ಸೈಕ್ಲೋತ್ಸವ ನೋಂದಣಿಗೆ ಇಂದು ಕೊನೆ

ಹುಬ್ಬಳ್ಳಿ: ವಿಆರ್​ಎಲ್ ಲಾಜಿಸ್ಟಿಕ್ ಸಹಯೋಗದಲ್ಲಿ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ವತಿಯಿಂದ ಜ.26ರಂದು ನಗರದ ಕೇಶ್ವಾಪುರ ರಸ್ತೆಯಲ್ಲಿ ಗಿನ್ನೆಸ್ ವಿಶ್ವ ದಾಖಲೆಗಾಗಿ ಸೈಕೊ್ಲೕತ್ಸವ ಏರ್ಪಾಟಾಗಿದ್ದು, ನೋಂದಣಿಗೆ ಜ. 17 ಕೊನೆಯ ದಿನವಾಗಿದೆ. ಕೊನೆಯ ದಿನ ಹತ್ತಿರವಾಗುತ್ತಿದ್ದಂತೆ ನೋಂದಣಿ ಮಾಡಿಸುವ ಸೈಕ್ಲಿಸ್ಟ್​ಗಳ ಸಂಖ್ಯೆಯಲ್ಲಿ ಏರುಮುಖ ಕಂಡಿದೆ. ಬುಧವಾರ ಒಂದೇ ದಿನವೇ 152 ಸೈಕ್ಲಿಸ್ಟ್​ಗಳು ಹೆಸರು ನೋಂದಣಿ ಮಾಡಿಸಿದ್ದಾರೆ. ಹುಬ್ಬಳ್ಳಿಯಲ್ಲಿಯೇ ಸುಮಾರು 900ಕ್ಕೂ ಹೆಚ್ಚು ಸೈಕ್ಲಿಸ್ಟ್​ಗಳು ಹೆಸರು ನೋಂದಣಿ ಮಾಡಿಸಿದ್ದು, 1800 ಗಡಿ ದಾಟಿದೆ. ಈಗಾಗಲೇ ಸೈಕ್ಲಿಸ್ಟ್​ಗಳ ಟೆಸ್ಟ್ ಪ್ರಕ್ರಿಯೆ ಕೊನೆಯ ಘಟ್ಟ ತಲುಪಿದೆ. ಟೆಸ್ಟ್​ಗೊಳಪಟ್ಟ ಸೈಕ್ಲಿಸ್ಟ್​ಗಳಿಗೆ ಗ್ರೀನ್ ಕಾರ್ಡ್ ಕೊಡಲಾಗಿದೆ. ಬಾಗಲಕೋಟೆ, ವಿಜಯಪುರ, ಶಿವಮೊಗ್ಗ, ಬೆಳಗಾವಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸೈಕ್ಲಿಸ್ಟ್​ಗಳು ಹೆಸರು ನೋಂದಣಿ ಮಾಡಿಸಿದ್ದಾರೆ.

ಕೊಯಮತ್ತೂರ, ಭಾರಾಮತಿ, ಸಾಂಗ್ಲಿ, ಪುಣೆ, ಬೆಂಗಳೂರು, ಸೇಲಂ, ಚೆನ್ನೈ, ಭುವನೇಶ್ವರ, ಹೈದ್ರಾಬಾದ್​ನಿಂದ ಸೈಕ್ಲಿಸ್ಟ್​ಗಳು ಆಗಮಿಸುತ್ತಿದ್ದಾರೆ. ಜ. 26ರವರೆಗೆ ಇವರಿಗೆಲ್ಲ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಆಕ್ಸ್​ಫರ್ಡ್ ಕಾಲೇಜ್ ಎದುರಿನ ಜಾಗದಲ್ಲಿ ಜ. 20ರಂದು ಮೌಖಿಕ ಸಂದರ್ಶನ ನಡೆಯಲಿದೆ. ಹು-ಧಾ ಸೈಕ್ಲಿಸ್ಟ್​ಗಳು ಜ. 25ರಂದು ಜೆರ್ಸಿ, ಬಿಬ್, ಗ್ರೀನ್​ಕಾರ್ಡ್ ಪಡೆಯಬಹುದು. ಹೊರಗಿ ನಿಂದ ಬರುವ ಸೈಕ್ಲಿಸ್ಟ್​ಗಳು ಜ. 26ರಂದು ಬೆಳಗ್ಗೆ

6.30ರಿಂದ 10.30ರವರೆಗೆ ಪಡೆಯಬಹುದು. ನೋಂದಣಿಗೆ www.hbcriders.com ಹಾಗೂ ಮೊ. 9108507179ಗೆ ಸಂಪರ್ಕಿಸಬಹುದು ಎಂದು ಕ್ಲಬ್ ನಿರ್ದೇಶಕ ಆನಂದ ಬೇದ್ ತಿಳಿಸಿದ್ದಾರೆ.