VIDEO|ಟಾಲಿವುಡ್​​ನ ಬಹುನೀರಿಕ್ಷಿತ ಚಿತ್ರ ಸಾಹೋ ಬಿಡುಗಡೆ ದಿನಾಂಕ ಫಿಕ್ಸ್​​, ಕುರುಕ್ಷೇತ್ರ, ಪೈಲ್ವಾನ್​ಗೆ ಪೈಪೋಟಿ ಕೊಡುವ ಸಾಧ್ಯತೆ ?

ಹೈದರಾಬಾದ್​: ಬಾಹುಬಲಿ ಖ್ಯಾತಿಯ ಯಂಗ್​​​​​ ರೆಬಲ್​​ ಸ್ಟಾರ್​ ಪ್ರಭಾಸ್​​​​​​​ ಅವರ ಸಾಹೋ ಚಿತ್ರದ ಟೀಸರ್​​​​​​​​​​​​ ಗುರುವಾರ ಬಿಡುಗಡೆಯಾಗಿದೆ.

ಭಾರತ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರವಾಗಿರುವ ಸಾಹೋ ಆಗಸ್ಟ್​​ 15 ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಸ್ಪಷ್ಟಪಡಿಸಿದೆ. ಈ ಹಿಂದೆ ಪ್ರಭಾಸ್​​ ಅವರ 39ನೇ ಹುಟ್ಟುಹಬ್ಬಕ್ಕೆ ಚಿತ್ರದ ಮೊದಲ ಟೀಸರ್​​ ಬಿಡುಗಡೆಯಾಗಿತ್ತು.

ಟೀಸರ್​​​​​​​​​​​​ ಬಿಡುಗಡೆಯಾದ ಕೇವಲ 30 ನಿಮಿಷಗಳಲ್ಲೆ ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಭಾಸ್​​ ಅವರಿಗೆ ನಾಯಕ ನಟಿಯಾಗಿ ಬಾಲಿವುಡ್​​​​​​ ಬೆಡಗಿ ಶ್ರದ್ಧಾ ಕಪೂರ್​​​​​ ತೆರೆ ಹಂಚಿಕೊಳ್ಳಲಿದ್ದಾರೆ. ತೆಲುಗು ಭಾಷೆಯಲ್ಲಿ ಅವರ ಮೊದಲ ಚಿತ್ರ ಇದಾಗಿದೆ. ಚಿತ್ರಕ್ಕೆ ಸುಜಿತ್​ ಆ್ಯಕ್ಷನ್​​ ಕಟ್​​ ಹೇಳಿದ್ದಾರೆ.

ಚಿತ್ರದಲ್ಲಿ ಬಾಲಿವುಡ್​​ ನಟರಾದ ನೇಲಿ ನಿತಿನ್​​​​​​​ ಮುಖೇಶ್​​, ಅರುಣ್​​​​​​ ವಿಜಯ್​​, ಜಾಕಿ ಶ್ರಾಫ್​​ ಮಿಂಚಲಿದ್ದಾರೆ. ಕನ್ನಡ ಪ್ರಮುಖ ಚಿತ್ರಗಳಾದ ದರ್ಶನ್​​ ನಟನೆಯ ಕುರುಕ್ಷೇತ್ರ ಹಾಗೂ ಸುದೀಪ್​​ ನಟನೆಯ ಪೈಲ್ವಾನ್​​ ಚಿತ್ರಗಳು ಆಗಸ್ಟ್​​ನಲ್ಲಿ ತೆರೆಕಾಣಲಿದ್ದು, ಸಾಹೋ ಚಿತ್ರದಿಂದ ಈ ಚಿತ್ರಗಳಿಗೆ ಪೆಟ್ಟು ಬೀಳುವ ಸಾಧ್ಯತೆಗಳಿವೆ. (ಏಜೆನ್ಸೀಸ್​)