ವಿಜಯಪುರ : ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜೂ. 9 ರಂದು ಬೆಳಗ್ಗೆ 11 ರಿಂದ ರಾತ್ರಿ 8 ರವರೆಗೆ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರ 78ನೇ ಜನ್ಮದಿನದ ಸಂಭ್ರಮದ ಹಿನ್ನೆಲೆ “ಬಾಲೂ ಸರ್ ನೆನಪಿನಂಗಳದಲ್ಲಿ’ ಎಂಬ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ಥಳಿಯ ಸಂಗೀತ ಶಿಣ ಸಂಸ್ಥೆ, ಸನ್ಲೈಟ್ ಮೆಲೋಡೀಸ್, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಜಿಲ್ಲಾ ಯುವ ಪರಿಷತ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಹೆಸರಾಂತ ಗಾಯಕ& ಗಾಯಕಿಯರು ಈ ಮಹಾನ್ ಗಾಯಕ ಹಾಡಿರುವ ಗೀತೆಗಳನ್ನು ಹಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಜಿಲ್ಲೆಯ ಸಂಗೀತಾಸಕ್ತರು ಭಾಗವಹಿಸುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ. 8951790555 ಕ್ಕೆ ಸಂಪರ್ಕಿಸುವಂತೆ ಆಯೋಜಕರಾದ ಪ್ರಕಾಶ ಮಠ ಮತ್ತು ಜಿಲ್ಲಾ ಯುವ ಪರಿಷತ್ತಿನ ಅಧ್ಯಕ್ಷ ಶರಣು ಸಬರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.