More

  ಪೇಜಾವರ ವಿಶ್ವೇಶ ತೀರ್ಥರ ಪ್ರಥಮ ಮಹಾ ಸಮಾರಾಧನೆ; ಇಂದು ಉತ್ತರಾರಾಧನೆ

  ಬೆಂಗಳೂರು: ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳ ಪ್ರಥಮ ಮಹಾಸಮಾರಾಧನೆ ಗುರುವಾರ ನೆರವೇರಿತು. 35 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ಶಿಲಾಮಯ ಗುಡಿಯಲ್ಲಿ ವಿಶ್ವೇಶ ತೀರ್ಥರ ಮೂಲವೃಂದಾವನ ಹಾಗೂ ಗುರು ವಿದ್ಯಾಮಾನ್ಯರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನಾ ಕಾರ್ಯ ನಡೆಯಿತು. ಮುಂಜಾನೆ ಪ್ರತಿಷ್ಠಾಪನಾ ಕಲಶ ಸ್ಥಾಪನೆ, ಪ್ರತಿಷ್ಠಾಪನಾ ಹೋಮ, ಕಲಶಾಧಿವಾಸ ಹೋಮ, ಅಷ್ಟಬಂಧ ಹೋಮ, ವಿಷ್ಣುಗಾಯತ್ರೀ ಹೋಮ. ಬಳಿಕ ಪ್ರಾತಃ 6.30ಕ್ಕೆ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ವೃಂದಾವನರೂಪಿ ನಾರಾಯಣ ಪ್ರತಿಷ್ಠಾಪನೆ, ಶಾಂತಿಮಂತ್ರ ಪಠಣ, ಅಷ್ಟಬಂಧಲೇಪನ, ಕಲಶಾಭಿಷೇಕ, ಅಲಂಕಾರ ಪೂಜೆ, ಉಭಯ ಶ್ರೀಗಳಿಂದ ಪಟ್ಟದದೇವರ ಪೂಜೆ, ದ್ವಾದಶಮೂರ್ತಿ ಆರಾಧನೆ, ಯತಿಹಸ್ತೋದಕ ನಡೆಯಿತು. ರಾತ್ರಿ ದೀಪಾರಾಧನೆ, ಅಷ್ಟಾವಧಾನ ಸೇವೆ ಜರುಗಿತು.

  ಇಂದು ಉತ್ತರಾರಾಧನೆ: ಡಿ.18ರಂದು ಉತ್ತರಾರಾಧನೆ ನಡೆಯಲಿದ್ದು, ಮಹಾಸಂಪ್ರೋಕ್ಷಣೆ, ದ್ವಾದಶ ಕಲಶಾಧಿವಾಸ ಹೋಮ, ಶ್ರೀಗಳಿಂದ ಪಟ್ಟದದೇವರ ಪೂಜೆ, ಮಹಾಪೂಜೆ, ಕ್ಷಮಾಪರಾಧಪೂರ್ವಕ ಕರ್ಮಸಮರ್ಪಣೆ, ಚತುರ್​ವುೂರ್ತಿ ಆರಾಧನೆ, ಹಸ್ತೋದಕ, ಮಹಾಮಂತ್ರಾಕ್ಷತೆ ನೆರವೇರಲಿದೆ.

  See also  ಮಕ್ಕಳ ಮೇಲೆ ಸೀರಮ್​ ಇನ್ಸ್​ಟಿಟ್ಯೂಟ್​ನ ಕರೊನಾ ಲಸಿಕೆಯ ಪ್ರಯೋಗ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts