ಇಂದು ಭೂಲಕ್ಷ್ಮೀ ವರಾಹಸ್ವಾಮಿ ರಥೋತ್ಸವ

ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಭೂಲಕ್ಷ್ಮೀ ವರಾಹಸ್ವಾಮಿ ರಥೋತ್ಸವ ಮಾ.20 ರಂದು ನಡೆಯಲಿದೆ.

ಅಂದು ಬೆಳಗ್ಗೆ 10:59 ರಿಂದ 11:35ರವರೆಗೆ ಸಲ್ಲುವ ವೃಷಭ ಲಗ್ನದಲ್ಲಿ ರಥೋತ್ಸವ ನಡೆಯಲಿದೆ. ದೇಗುಲದಿಂದ ಹೊರಡುವ ರಥ ಪಟ್ಟಣದ ದೊಡ್ಡ ಅಂಗಡಿ ಬೀದಿಯಲ್ಲಿ ಚಲಿಸಿ ಮತ್ತೆ ದೇವಸ್ಥಾನ ಆವರಣ ತಲುಪಲಿದೆ. ರಥೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಆರಂಭವಾಗಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.

ಸಂಜೆ 7 ಗಂಟೆಗೆ ಪಟ್ಟಣದ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯದ ಮುಂಭಾಗ ಕಾಮದಹನ ನಡೆಯಲಿದೆ.