ತೊಗರ್ಸಿ ವೀರಭದ್ರೇಶ್ವರ ಸ್ವಾಮಿ ಧಾರ್ಮಿಕ ಕಾರ್ಯಕ್ರಮ

blank

ಶಿಕಾರಿಪುರ: ತೊಗರ್ಸಿಯಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗಳ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಪ್ರಾತಃಕಾಲ ಶಾಸ್ತ್ರೋಕ್ತ ವಿಧಿ ವಿಧಾನಗಳೊಂದಿಗೆ ಗ್ರಾಮದ ಗಡಿ ಭಾಗದಿಂದ ಮಳೆಹಿರೇಮಠದ ಶ್ರೀ ಮಹಾಂತ ದೇಶೀಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ಕಿರಿಯ ಶ್ರೀ ಅಭಿನವ ಮಹಾಂತ ದೇಶೀಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಆಗಮಿಸಿ ಪೂಜೆ ನೆರವೇರಿಸಲಾಯಿತು.
ನಂತರ ಮಂಗಳವಾದ್ಯಗಳೊಂದಿಗೆ ಹೊರಟ ಗುಗ್ಗಳ ಹೊಸಕವಲಿಯಿಂದ ತೊಗರ್ಸಿ ಕಾಳಮ್ಮ ದೇವಸ್ಥಾನ ಮಾರ್ಗವಾಗಿ ಬಸ್ ನಿಲ್ದಾಣ ದಾಟಿ ತೇರುಬೀದಿ ಮೂಲಕ ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಸಂಪನ್ನಗೊಂಡಿತು. ಗುಗ್ಗಳದ ಅಂಗವಾಗಿ ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಪ್ರತಿ ಮನೆಯಲ್ಲೂ ವೀರಭದ್ರೇಶ್ವರ ಸ್ವಾಮಿಗೆ ಹಣ್ಣು-ಕಾಯಿ ಸಮರ್ಪಿಸಿದರು. ಪ್ರತಿ ಇಪ್ಪತ್ತು ಅಡಿಗಳಿಗೊಮ್ಮೆ ಸ್ವಾಮಿಯ ವೃತ್ತಾಂತವನ್ನು ವಡಪುಗಳ ಮೂಲಕ ಹೇಳಲಾಗುತ್ತಿತ್ತು. ಟ್ರಾೃಕ್ಟರ್ ಮೇಲೆ ಶ್ರೀ ವೀರಭದ್ರೇಶ್ವರ ಸ್ವಾಮಿ ಭಾವಚಿತ್ರವನ್ನಿರಿಸಿ ಘೋಷಣೆಗಳೊಂದಿಗೆ ಗ್ರಾಮದ ತುಂಬ ಮೆರವಣಿಗೆ ಮಾಡಲಾಯಿತು. ಮಧ್ಯಾಹ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಶಾಂತಿ, ನೆಮ್ಮದಿ ನೆಲೆಸಲಿ: ಶ್ರೀ ವೀರಭದ್ರೇಶ್ವರ ಸ್ವಾಮಿ ಅತ್ಯಂತ ಜಾಗೃತನಾಗಿದ್ದಾನೆ. ಕಳೆದ 17 ವರ್ಷಗಳಿಂದ ಗುಗ್ಗಳ ಸಮಿತಿ ಸ್ವಾಮಿಯ ಮಹೋತ್ಸವ ನಡೆಸುತ್ತ ಬಂದಿದೆ. ಮಳೆ-ಬೆಳೆ ಚೆನ್ನಾಗಿ ಆಗಲು, ಜನತೆ ರೋಗ ರುಜಿನಗಳಿಂದ ಮುಕ್ತರಾಗಲು ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಈ ಗುಗ್ಗಳ ಮಾಡಲಾಗುತ್ತದೆ ಎಂದು ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ ಹೇಳಿದರು. ಆಶೀರ್ವಚನ ನೀಡಿದ ಅವರು, ಶ್ರೀ ವೀರಭದ್ರೇಶ್ವರ ಸ್ವಾಮಿಯು ಶಿವಗಣದಲ್ಲಿ ಒಬ್ಬ. ಸ್ವಾಮಿಯ ಕುಂಡದ ದರ್ಶನ ಮಾತ್ರದಿಂದಲೇ ನಮ್ಮ ಪಾಪಕರ್ಮಗಳು ನಾಶವಾಗುತ್ತವೆ. ಮನಸು ರಾಗದ್ವೇಷಗಳಿಂದ ಮುಕ್ತವಾಗುತ್ತದೆ. ನಮಗರಿವಿಲ್ಲದಂತೆ ನಮ್ಮಲ್ಲಿ ದೈವೀ ಚಿಂತನೆಗಳು ಮೂಡುತ್ತವೆ ಎಂದರು.

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…