರಿಗೆ ಸೇರಿದ ಹೊಂಬಾಳೆ ಫಿಲಂಸ್, ಹೊಂಬಾಳೆ ಕನ್ಸ್​ಟ್ರಕ್ಷನ್ಸ್ ದಾಖಲೆ ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ನಿರ್ವಿುಸಿದ್ದ ಪುನೀತ್ ರಾಜ್​ಕುಮಾರ್ ಅಭಿನಯದ ‘ರಾಜಕುಮಾರ’, ‘ಕೆಜಿಎಫ್’ ಸಿನಿಮಾಕ್ಕೆ ಹೂಡಿರುವ ಬಂಡವಾಳ ಮತ್ತು ಆದಾಯದ ಮಾಹಿತಿ ಕಲೆ ಹಾಕಿದ್ದಾರೆ.

ಮಹಾಲಕ್ಷ್ಮೀ ಲೇಔಟ್​ನಲ್ಲಿನ ರಾಕ್​ಲೈನ್ ವೆಂಕಟೇಶ್ ಮನೆ, ಉಲ್ಲಾಳದಲ್ಲಿನ ರಾಕ್​ಲೈನ್ ಇಂಟರ್​ನ್ಯಾಷನಲ್ ಶಾಲೆಗೂ ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಜತೆಗೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಕುರಿತು ಪ್ರಶ್ನಿಸಿದ್ದಾರೆ. ಜತೆಗೆ ಸಿನಿಮಾ ವಿತರಣೆ, ರಾಕ್​ಲೈನ್ ಸ್ಟುಡಿಯೊ, ರಿಯಲ್ ಎಸ್ಟೇಟ್, ರಾಕ್​ಲೈನ್ ಮಾಲ್ ಸೇರಿ ವಾಣಿಜ್ಯ ಮಳಿಗೆಗಳ ಕುರಿತು ದಾಖಲೆ ಪಡೆದಿದ್ದಾರೆ.

ಗುಲಾಬಿ ಹೂಗಳ ರಫ್ತು ಉದ್ಯಮದಲ್ಲಿ ತೊಡಗಿದ್ದ ಸಿ.ಆರ್. ಮನೋಹರ್, ತನ್ವಿ ಶಾನ್ವಿ ಫಿಲಂಸ್ ಕಂಪನಿ ಹೆಸರಿನಲ್ಲಿ ಸ್ಟಾರ್ ನಟರನ್ನು ಇಟ್ಟುಕೊಂಡು ತೆಲುಗು-ಕನ್ನಡದಲ್ಲಿ ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ವಿುಸಿದ್ದಾರೆ. ಇತ್ತೀಚಿನ ದಿ ವಿಲನ್ ಚಿತ್ರಕ್ಕೂ ಭಾರಿ ಪ್ರಮಾಣದಲ್ಲಿ ಹಣ ಹೂಡಿದ್ದರು. ಯಾವ ಸಿನಿಮಾ ಲಾಭ ಗಳಿಸದಿದ್ದರೂ ದೊಡ್ಡ ಬಜೆಟ್ ಸಿನಿಮಾ ನಿರ್ವಣದಲ್ಲಿ ತೊಡಗಿದ್ದರು. ಇತ್ತೀಚೆಗೆ ಜೆಡಿಎಸ್​ನಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ವೇಳೆ ಘೋಷಿಸಿರುವ ಆಸ್ತಿ ಪ್ರಮಾಣಪತ್ರಕ್ಕೂ ಆದಾಯಕ್ಕೂ ತಾಳೆ ಹಾಕಲು ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಸರ್ಜಾಪುರ ಸಮೀಪದ ಮಹಲ್ ಚೌಡದೇನಹಳ್ಳಿಯಲ್ಲಿರುವ ಅವರ ಫಾಮರ್್​ಹೌಸ್​ನಲ್ಲಿ ಶುಕ್ರವಾರವೂ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದರು.

ಜಯಣ್ಣ ಅವರು ಜಯಣ್ಣ ಕಂಬೈನ್ಸ್ ಮೂಲಕ ಕನ್ನಡದ ಸಾಕಷ್ಟು ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. ಜತೆಗೆ ಅನೇಕ ಚಿತ್ರಗಳಿಗೆ ಹಣ ಹೂಡಿದ್ದರು. ಇತ್ತೀಚೆಗೆ ಶಿವರಾಜ್​ಕುಮಾರ್ ನಾಯಕತ್ವದ ಮಫ್ತಿ ನಿರ್ವಿುಸಿದ್ದರು. ಇದೀಗ ರುಸ್ತುಂ ಸಿನಿಮಾ ನಿರ್ವಿುಸುತ್ತಿದ್ದಾರೆ.

