ಬೆಂಗಳೂರು: ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನ ಬಹುತೇಕ ಇಡೀ ಸೌತ್ ಸಿನಿರಂಗಕ್ಕೆ ತುಂಬಾನೆ ನೋವು ಕೊಟ್ಟ ವಿಷಯ. ಸೌತ್ನ ನಾಲ್ಕು ಸಿನಿರಂಗದ ನಟ–ನಟಿಯರು ಹಾಗೂ ಬಾಲಿವುಡ್ನ ಹಲವು ದಿಗ್ಗಜರು ನಟ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದರು. ಹಲವಾರು ನಟ–ನಟಿಯರು ಅಪ್ಪು ಅವರ ಅಂತಿಮ ದರ್ಶನ ಪಡೆದರು. ಬಳಿಕ ಕೆಲ ಸೆಲೆಬ್ರಿಟಿಗಳು ಪುನೀತ್ ಅವರ ಮನೆಗೆ ಭೇಟಿ ನೀಡಿ ನಟನ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಇನ್ನು, ಇಂದು ಸಂಜೆ ಅಪ್ಪು ಅವರ ನಿವಾಸಕ್ಕೆ ತೆಲುಗು ಚಿತ್ರರಂಗದ ಪ್ರಸಿದ್ಧ ಹಾಸ್ಯ ನಟರಾದ ಬ್ರಹ್ಮಾನಂದಂ ಹಾಗೂ ಅಲಿ ಅವರು ಭೇಟಿ ನೀಡಿದರು.
ಈ ವೇಳೆ ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಹಾಸ್ಯ ನಟರು ನಮನ ಸಲ್ಲಿಸಿ, ಅವರನ್ನು ಸ್ಮರಿಸಿಕೊಂಡರು. ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಹಿನ್ನೆಲೆ ಅಪ್ಪು ಮನೆಗೆ ಭೇಟಿ ನೀಡಿದ ನಟರು, ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ನಟ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಬಳಿಕ, ಅಪ್ಪು ಅವರ ಕುಟುಂಬದ ಜತೆಗೆ ಟಾಲಿವುಡ್ನ ಹಾಸ್ಯ ನಟರು ಕ್ಲಿಕಿಸಿಕೊಂಡ ಫೋಟೋಗಳು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನಟ ಯುವ ರಾಜ್‍ಕುಮಾರ್ ಅವರ ಸಿನಿಮಾದ ತಯಾರಿಯನ್ನು ಕುರಿತು ಕಾಳಜಿಯಿಂದ ಈ ನಟರು ಚರ್ಚೆ ಮಾಡಿರುವುದು ವಿಶೇಷವಾಗಿತ್ತು.
Contents
ಬೆಂಗಳೂರು: ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನ ಬಹುತೇಕ ಇಡೀ ಸೌತ್ ಸಿನಿರಂಗಕ್ಕೆ ತುಂಬಾನೆ ನೋವು ಕೊಟ್ಟ ವಿಷಯ. ಸೌತ್ನ ನಾಲ್ಕು ಸಿನಿರಂಗದ ನಟ–ನಟಿಯರು ಹಾಗೂ ಬಾಲಿವುಡ್ನ ಹಲವು ದಿಗ್ಗಜರು ನಟ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದರು. ಹಲವಾರು ನಟ–ನಟಿಯರು ಅಪ್ಪು ಅವರ ಅಂತಿಮ ದರ್ಶನ ಪಡೆದರು. ಬಳಿಕ ಕೆಲ ಸೆಲೆಬ್ರಿಟಿಗಳು ಪುನೀತ್ ಅವರ ಮನೆಗೆ ಭೇಟಿ ನೀಡಿ ನಟನ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಇನ್ನು, ಇಂದು ಸಂಜೆ ಅಪ್ಪು ಅವರ ನಿವಾಸಕ್ಕೆ ತೆಲುಗು ಚಿತ್ರರಂಗದ ಪ್ರಸಿದ್ಧ ಹಾಸ್ಯ ನಟರಾದ ಬ್ರಹ್ಮಾನಂದಂ ಹಾಗೂ ಅಲಿ ಅವರು ಭೇಟಿ ನೀಡಿದರು.ಈ ವೇಳೆ ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಹಾಸ್ಯ ನಟರು ನಮನ ಸಲ್ಲಿಸಿ, ಅವರನ್ನು ಸ್ಮರಿಸಿಕೊಂಡರು. ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಹಿನ್ನೆಲೆ ಅಪ್ಪು ಮನೆಗೆ ಭೇಟಿ ನೀಡಿದ ನಟರು, ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ನಟ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಬಳಿಕ, ಅಪ್ಪು ಅವರ ಕುಟುಂಬದ ಜತೆಗೆ ಟಾಲಿವುಡ್ನ ಹಾಸ್ಯ ನಟರು ಕ್ಲಿಕಿಸಿಕೊಂಡ ಫೋಟೋಗಳು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನಟ ಯುವ ರಾಜ್‍ಕುಮಾರ್ ಅವರ ಸಿನಿಮಾದ ತಯಾರಿಯನ್ನು ಕುರಿತು ಕಾಳಜಿಯಿಂದ ಈ ನಟರು ಚರ್ಚೆ ಮಾಡಿರುವುದು ವಿಶೇಷವಾಗಿತ್ತು.
ಬ್ಲಾಕ್ ನಲ್ಲಿ ‘ಕೆಜಿಎಫ್ 2′ ಟಿಕೆಟ್! ಬೆಲೆ ಕೇಳಿದರೆ ಶಾಕ್ ಆಗುತ್ತೀರಿ…
ಮಹೇಶ್ ಜತೆ ಮೇಘಾ: ಟಾಲಿವುಡ್ಗೆ ಎಂಟ್ರಿನಾ ಅಥವಾ ಜಾಹೀರಾತಿನ ಶೂಟಿಂಗ್ಗಾ?