ಕಿರಿಕ್‌ ಹುಡುಗಿಯ ಕಿಸ್ಸಿಂಗ್‌ ವೀಡಿಯೋ ಲೀಕ್‌, ನೆಟ್ಟಿಗರ ಆಕ್ರೋಶ!

ಕಿರಿಕ್‌ ಹುಡುಗಿ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್‌ನಲ್ಲಿ ಫುಲ್‌ ಬ್ಯುಸಿಯಾಗಿದ್ದಾರೆ. ಅವರ ಅಭಿನಯದ ‘ಗೀತ ಗೋವಿಂದಂ’ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿರುವ ರಶ್ಮಿಕಾಗೆ ಒಂದಷ್ಟು ನೆಟ್ಟಿಗರು ಕಿಡಿಕಾರುತ್ತಿದ್ದರೆ, ಮತ್ತಷ್ಟು ಜನ ಬೆಂಬಲ ಸೂಚಿಸುತ್ತಿದ್ದಾರೆ.

ಅದೇನಪ್ಪ ಅಂದರೆ… ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅಭಿನಯದ ಗೀತಗೋವಿಂದಂ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಶ್ಮಿಕಾಗೆ ಇದೀಗ ಸಂಕಷ್ಟ ಎದುರಾಗಿದೆ.

‘ಗೀತ ಗೋವಿಂದಂ’ ಸಿನಿಮಾದ ಟ್ರೇಲರ್​ನಲ್ಲಿ ರಶ್ಮಿಕಾ ಹಾಗೂ ವಿಜಯ್​ ಅವರ ಕೆಮಿಸ್ಟ್ರಿ ನೋಡಿ ನಟ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಬಿರುಕುಂಟಾಗಿದೆ ಎನ್ನುವ ಸುದ್ದಿಗಳು ಕೇಳಿಬಂದಿದ್ದವು. ರಕ್ಷಿತ್‌ ಮತ್ತು ರಶ್ಮಿಕಾ ಇಬ್ಬರು ಈ ವಿಚಾರಗಳಿಗೆ ತೆರೆ ಎಳೆದಿದ್ದರು. ಈ ಮಧ್ಯೆ ಗೀತಾ ಗೋವಿಂದಂ ಚಿತ್ರದ ಕಿಸ್ಸಿಂಗ್‌ ವಿಡಿಯೋ ಲೀಕ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದೆ.

ಕನ್ನಡದ ನಟಿಯಾಗಿ ಹೀಗೆಲ್ಲ ಮಾಡುವುದು ಸರಿಯಲ್ಲ. ನಿಶ್ಚಿತಾರ್ಥವಾಗಿರುವ ಹುಡುಗಿ ಇಂತಹ ದೃಶ್ಯಗಳಲ್ಲಿ ಅಭಿನಯಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಒಂದಷ್ಟು ಜನ ಮೂಗು ಮುರಿದಿದ್ದಾರೆ. ಇನ್ನೂ ಕೆಲವರು ಇದೆಲ್ಲ ಸಿನಿಮಾ ಪ್ರಚಾರಕ್ಕಾಗಿ ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ರಕ್ಷಿತ್‌ ಶೆಟ್ಟಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಗೀತಗೋವಿಂದಂ ಚಿತ್ರದ ಚುಂಬನದ ವಿಡಿಯೋ ಫುಲ್‌ ವೈರಲ್‌ ಆಗುತ್ತಿದೆ. (ಏಜೆನ್ಸೀಸ್)