ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿ

ಯಾದಗಿರಿ: ಗುರುಮಠಕಲ್ ಪಟ್ಟಣದಲ್ಲಿ ಇತ್ತೀಚೆಗೆ ಜಿಲ್ಲಾ ಸವರ್ೇಕ್ಷಣಾ ಅಧಿಕಾರಿ ಡಾ. ವಿವೇಕಾನಂದ ಟೆಂಗೆ ನೇತೃತ್ವದಲ್ಲಿ ವಿವಿಧ ಅಂಗಡಿ ಮತ್ತು ಪಾನ್ಶಾಪ್ಗಳ ಮೇಲೆ ದಾಳಿ ನಡೆಸಿದ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ 12 ಪ್ರಕರಣಗಳನ್ನು ದಾಖಲಿಕೊಂಡಿದ್ದಾರೆ.

ಜಿಲ್ಲಾ ಸಲಹೆಗಾರ ಮಹಾಲಕ್ಷ್ಮೀ ಸಜ್ಜನ್ ಮಾತನಾಡಿ, ಜಿಲ್ಲೆಯಲ್ಲಿ ತಂಬಾಕು ಮಾರಾಟ ಕಾನೂನು ಬಾಹಿರವಾಗಿ ನಡೆಯುತ್ತಿದೆ. ಅಂಗಡಿಗಳು ಮತ್ತು ಪಾನ್ ಶಾಪ್ಗಳು ವಿಶೇಷವಾಗಿ ತಂಬಾಕು ಉತ್ಪನ್ನಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಕ್ಕಳಿಗೆ ಕಾಣುವ ಹಾಗೆ ಮಾರಾಟ ಮಾಡಬಾರದು. ಒಂದು ವೇಳೆ ಮಾರುವುದು ಕಂಡುಬಂದಲ್ಲಿ ಕಾನೂನಿನ ಪ್ರಕಾರ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಆಕಶರ್ಿಸುವಂತೆ ತಂಬಾಕು ಉತ್ಪನ್ನಗಳ ಬೋಡರ್್ ಪ್ರದಶರ್ಿಸುವಂತಿಲ್ಲ. ಹಾಗೊಂದು ವೇಳೆ ಪ್ರದಶರ್ಿಸಿದರೆ, ಅಂಥ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಈ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ ಎಂದರು.

ದಾಳಿಯಲ್ಲಿ ಪರಿಸರ ಇಂಜಿನಿಯರ್ ಪ್ರಶಾಂತ, ಪೊಲೀಸ್ ಕಾನ್ಸ್ಟೇಬಲ್ ರವಿ ರಾಠೋಡ್, ಹಿರಿಯ ಆರೋಗ್ಯ ಮೇಲ್ವಿಚಾರಕ ರಾಮುಲು, ನೈರ್ಮಲ್ಯ ನಿರೀಕ್ಷಕ ರಿಯಾಜ್ ಇದ್ದರು.

Leave a Reply

Your email address will not be published. Required fields are marked *