17 C
Bangalore
Friday, December 13, 2019

ನಿಲ್ಲದ ಬಯಲು ಬಹಿರ್ದೆಸೆ

Latest News

ಸಂಭ್ರಮದ ಅಮೃತೇಶ್ವರ ರಥೋತ್ಸವ

ಅಣ್ಣಿಗೇರಿ: ಪಟ್ಟಣದ ಆರಾಧ್ಯದೈವ ಶ್ರೀ ಅಮೃತೇಶ್ವರ ಮಹಾರಥೋತ್ಸವ ಗುರುವಾರ ಸಂಜೆ ಸಹಸ್ರಾರು ಭಕ್ತರ ಜಯಘೊಷಗಳ ಮಧ್ಯ ಸಡಗರ, ಸಂಭ್ರಮದಿಂದ ಜರುಗಿತು.

ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿ ಬೇಡ

ವಿಜಯವಾಣಿ ಸುದ್ದಿಜಾಲ ಧಾರವಾಡ 2020ರ ಜ. 26ರ ಗಣರಾಜ್ಯೋತ್ಸವದ ಅತಿಥಿಯಾಗಿ ಬ್ರೆಜಿಲ್ ಪ್ರಧಾನಿ ಬೊಲ್ಸೇನಾರೋ ಬರುತ್ತಿರುವುದನ್ನು ರೈತ ಸಂಘ...

ಡಿಸಿಪಿಯಾಗಿ ಬಿ.ಎಸ್. ನೇಮಗೌಡ ಅಧಿಕಾರ ಸ್ವೀಕಾರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್​ನ ಅಪರಾಧ ಮತ್ತು ಸಂಚಾರ ವಿಭಾಗಕ್ಕೆ ವರ್ಗವಾಗಿ ಬಂದಿರುವ ಉಪ ಪೊಲೀಸ್ ಆಯುಕ್ತ(ಡಿಸಿಪಿ) ಬಿ.ಎಸ್. ನೇಮಗೌಡ ಗುರುವಾರ...

ಸೇವೆ ಸ್ಥಗಿತಗೊಳಿಸಿ ಧರಣಿ

ವಿಜಯವಾಣಿ ಸುದ್ದಿಜಾಲ ಕುಂದಗೋಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ತಾಲೂಕಾಸ್ಪತ್ರೆ ಡಿ ದರ್ಜೆ ಗುತ್ತಿಗೆ ನೌಕರರು ಗುರುವಾರ ಸೇವೆ...

ಜ್ಞಾನ ಸಂಸತ್ ಅಧಿವೇಶನ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್​ನಿಂದ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಡಿ. 14ರಂದು ಸಂಜೆ 4ಕ್ಕೆ...

ಕೂಡಲಸಂಗಮ: ಸತತ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿ ದಾಖಲೆ ಬರೆದ ಕೂಡಲಸಂಗಮದಲ್ಲಿ ಚೆಂಬು ಹಿಡಿದು ಹೊರ ಹೋಗುವ ಸಂಸ್ಕೃತಿ ಇನ್ನೂ ನಿಂತಿಲ್ಲ. ದಾಖಲೆಯಲ್ಲಿ ಗ್ರಾಮ ಬಯಲು ಬಹಿರ್ದೆಸೆ ಮುಕ್ತವಾಗಿದ್ದರೂ ಗ್ರಾಮಸ್ಥರು ಚಂಬು ಬಿಟ್ಟಿಲ್ಲ. ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ನಿರಂತರ ಪರಿಶ್ರಮ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ಕೂಡಲಸಂಗಮ, ಕೆಂಗಲ್ಲ, ಕಜಗಲ್ಲ, ವರಗೊಡದಿನ್ನಿ ಗ್ರಾಮಗಳು ಬರುತ್ತವೆ. ಪಂಚಾಯಿತಿ ಒಟ್ಟು ಜನಸಂಖ್ಯೆ 5,888. 937 ಕುಟುಂಬ ಹೊಂದಿದೆ. ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಇಲ್ಲಿಂದಲೇ ಗ್ರಾಮ ವಾಸ್ತವ್ಯ ಆರಂಭಿಸಿದ್ದರು.

ವಾಸ್ತವ್ಯದಂದು ಜಿಪಂ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿ 15 ದಿನಕ್ಕೊಮ್ಮೆ ಭೇಟಿ ನೀಡಿ ಪರಿಶೀಲಿಸುತ್ತೇವೆ ಎಂದು ಹೇಳಿದ ಮಾತು ಹುಸಿಯಾಗಿದೆ. ಈವೆರೆಗೆ ಒಂದು ಬಾರಿಯೂ ವೀಕ್ಷಣೆ ಕಾರ್ಯ ನಡೆದಿಲ್ಲ.

ಗ್ರಾಮದಲ್ಲಿರುವ 937 ಕುಟುಂಬಗಳೂ ಶೌಚಗೃಹ ಹೊಂದಿವೆ ಎಂದು ಗ್ರಾಪಂ ದಾಖಲೆಯಲ್ಲಿದೆ. ಆದರೆ, ವಾಸ್ತವವಾಗಿ ಇನ್ನೂ ಕೆಲ ಕುಟುಂಬಗಳು ಶೌಚಗೃಹ ಹೊಂದಿಲ್ಲ. ನಾಲ್ಕು ತಿಂಗಳಿಂದ ಶೌಚಗೃಹ ನಿರ್ವಿುಸಿಕೊಂಡವರಿಗೆ ಪಂಚಾಯಿತಿ ಅಧಿಕಾರಿಗಳು ಹಣ ಪಾವತಿಸಿಲ್ಲ. ಶೇ.50ರಷ್ಟು ಜನಸಂಖ್ಯೆ ಶೌಚಗೃಹ ಸಮರ್ಪಕವಾಗಿ ಬಳಸಿಕೊಂಡರೆ, ಉಳಿದವರು ಬಯಲು ಶೌಚವನ್ನೇ ಆಶ್ರಯಿಸಿದ್ದಾರೆ. 3 ವರ್ಷದಲ್ಲಿ 637 ಶೌಚಗೃಹ ನಿರ್ವಣವಾಗಿವೆ.

ಜಾಗದ ಕೊರತೆಯಿರುವ ಕುಟುಂಬಗಳಿಗೆ ಗ್ರಾಪಂನಿಂದ ಲಕ್ಷಿ್ಮೕಗುಡಿ ಬಳಿ ಸಾಮೂಹಿಕ ಶೌಚಗೃಹ ನಿರ್ವಿುಸಲಾಗಿದೆ. ಆದರೆ, ಅಲ್ಲಿ ಸಮರ್ಪಕ ನೀರು, ವಿದ್ಯುತ್ ಇಲ್ಲದ್ದರಿಂದಾಗಿ ಒಂದು ದಿನವೂ ಬೀಗ ತೆರೆದಿಲ್ಲ. ಹೀಗಾಗಿ ಶೌಚಗೃಹಗಳು ನಿರುಪಯುಕ್ತವಾಗಿ ಸುತ್ತಲೂ ಮುಳ್ಳು ಕಂಟಿ ಬೆಳೆದಿದೆ.

ಸಾಮೂಹಿಕ ಶೌಚಗೃಹಗಳು ಕಳೆಪೆ ಯಾಗಿದ್ದು, ಅಧಿಕಾರಿಗಳು ತಮ್ಮ ಗುರಿ ಮುಟ್ಟಲು ಶೌಚಗೃಹ ನಿರ್ವಿುಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಗ್ರಾಮ ದಲ್ಲಿನ ರಸ್ತೆಗಳೂ ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗಿದ್ದು, ಕೂಡಲೇ ದುರಸ್ತಿ ಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ವಚ್ಛತೆಯ ಕೊರತೆ: ಗ್ರಾಮದ ಗ್ರಾಪಂ ಮುಂಭಾಗ ರಸ್ತೆಯಲ್ಲಿ ಗ್ರಾಮಸ್ಥರು ಕಸ ಎಸೆಯುತ್ತಿರುವುದರಿಂದ ದುರ್ವಾಸನೆ ಬೀರು ತ್ತಿದೆ. ಕಸ ವಿಲೇವಾರಿಗೆ 12 ತಿಪ್ಪೆಗುಂಡಿಗಳಿದ್ದು, ಸಮರ್ಪಕವಾಗಿ ಕಸ ವಿಲೇವಾರಿಯಾಗದೇ ಕಸದ ರಾಸಿಯೇ ನಿರ್ವಣಗೊಂಡಿದೆ.

ಪ್ರೋತ್ಸಾಹ ಧನ ಕಟ್ಟಡಕ್ಕೆ ಬಳಕೆ: 2015-16ರ ಗಾಂಧಿ ಗ್ರಾಮ ಪುರಸ್ಕಾರದೊಂದಿಗೆ 5 ಲಕ್ಷ ರೂ. ಪ್ರೋತ್ಸಾಹ ಅನುದಾನ ಬಂದಿತ್ತು. ಅದನ್ನು ನೂತನ ಕಾರ್ಯಾಲಯ ಕಟ್ಟಡಕ್ಕೆ ಬಳಸಿದ್ದಾರೆ. 2016-17ರ ಪುರಸ್ಕಾರದ ಹಣ ಇನ್ನೂ ಬಳಸಿಲ್ಲ. ಕೂಡಲಸಂಗಮ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳು ನಾರಾಯಣಪುರ ಜಲಾಶಯ ಹಿನ್ನೀರಿನಲ್ಲಿ ಮುಳುಗಡೆಗೊಂಡಿವೆ. ಮುಳುಗಡೆ ಗ್ರಾಪಂಗೆ ಸರ್ಕಾರ ಸತತ 3 ಬಾರಿ ಪುರಸ್ಕಾರ ಕೊಟ್ಟಿರುವುದು ವಿಶೇಷ.

3 ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದು, ಹೀಗಾಗಿ 3 ಬಾರಿ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ. 10 ರಿಂದ 15 ಬಾರಿ ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಹೊಸ ಕಾರ್ಯಕ್ರಮ ಹಮ್ಮಿಕೊಂಡು ಬಯಲು ಶೌಚಕ್ಕೆ ತೆರಳುವುದನ್ನು ತಪ್ಪಿಸಲಾಗುವುದು.

| ಪರಶುರಾಮ ಮುತ್ತಗಿ ಅಧ್ಯಕ್ಷರು, ಗ್ರಾಪಂ ಕೂಡಲಸಂಗಮ

Stay connected

278,749FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...