More

  ತೊಗರಿ ಕೇಂದ್ರಕ್ಕೆ ಜುಮನಾಳ ಭೇಟಿ

  ನಾಲತವಾಡ: ಪಟ್ಟಣದಲ್ಲಿ ತೊಗರಿ ಖರೀದಿಗೆ ರೈತರ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮಂಗಳವಾರ ಟಿಎಪಿಎಂಎಸ್‌ನಲ್ಲಿ ನಡೆದ ನೋಂದಣಿ ಸ್ಥಳಕ್ಕೆ ಎಪಿಎಂಸಿ ಕಾರ್ಯದರ್ಶಿ ಆರ್.ಎಲ್.ಜುಮನಾಳ ಭೇಟಿ ನೀಡಿ ಪರಿಶೀಲಿಸಿದರು.
  ನಂತರ ಮಾತನಾಡಿದ ಅವರು, ಕೆಲ ರೈತರು ತೊಗರಿ ಬೆಳೆ ಇದ್ದರೂ ಕಾರಣಾಂತರಗಳಿಂದ ನೋಂದಣಿ ಆಗುತ್ತಿಲ್ಲ ಎಂದು ದೂರು ಬಂದ ಹಿನ್ನೆಲೆ ನಾಳೆವರೆಗೆ ಈ ಸಮಸ್ಯೆಯೂ ಪರಿಹಾರವಾಗಲಿದೆ. ಮೊದಲು ಹೆಸರು ನೋಂದಾವಣೆ ಮಾಡಿದ ರೈತರಿಗೆ ಮೊದಲ ಆದ್ಯತೆ ನೀಡಬೇಕಲ್ಲದೆ, ಯಾವುದೇ ಗಲಾಟೆಗಳಾಗದಂತೆ ನೋಡಿಕೊಳ್ಳಬೇಕೆಂದು ಸಿಬ್ಬಂದಿಗೆ ತಿಳಿಸಿದರು. ನಾಲತವಾಡ ಕೃಷಿ ಮಾರುಕಟ್ಟೆ ಸಹಾಯಕ ರವಿ ರಾಠೋಡ, ಮಾಂತು ಗೌಡರ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts