ಮುದಗಲ್: ತಲೇಖಾನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಇಬ್ಬರು ಶಿಕ್ಷಕರಿಗೆ 30 ತೊಲ ಬೆಳ್ಳಿ ಉಡುಗೊರೆ ನೀಡುವ ಮೂಲಕ ಗ್ರಾಮಸ್ಥರು ಬೀಳ್ಕೊಟ್ಟರು.
ತೆರೆದ ವಾಹನದ ಮೂಲಕ ಮೆರವಣಿಗೆ ಮಾಡಿದ ವಿದ್ಯಾರ್ಥಿ, ಹಳೆಯ ವಿದ್ಯಾರ್ಥಿಗಳ ಬಳಗ ಮತ್ತು ಗ್ರಾಮಸ್ಥರು ಶಿಕ್ಷಕರಾದ ಹನುಮಂತಪ್ಪ ನಾಯಕ ಹಾಗೂ ಅಶೋಕ ಆಡಿನ ಅವರ ಮೇಲೆ ಹೂವು ಮಳೆ ಸುರಿಸಿದರು.
ಮೆರವಣಿಗೆಯಲ್ಲಿ ಡೊಳ್ಳು, ಗಾಯನ ಗಮನಸೆಳೆಯಿತು. ವೇದಿಕೆಯ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ನೋಡಿ ವಿದ್ಯಾರ್ಥಿಗಳು ಕಣ್ಣೀರಾದರು. ಎಸ್‌ಡಿಎಂಸಿ ಅಧ್ಯಕ್ಷ ವೀರೇಶ್, ಸಿಆರ್‌ಸಿ ಶರಣಪ್ಪ, ಶಿಕ್ಷಕರಾದ ಶಿವಲಿಂಗಯ್ಯ ಹಿರೇಮಠ, ನಾಗರಾಜ, ಸುಭಾಷ, ಧನಕಪ್ಪ, ಕನಕಪ್ಪ, ವೀರನಗೌಡ, ವೆಂಕಟೇಶ ಸೇರಿದಂತೆ ಅನೇಕರಿದ್ದರು.