ಹೂವಿನಹಿಪ್ಪರಗಿ: ಕಳೆದ ಐದಾರು ತಿಂಗಳ ಹಿಂದೆ ಪ್ರತಿ ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ಇದ್ದ ಬೆಲೆಯನ್ನು ದಿಢೀರನೆ ಕಡಿಮೆ ಮಾಡಿದ್ದನ್ನು ವಿರೋಧಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಹಾಗೂ ರೈತರು ಪಟ್ಟಣದ ಉಪ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತೊಗರಿ ಗಿಡಗಳನ್ನು ಬಿಸಾಕಿ ಗುರುವಾರ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರ ಯಾವುದೇ ಬೆಳೆಯನ್ನು ಕೇಂದ್ರ, ರಾಜ್ಯ ಸರ್ಕಾರ ಖರೀದಿಸಲು ಮುಂದಾದಾಗ ರೈತರೊಂದಿಗೆ ಚರ್ಚಿಸಿ ಬೆಲೆ ನಿಗದಿಪಡಿಸಬೇಕು. ಕೃಷಿ ಚಟುವಟಿಕೆಯ ಖರ್ಚು, ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ, ಕೂಲಿ ಕಾರ್ಮಿಕರ ಸಂಬಳ, ಬೆಳೆ ಕಟಾವು, ಮಾರುಕಟ್ಟೆಗೆ ಸಾಗಣೆ ವೆಚ್ಚ ಎಲ್ಲವನ್ನು ಸೇರಿಸಿ ಸರ್ಕಾರ ಯೋಗ್ಯ ಬೆಲೆ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಉಪ ತಹಸೀಲ್ದಾರ್ ಎಸ್.ಕೆ. ಪಾಟೀಲ ಮನವಿ ಸ್ವೀಕರಿಸಿದರು. ತಾಲೂಕು ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ವಿಠ್ಠಲ ಬಿರಾದಾರ, ಚನ್ನಬಸಪ್ಪ ಸಿಂಧೂರ, ಹಣಮಂತರಾಯ ಗುಣಕಿ, ಮಲ್ಲನಗೌಡ ನಾಡಗೌಡ, ಗುರುಸಂಗಪ್ಪ ಶಿವಯೋಗಿ, ಮಹೇಶ ಯಡಳ್ಳಿ, ಭಾಗಪ್ಪ ನಾಟಿಕಾರ, ದಾವುಲಸಾಬ ನದಾಫ, ಹಣಮಂತ ಮುರಾಳ, ಗಿರಿಮಲ್ಲಪ್ಪ ದೊಡಮನಿ, ಬಸವರಾಜ ಚೌಧರಿ, ಭೀಮನಗೌಡ ಪಾಟೀಲ, ಲಂಕೇಶ ತಳವಾರ, ಬಂಗೆಪ್ಪ ಸಾಸನೂರ, ನಿಂಗಣ್ಣ ನಾಡಗೌಡ, ಸಿದ್ದು ಮೇಟಿ, ರ‌್ಯಾಬಪ್ಪಗೌಡ ಪುಲೇಶಿ, ರಾಜೇಸಾಬ ವಾಲಿಕಾರ, ಬಂದಗಿಸಾ ಹಳ್ಳೂರ, ಸಿದ್ದಪ್ಪ ಹಳ್ಳೂರ, ಹಣಮಂತ ಸಾಸನೂರ, ಸಾಯಬಣ್ಣ ತಾಳಿಕೋಟಿ, ಗುರುಪಾದಪ್ಪ ಗುಂಡಣ್ಣನವರ, ಸಿದ್ದಪ್ಪ ಗುಂಡಣ್ಣನವರ, ಶಿವಪ್ಪ ಹುನಗುಂದ, ರುದ್ರಪ್ಪ ಕುಂಬಾರ, ಗುರಸಂಗಪ್ಪ ಶಿವಯೋಗಿ, ಲಕ್ಷ್ಮಣ ಚೌಧರಿ, ಶ್ರೀಶೈಲ ಮಾಳೂರ, ಈರಯ್ಯ ಹಿರೇಮಠ, ಶರಣಬಸಪ್ಪ ಹಾದಿಮನಿ, ಗುರಲಿಂಗಪ್ಪ ಪಡಸಲಗಿ ಪಾಲ್ಗೊಂಡಿದ್ದರು.