ನಟ ಯಶ್, ಯಶೋಮಾರ್ಗ ಫೌಂಡೇಷನ್ ಆರಂಭಿಸಿದ್ದಾರೆ. ಪ್ರೆಸ್ಟೀಜ್ ಅಪಾರ್ಟ್​ವೆುಂಟ್​ನಲ್ಲಿ ಪೆಂಟ್​ಹೌಸ್, ತಾಜ್​ವೆಸ್ಟ್​ಎಂಡ್​ನಲ್ಲಿ ಬಾಡಿಗೆ ರೂಂ, ಹೊಸಕೆರೆಹಳ್ಳಿಯಲ್ಲಿ ಮನೆ ಹೊಂದಿದ್ದಾರೆ. ಈ ಎಲ್ಲದರ ಆದಾಯದ ಮೂಲ ಹಾಗೂ ತೆರಿಗೆ ಪಾವತಿ ಕುರಿತು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಐಟಿ ಅಧಿಕಾರಿಗಳ ಮುಂದಿನ ನಡೆ

ನಟರು, ನಿರ್ವಪಕರಿಂದ ಜಪ್ತಿ ಮಾಡಿರುವ ಆಸ್ತಿ ದಾಖಲೆ ಪತ್ರಗಳು, ಚಿನ್ನಾಭರಣ, ಐಷಾರಾಮಿ ಕಾರು, ಬೈಕು ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಪಟ್ಟಿ ಮಾಡುತ್ತಾರೆ. ಪ್ರತಿವರ್ಷ ಘೋಷಿಸಿರುವ ಆದಾಯ, ಪಾವತಿಸಿರುವ ತೆರಿಗೆ ಹೋಲಿಕೆಯಾದರೆ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ಅಧಿಕ ಆಸ್ತಿ ಇದ್ದರೆ ನೋಟಿಸ್ ಕೊಟ್ಟು ಒಂದಕ್ಕೆ 2 ಪಟ್ಟು ದಂಡ ವಸೂಲಿ ಸಾಧ್ಯತೆ ಇರುತ್ತದೆ. ಇಲ್ಲವೇ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ನ್ಯಾಯಾಲಯದಲ್ಲಿ ದೂರು ದಾಖಲಿಸಿ ತನಿಖೆಗೆ ಕರೆಯುವುದಕ್ಕೆ ಐಟಿ ಅಧಿಕಾರಿಗಳಿಗೆ ಅವಕಾಶ ಇರುತ್ತದೆ.

ನಟರು, ನಿರ್ವಪಕರ ಮನೆಗಳ ಮೇಲೆ ಐಟಿ ದಾಳಿಯ ಹಿಂದೆ ರಾಜಕೀಯ ಇದೆ ಎಂದು ನಾನು ಹೇಳಲ್ಲ. ಆದರೆ, ಇಷ್ಟು ದಿನ ಕಾಂಗ್ರೆಸ್ ಮುಖಂಡರ ಮೇಲೆ ನಡೆಯುತ್ತಿದ್ದ ದಾಳಿ ಈಗ ಸಿನಿಮಾದವರ ಮೇಲೇಕೆ ನಡೆದಿದೆ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ.

| ಸಿದ್ದರಾಮಯ್ಯ, ಮಾಜಿ ಸಿಎಂ

ಶಿವಣ್ಣ ಮನೆ ಮುಂದೆ ಪ್ರತಿಭಟನೆ

ಐಟಿ ದಾಳಿ ಹಿನ್ನೆಲೆಯಲ್ಲಿ ಶಿವರಾಜ್​ಕುಮಾರ್ ಮನೆ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ಕೆಲಕಾಲ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಶಿವಣ್ಣ ದುಡಿಮೆಯ ಹಣ ಅನಾಥಾಶ್ರಮಕ್ಕೆ ಕೊಡುತ್ತಾರೆ. ಅವರ ಮನೆಯಲ್ಲಿ ಏನೂ ಸಿಗುವುದಿಲ್ಲ ಎಂದು ಅಭಿಮಾನಿಗಳು ಐಟಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಹೋಟೆಲ್ ಉಪಾಹಾರ

ಬೆಳಗಿನ ತಿಂಡಿ, ಮಧ್ಯಾಹ್ನದ ಉಪಾಹಾರವನ್ನು ಅಧಿಕಾರಿಗಳು ಹೋಟೆಲ್​ನಿಂದ ರಾಕ್​ಲೈನ್ ಮನೆಗೆ ತರಿಸಿಕೊಂಡು ಸೇವಿಸಿದರು. ಪುನೀತ್ ಮನೆಯಲ್ಲಿ ಶೋಧ ನಡೆಸುತ್ತಿದ್ದ ಅಧಿಕಾರಿಗಳು ಸಹ ಹೋಟೆಲ್ ಊಟಕ್ಕೆ ಮೊರೆ ಹೋದರು.

- Advertisement -

Stay connected

278,675FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...