ಶಂಕಿತ ಡೆಂಘೆ ಜ್ವರಕ್ಕೆ ಇಬ್ಬರು ಬಲಿ

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಡೆಂೆ ದ.ಕ. ಜಿಲ್ಲೆಯಲ್ಲಿ ಮತ್ತೆರಡು ಬಲಿ ಪಡೆದುಕೊಂಡಿದೆ. ಸೋಮೇಶ್ವರದ ಉದಯಚಂದ್ರ ಎಂಬುವರ ಪತ್ನಿ ಸುಮತಿ (35) ಹಾಗೂ ಉಳ್ಳಾಲ ಸಮೀಪ ಚೆಂಬುಗುಡ್ಡೆ ನಿವಾಸಿ ಜಯಪ್ರಕಾಶ್ ಗಟ್ಟಿ (47) ಶಂಕಿತ ಡೆಂೆ ಜ್ವರದಿಂದ ಬುಧವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಶಂಕಿತ ಡೆಂೆ ಜ್ವರಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ದೇರಳಕಟ್ಟೆ ಯೇನೆಪೋಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸುಮತಿ ತೀವ್ರ ಜ್ವರದಿಂದ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ಅವರಿಗೆ ಜಾಂಡಿಸ್ ಇರುವ ಬಗ್ಗೆ ತಿಳಿದು ಬಂದಿತ್ತು. ಬಳಿಕ ಆರೋಗ್ಯದಲ್ಲಿ ಏರುಪೇರಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಟೆಂಪೋ ಚಾಲಕರಾಗಿದ್ದ ಜಯಪ್ರಕಾಶ್ ಗಟ್ಟಿ ಜ್ವರದಿಂದ ಬಳಲುತ್ತಿದ್ದರು. ಅವರನ್ನು ನಗರದ ವಿವಿಧ ಮೂರು ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಿದರೂ ಅವರ ರಕ್ತದ ಪ್ಲೇಟ್‌ಲೆಟ್‌ನಲ್ಲಿ ವ್ಯತ್ಯಾಸವಾದ ಕಾರಣ ಮೃತಪಟ್ಟಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಈ ಎರಡು ಸಾವಿನ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್‌ಚಂದ್ರ, ‘ಸುಮತಿಯವರು ಬ್ಯಾಕ್ಟೀರಿಯಲ್ ಇನ್‌ೆಕ್ಷನ್‌ನಿಂದ ಮೃತಪಟ್ಟಿದ್ದಾರೆ. ಅವರ ರಕ್ತದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ 1 ಲಕ್ಷಕ್ಕೂ ಹೆಚ್ಚು ಇರುವುದರ ಜತೆಗೆ ಅವರಲ್ಲಿ ಡೆಂೆ ಲಕ್ಷಣ ಇರಲಿಲ್ಲ. ವೈದ್ಯರಿಂದ ವರದಿ ಬಂದ ಬಳಿಕ ಜಯಪ್ರಕಾಶ್ ಗಟ್ಟಿ ಸಾವಿನ ನಿಖರ ಕಾರಣ ತಿಳಿಯಲಿದೆ’ ಎಂದು ತಿಳಿಸಿದ್ದಾರೆ.

 ಡೆಂೆ ಎಚ್‌ಎಲ್‌ಎಚ್: ಜಯಪ್ರಕಾಶ್ ಗಟ್ಟಿ ಅವರಿಗೆ ಡೆಂಘೆ ಎಚ್‌ಎಲ್‌ಎಚ್ ಆಗಿತ್ತು. ಇಂತಹ ಪ್ರಕರಣ ತೀರಾ ಅಪರೂಪದ್ದಾಗಿದ್ದು, ಇದು ಬಿಳಿರಕ್ತಕಣವನ್ನು ಕೊಲ್ಲುತ್ತದೆ. ಆದರೂ ಸಂಪೂರ್ಣ ವರದಿ ಬಂದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ತಿಳಿಯಬಹುದು ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ನಗರದ ಕೊಡಿಯಾಲ್‌ಬೈಲ್‌ನಲ್ಲಿ 8ರ ಹರೆಯದ ಬಾಲಕ ಕೃಷ್, ಗುಜ್ಜರಕೆರೆ ಬಳಿ ನಿವಾಸಿ ವಿದ್ಯಾರ್ಥಿನಿ ಶ್ರದ್ಧಾ ಕೆ. ಶೆಟ್ಟಿ ಹಾಗೂ ಪತ್ರಕರ್ತ ನಾಗೇಶ್ ಪಡು ಅವರಲ್ಲಿಯೂ ಜ್ವರದ ಜತೆ ಎಚ್‌ಎಲ್‌ಎಚ್ ಎಂಬ ಸೋಂಕಿನ ಅಂಶ ಕಂಡು ಬಂದಿತ್ತು.

 ಮನೆ ಸುತ್ತ ಫಾಗಿಂಗ್: ಮೃತಪಟ್ಟ ಇಬ್ಬರ ಮನೆ ಹಾಗೂ ಸುತ್ತಮುತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿದ್ದು, ಫಾಗಿಂಗ್ ನಡೆಸಲಾಗಿದೆ. ನೀರು ನಿಲ್ಲುವ ಸ್ಥಳಗಳನ್ನು ಪತ್ತೆ ಹಚ್ಚಿ ನೀರು ನಿಲ್ಲದಂತೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಶಂಕಿತ ಡೆಂೆಯಿಂದ ಆಸ್ಪತೆಗೆ ಸೇರುವವರ ಸಂಖ್ಯೆ ಇನ್ನೂ ಯಥಾ ಸ್ಥಿತಿಯಲ್ಲಿದ್ದು, ದಿನಕ್ಕೆ ಕನಿಷ್ಠ 50 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಆರೋಗ್ಯ ಇಲಾಖೆ ಎಷ್ಟು ಕಾರ್ಯಾಚರಣೆ ನಡೆಸಿದರೂ, ಡೆಂೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಸಫಲವಾಗಿಲ್ಲ. ಈ ನಡುವೆ ಬಿಸಿಲು ಮತ್ತು ಮಳೆಯ ವಾತಾವರಣ ಡೆಂೆಗೆ ಪೂರಕವಾಗಿ ಮಾರ್ಪಟ್ಟಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *