ನವದೆಹಲಿ: ಭಾರತ ಸೇರಿದಂತೆ ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುವ ಟ್ರೆಂಡ್ ಆರಂಭವಾಗಿದೆ. ಈ ಸಂದರ್ಭದಲ್ಲಿ ಭಾರತದ ಅರ್ಥ ವ್ಯವಸ್ಥೆ ಈ ಬದಲಾವಣೆಗೆ ತಕ್ಕಂತೆ ಬೆಳೆಯಲು ಹಲವು ನೀತಿಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹೇಳಿದ್ದಾರೆ.
ಇಂಡಿಯಾ ಟುಡೇ ಕಾನ್ಕ್ಲೇವ್ 2021ರಲ್ಲಿ ಮಾತನಾಡಿರುವ ಗಡ್ಕರಿ, ಚೀನಾದಲ್ಲಿ ಕಾರುಗಳನ್ನು ತಯಾರಿಸಿ ಭಾರತದಲ್ಲಿ ಮಾರಬಾರದೆಂದು ಟೆಸ್ಲಾ ಕಂಪೆನಿಗೆ ಹೇಳಿರುವುದಾಗಿ ತಿಳಿಸಿದ್ದಾರೆ. “ನೀವು(ಟೆಸ್ಲಾ) ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡಿ ಮತ್ತು ಭಾರತದಿಂದ ರಫ್ತು ಕೂಡ ಮಾಡಿ. ಇದಕ್ಕೆ ನಿಮಗೆ ಯಾವ ಬೆಂಬಲ ಬೇಕೋ ಅದನ್ನು ನಮ್ಮ ಸರ್ಕಾರ ಕೊಡುತ್ತೆ ಎಂದು ಹೇಳಿದ್ದೇನೆ” ಎಂದು ಹೇಳಿರುವ ತಮ್ಮ ಸಂದರ್ಶನದ ವಿಡಿಯೋ ತುಣುಕನ್ನು ಗಡ್ಕರಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಎಚ್.ಡಿ.ಕುಮಾರಸ್ವಾಮಿ ಆಪ್ತನ ಮನೆ ಮೇಲೂ ಐಟಿ ದಾಳಿ
ಜೊತೆಗೇ, ಎಲೆಕ್ಟ್ರಿಕ್ ವಾಹನಗಳ ಹೆಚ್ಚಳದಿಂದ ಲೀಥಿಯಂ ಅವಶ್ಯಕತೆ ಹೆಚ್ಚುತ್ತದೆ. ಚೀನಾ ಅದರ ಮೇಲೆ ನಿಯಂತ್ರಣ ಹೊಂದಿದೆ ಎಂಬ ವದಂತಿಗಳಲ್ಲಿ ಹುರುಳಿಲ್ಲ ಎಂದಿದ್ದಾರೆ. ಭಾರತದಲ್ಲಿ ಲೀಥಿಯಮ್ ಸಾಕಷ್ಟು ಲಭ್ಯವಿದೆ ಹಾಗೂ ಅದರ ಬೆಲೆ ಕೂಡ ಕಡಿಮೆ ಆಗುತ್ತಿದೆ. ಹಳೇ ವಾಹನಗಳ ಗುಜರಿ ನೀತಿಯಿಂದಾಗಿ ಭಾರತದಲ್ಲಿ ಆಟೋಮೊಬೈಲ್ ಉದ್ಯಮದ ಉತ್ಪಾದನೆ ಹೆಚ್ಚಿಸಲು ಅಗತ್ಯವಾದ ಅಲುಮಿನಿಯಂ ಮತ್ತು ಲೀಥಿಯಂಗಳ ಅವಲಭ್ಯತೆ ಹೆಚ್ಚಲಿದೆ ಎಂದಿದ್ದಾರೆ. (ಏಜೆನ್ಸೀಸ್)
VIDEO| ಭಾರತದ ಪ್ರಧಾನಿ ಇಚ್ಛಿಸಿದಲ್ಲಿ ಪಾಕ್ ಕ್ರಿಕೆಟ್ ಮಂಡಳಿ ಕುಸಿಯಬಹುದು ಎಂದ ರಮೀಜ್ ರಾಜ