ಸೋಮವಾರ ರಕ್ತದಾನ ಶಿಬಿರ

ಹುಕ್ಕೇರಿ: ತಾಲೂಕಿನ ನರಸಿಂಗಪುರ ಗ್ರಾಮದ ಗ್ರಂಥಾಲಯದಲ್ಲಿ ಸೋಮವಾರ ಬೆಳಗ್ಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಕ ಬಿ.ಎಸ್.ಖೇಮಾಳಿ ತಿಳಿಸಿದ್ದಾರೆ.

ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಸ್ಲಾಂಪು ಪ್ರಾಥಮಿಕ ಆರೋಗ್ಯ ಕೇಂದ್ರ, ಮಣಗುತ್ತಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭಗೊಳ್ಳಲಿರುವ ಕಾರ್ಯಕ್ರಮ ಸಂಜೆವರೆಗೆ ನಡೆಯಲಿದೆ ಎಂದರು.

ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ, ವೈದ್ಯೆ ಸುಶೀಲಾ.ಎಸ್.ಸಾಯನ್ನವರ, ಜಿ.ಪಂ ಸದಸ್ಯೆ ಮನೀಷಾ ರಮೇಶ ಪಾಟೀಲ, ತಾ.ಪಂ ಸದಸ್ಯ ಸುರೇಶ ಬೆಣ್ಣಿ, ಗ್ರಾ.ಪಂ ಅಧ್ಯಕ್ಷೆ ಸುನೀತಾ ಹರಿಜನ, ಪಿ.ಡಿ.ಒ ಶಿವಲಿಂಗ ಢಂಗ ಪಾಲ್ಗೊಳ್ಳುವರು.

ಜಿಲ್ಲಾಸ್ಪತ್ರೆಯ ರಕ್ತ ಭಂಡಾರ ಮತ್ತು ಬಿಮ್ಸ್ ಆಶ್ರಯದಲ್ಲಿ ರಕ್ತ ಸಂಗ್ರಹ ಕಾರ್ಯ ಜರುಗಲಿದೆ. ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿಬಿರ ಯಶಸ್ವಿಗೊಳಿಸಬೇಕು ಎಂದು ಕೋರಿದರು.