ನವದೆಹಲಿ: ಪ್ರವಾಸಿ ಭಾರತ ತಂಡದ ವಿರುದ್ಧದ ದ್ವಿಪಕ್ಷೀಯ ಸರಣಿ ಆರಂಭಕ್ಕೂ ಮುನ್ನವೇ ನ್ಯೂಜಿಲೆಂಡ್ ತಂಡ ಆಘಾತ ಕಂಡಿದೆ. ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಟಾಮ್ ಲಥಾಮ್ ಜ.24 ರಂದು ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಕಿರುಬೆರಳು ಮುರಿತಕ್ಕೆ ಒಳಗಾಗಿರುವ ಲಾಥಮ್ ವೈದ್ಯರು 3-4 ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಲಾಥಮ್ ಅಲ್ಲದೆ, ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಕೂಡ ಸರಣಿಗೆ ಲಭ್ಯರಾಗುವುದು ಅನುಮಾನವಾಗಿದೆ.
ಬಲಗೈ ಮುರಿತಕ್ಕೆ ಒಳಗಾಗಿರುವ ಬೌಲ್ಟ್, ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ನಿಂದ ಹೊರಬಿದ್ದಿದ್ದರು. ಈ ವಾರದ ಅಂತ್ಯದಲ್ಲಿ ಅವರು ಮತ್ತೆ ಬೌಲಿಂಗ್ಗೆ ಇಳಿಯಲಿದ್ದರೂ, ಟಿ20 ಸರಣಿಯ ವೇಳೆಗೆ ತಂಡಕ್ಕೆ ಲಭ್ಯರಾಗುವ ಬಗ್ಗೆ ಅನುಮಾನವಿದೆ ಎಂದು ಕೋಚ್ ಗ್ಯಾರಿ ಸ್ಟೀಡ್ ತಿಳಿಸಿದ್ದಾರೆ.