ಗಡಿ ವಿಷಯದಲ್ಲಿ ಎಂಇಎಸ್ ಬೆಂಬಲಿಸಲು ಆಗ್ರಹ

ಖಾನಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪರ ನಿಲುವು ಹೊಂದಿರುವ ಎಂಇಎಸ್ ಸಂಘಟನೆಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಮಾಜಿ ಶಾಸಕ ಅರವಿಂದ ಪಾಟೀಲ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಆಗ್ರಹಿಸಿದರು.

ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಭಾನುವಾರ ಬೆಳಗಾವಿಯ ಎಂಇಎಸ್ ಮುಖಂಡರ ನಿಯೋಗದೊಂದಿಗೆ ಮಹಾರಾಷ್ಟ್ರದ ನಾಯಕರನ್ನು ಭೇಟಿಯಾಗಿ ಈ ಬೇಡಿಕೆಯನ್ನು ಮಂಡಿಸಿದ ಅವರು, ಕರ್ನಾಟಕ ಸರ್ಕಾರ ಗಡಿಭಾಗದ ಮರಾಠಿಗರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

ಗಡಿವಿವಾದ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗ ಮಹಾರಾಷ್ಟ್ರದ ಗಡಿಭಾಗದ ಜನರ ಮೇಲೆ ಒತ್ತಾಯಪೂರ್ವಕವಾಗಿ ಕನ್ನಡ ಭಾಷೆಯನ್ನು ಹೇರುತ್ತಿದೆ. ಕರ್ನಾಟಕದ ಗಡಿಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಮಹಾರಾಷ್ಟ್ರ ಪರ ಠರಾವು ಅಂಗೀಕರಿಸಿದ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಂಡು ಸದಸ್ಯತ್ವ ರದ್ದುಗೊಳಿಸುತ್ತಿದೆ. ಹೀಗಾಗಿ ಗಡಿಯಲ್ಲಿ ಮರಾಠಿ ಭಾಷಿಕರು ನೆಮ್ಮದಿ ಜೀವನವನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಗಡಿ ವಿಷಯದಲ್ಲಿ ಎಂಇಎಸ್ ಬೆಂಬಲಿಸಿ ತೀರ್ಪು ಮಹಾರಾಷ್ಟ್ರದ ಪರವಾಗಿ ಬರುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸಮರ್ಥ ವಾದ ಮಂಡಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಬೇಕು ಎಂದು ಕೋರಿದರು.

ನಿಯೋಗ ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಧನಂಜಯ ಮುಂಡೆ, ಶಿಕ್ಷಣ ಮಂತ್ರಿ ವಿನೋದ ತಾವಡೆ, ಸಚಿವ ಚಂದ್ರಕಾಂತದಾದಾ ಪಾಟೀಲ ಮತ್ತಿತರರು ಭೇಟಿಯಾಗಿ ಗಡಿ ವಿಷಯದಲ್ಲಿ ಎಂಇಎಸ್ ಬೆಂಬಲಿಸಲು ಕೋರಿತು. ನಿಯೋಗದಲ್ಲಿ ಎಂಇಎಸ್ ಮುಖಂಡರಾದ ದೀಪಕ ದಳವಿ, ಮನೋಹರ ಕಿಣೇಕರ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *