ನಿಪ್ಪಾಣಿ: ವಿದ್ಯಾ ಸಂವರ್ಧಕ ಮಂಡಳ ಸ್ಥಾಪನೆಯಾಗಿ 65 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಫೆಬ್ರವರಿ.2ರಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು
ವಿಎಸ್‌ಎಂ ಫೌಂಡೇಷನ್ ಅಧ್ಯಕ್ಷ ರುದ್ರಕುಮಾರ ಕೋಠಿವಾಲೆ ತಿಳಿಸಿದರು.
ಪಟ್ಟಣದ ವಿಎಸ್‌ಎಂ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾ ಸಂವರ್ಧಕ ಮಂಡಳ ಹಾಗೂ ವಿಎಸ್‌ಎಂ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ.2ರಂದು ಬೆಳಗ್ಗೆ 10ಕ್ಕೆ ವಿಎಸ್‌ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ (ವಿಎಸ್‌ಎಂಎಸ್‌ಆರ್‌ಕೆಐಟಿ)ದಲ್ಲಿ ಹಳೇ ವಿದ್ಯಾರ್ಥಿಗಳ ಸಮ್ಮೇಳನ ಜರುಗಲಿದ್ದು, 1,500ಕ್ಕೂ ಅಧಿಕ ಹಳೇ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ.3ರಂದು ಬೆಳಗ್ಗೆ 10ಕ್ಕೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
ಫೆಬ್ರವರಿ.4ರಂದು ಬೆಳಗ್ಗೆ 10ಕ್ಕೆ ಭಾಷಣಕಾರ ನಿತಿನ ಪಾಟೀಲ ಅವರಿಂದ ಉಪನ್ಯಾಸ, ಫೆ.5ರಂದು ಬೆಳಗ್ಗೆ 10ಕ್ಕೆ ಮಂಡಳದ ಹಳೆಯ ಆವರಣದಲ್ಲಿ ಸಿಇಟಿ, ಜೆಇಇ, ನೀಟ್ ಪರೀಕ್ಷೆ ಕುರಿತು ಕಾರ್ಯಾಗಾರ, ಫೆ.6ರಂದು ಆರೋಗ್ಯ ತಪಾಸಣೆ ಉಚಿತ ಶಿಬಿರ, ಫೆ.7ರಂದು ವಿಎಸ್‌ಎಂಎಸ್‌ಆರ್‌ಕೆಐಟಿ ಆವರಣದಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ, ಫೆ.8ರಂದು ಬೆಳಗ್ಗೆ 6ಕ್ಕೆ ಹಳೆಯ ಆವರಣದಿಂದ ವಿಎಸ್‌ಎಂಎಸ್‌ಆರ್‌ಕೆಐಟಿ ಆವರಣದವರೆಗೆ ಮ್ಯಾರಥಾನ್, ಟರ್ ಮೈದಾನದ ಉದ್ಘಾಟನೆ, ಸಂಜೆ ಗಾಯಕ ರಾಜೇಶ ಕೃಷ್ಣನ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಮಂಡಳ ಅಧ್ಯಕ್ಷ ಚಂದ್ರಕಾಂತ ತಾರಳೆ, ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ಉಪಾಧ್ಯಕ್ಷ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಭರತ ಕುರಬೆಟ್ಟಿ, ಸಂಜಯ ಮೊಳವಾಡೆ, ಅವಿನಾಶ ಪಾಟೀಲ, ಫೌಂಡೇಷನ್ ಸಂಚಾಲಕ ಸಂತೋಷ ಕೋಠಿವಾಲೆ, ರೋಹನ ಕೋಠಿವಾಲೆ, ವಿನಾಯಕ ಪಾಟೀಲ, ಡಾ.ಸಿದ್ಧಗೌಡ ಪಾಟೀಲ, ಡಾ.ನಿಂಗಪ್ಪ ಮಾದಣ್ಣವರ, ಯಲ್ಲಪ್ಪ ಹಂಡಿ, ಜ್ಞಾನದೇವ ನಾಯಿಕ ಇತರರಿದ್ದರು.