ಹನಗೋಡು: ಕಾಮಗೌಡನಹಳ್ಳಿಯಲ್ಲಿ ತಂಬಾಕು ಹದ ಮಾಡುತ್ತಿದ್ದಾಗ ಬೆಂಕಿ ತಗುಲಿ ಹೊಗೆಸೊಪ್ಪಿನೊಂದಿಗೆ ಬ್ಯಾರನ್ ಛಾವಣಿ ಸಂಪೂರ್ಣ ಸುಟ್ಟು ಹೋಗಿದೆ.
ರೈತ ಸೋಮೇಗೌಡರ ತಂಬಾಕು ಹದ ಮಾಡುವ ಬ್ಯಾರನ್‌ಗೆ ಹೊಗೆಸೊಪ್ಪು ಏರಿಸಿದ್ದ ವೇಳೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಕರಕಲಾಗಿದ್ದು, ಗ್ರಾಮಸ್ಥರ ಮಾಹಿತಿ ಆಧರಿಸಿ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿ ಅಕ್ಕಪಕ್ಕಕ್ಕೆ ಹರಡುವುದನ್ನು ತಪ್ಪಿಸಿದ್ದಾರೆ. ಬ್ಯಾರನ್ ಛಾವಣಿ ಬೆಂಕಿಗಾಹುತಿಯಾಗಿದೆ. ಸಂಕಷ್ಟಕ್ಕೊಳಗಾಗಿರುವ ತಂಬಾಕು ಬೆಳೆಗಾರನ ನೆರವಿಗೆ ಮಂಡಳಿ ಮುಂದಾಗಬೇಕೆಂದು ಜಿಲ್ಲಾ ಎಸ್.ಸಿ,ಎಸ್.ಟಿ.ಜಾಗೃತಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಮನವಿ ಮಾಡಿದ್ದಾರೆ.