More

    ಬರದ ಸಮಸ್ಯೆ ನೀಗಿದ ಬಾಳೇಕುಂದ್ರಿ: ತೋಂಟದ ಶ್ರೀಗಳು

    ವಿಜಯವಾಣಿ ಸುದ್ದಿಜಾಲ ಗದಗ
    ಎಸ್​. ಜಿ. ಬಾಳೇಕುಂದ್ರಿ ಅವರು ನಮ್ಮ ನಾಡಿನ ಹೆಸರಾಂತ ಅಭಿಯಂತರರು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ರೂವಾರಿಗಳು ಎಂದು ಡಾ. ತೋಂಟದ ಶ್ರೀಗಳು ತಿಳಿಸಿದರು.
    ತೋಂಟದಾರ್ಯ ಸಂಸ್ಥಾನಮಠದ ಲಿಂಗಾಯತ ಪ್ರಗತಿಶೀಲ ಸಂದ 2641 ನೆಯ ಶಿವಾನುಭವ ಕಾರ್ಯಕ್ರಮದ ಸಾನಿಧ್ಯವಹಿಸಿ, ರಾಜ್ಯ ಸರ್ಕಾರದ ನೀರಾವರಿಯೋಜನೆಗಳ ರೂವಾರಿ ಹೆಸರಾಂತ ಅಭಿಯಂತರ ಎಸ್​. ಜಿ. ಬಾಳೇಕುಂದ್ರಿ ಕುರಿತು ಮಾತನಾಡಿದರು.
    ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಪ್ರಾಮಾಣಿಕ ಸೇವೆ ನೀಡಿದ್ದಾರೆ. ಅವರ ನೇರ, ನಿಷ್ಠುರ ನಡೆಗೆ, ದತೆ, ಪ್ರಾಮಾಣಿಕತೆಗೆ ಜನಪ್ರತಿನಿಧಿಗಳು ಸಹ ಭಯಪಡುತ್ತಿದ್ದುದನ್ನು ಕೇಳಿದ್ದೇವೆ. ಉತ್ತರ ಕರ್ನಾಟಕದ ಜನರು ಬರಗಾಲದಿಂದ ತತ್ತರಿಸಿ ಬೇರೆ ಕಡೆಗೆ ಗುಳೇ ಹೋಗುತ್ತಿದ್ದರು. ಈ ಬರಗಾಲದ ಪ್ರದೇಶವನ್ನು ನೀರಾವರಿ ಪ್ರದೇಶವನ್ನಾಗಿ ರೂಪಿಸಿದ ಮಹಾನ್​ ವ್ಯಕ್ತಿ ಎಸ್​.ಜಿ. ಬಾಳೇಕುಂದ್ರಿಯವರು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ಉಪನ್ಯಾಸಕರಾದ ಡಾ. ಕಲ್ಲಯ್ಯ ಹಿರೇಮಠ ಮಾತನಾಡಿ, ಎಸ್​.ಜಿ. ಬಾಳೇಕುಂದ್ರಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಮತ್ತು ವಿದ್ಯುತ್​ ೇತ್ರದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ್ದಾರೆ. ಇಂತಹ ಪುಣ್ಯಪುರುಷರ ಜನ್ಮ ಶತಮಾನೋತ್ಸವ ಇವತ್ತಿನ ಶಿವಾನುಭವ ಕಾರ್ಯಕ್ರಮದಲ್ಲಿ ಆಚರಿಸುತ್ತಿರುವುದು ಔಚಿತ್ಯರ್ಪೂಣ ಎಂದರು. ಲೋಕೋಪಯೋಗಿ ಇಲಾಖೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಅವರು ಮಲಪ್ರಭಾ, ಟಪ್ರಭಾ, ಹಿಡಕಲ್​, ಕೂಡಲಸಂಗಮ ಹೀಗೆ ಅನೇಕ ಡ್ಯಾಮ್​ಗಳನ್ನು ನಿಮಿರ್ಸಿ ಬರದ ಸಮಸ್ಯೆಯನ್ನು ನೀಗಿಸಿದ ಮಹಾನುಭಾವರು ಎಂದು ಅಭಿಪ್ರಾಯಪಟ್ಟರು.
    ಕಲಾವಿದರಾದ ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ಸಂಗೀತ ಕಾರ್ಯಕ್ರಮ ನೀಡಿದರು. ಬಸವರಾಜ ಬಿಂಗಿ ಭಕ್ತಿ ಸೇವೆ ಒದಗಿಸಿದರು.
    ಸಂದ ಅಧ್ಯ ಶೇಖಣ್ಣ ಕಳಸಾಪೂರ, ಮಂಜುಳಾ ಹಾಸೀಲಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts