IMPACT | ಅನ್ನಭಾಗ್ಯ ಕಲಬೆರಕೆ ತೊಗರಿ ಬೇಳೆ ಕುರಿತು ಸಚಿವರ ಸಭೆ: ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಎಂದ ಸಚಿವ

ಬೆಂಗಳೂರು: ಅನ್ನಭಾಗ್ಯ ಕಾರ್ಯಕ್ರಮದ ಅಡಿಯಲ್ಲಿ ಬಡವರಿಗೆ ನೀಡಲಾಗುತ್ತಿರುವ ತೊಗರಿಬೇಳೆಯಲ್ಲಿ ವಿಷಕಾರಿ ಕೇಸರಿ ಬೇಳೆ ಬೆರಸಿ ಸರಬರಾಜು ಮಾಡುತ್ತಿರುವ ಕುರಿತು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ಪ್ರಕಟಿಸಿದ್ದ ತನಿಖಾ ವರದಿಯ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಎಚ್ಚೆತ್ತುಕೊಂಡಿದೆ.

“ಬಡವರಿಗೆ ವಿಷದೂಟ!” ಎಂಬ ಶೀರ್ಷಿಕೆ ಅಡಿಯಲ್ಲಿ ಬುಧವಾರ ವಿಜಯವಾಣಿಯಲ್ಲಿ ತನಿಖಾ ವರದಿ ಪ್ರಕಟವಾಗುತ್ತಲೇ ಆಹಾರ ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಕಲಬೆರಕೆ ಕುರಿತು ಚರ್ಚೆ ನಡೆಸಿದ್ದಾರೆ.

ಆಹಾರ ಸುರಕ್ಷತಾ ವಿಭಾಗದ ಉಪನಿರ್ದೇಶಕ ರಾಮೇಶ್ವರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಕಲಬೆರಕೆ, ತೂಕ ಮತ್ತು ಅಳತೆ ವಿಚಾರವಾಗಿ ಚರ್ಚೆ ನಡೆದಿದೆ. ಅಲ್ಲದೆ, ಕಲಬೆರಕೆ ತಪ್ಪಿಸಲು ನಾಳೆ ಬೇಳೆ ಮಿಲ್​ ಸಂಘದ ಪದಾಧಿಕಾರಿಗಳೊಂದಿಗೂ ಸಭೆ ನಡೆಯಲಿದೆ.

ವಿಜಯವಾಣಿ ಮತ್ತು ದಿಗ್ವಿಜಯದಲ್ಲಿ ಬಂದ ವರದಿ ಗಮನಿಸಿದ್ದೇನೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ಅಲ್ಲದೆ, ಆಹಾರ ಇಲಾಖೆ ಆಯುಕ್ತರೊಂದಿಗೆ ಸಭೆ ನಡೆಸಲಿದ್ದೇನೆ. ಮೊದಲಿಗೆ ಅಧಿಕಾರಿ ಮಟ್ಟದ ಸಭೆ ನಡೆಯಲಿದೆ. ಅಧಿಕಾರಿಗಳು ನೀಡುವ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.

|ಜಮೀರ್​ ಅಹ್ಮದ್​ ಖಾನ್​, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ

ಬಡವರಿಗೆ ವಿಷದೂಟ!

ಸಮ್ಮಿಶ್ರ ಸರ್ಕಾರವೇ ಕಲಬೆರಕೆ, ನಾನ್​ ಏನ್​ ಹೇಳ್ಳಿ: ಕೆ.ಎಸ್​.ಈಶ್ವರಪ್ಪ

https://www.youtube.com/watch?v=__CfoXNDwKI