ಮುನವಳ್ಳಿ: ರೈತರ ಜೀವನಾಡಿ ಮಲಪ್ರಭೆ ನದಿ ಭರ್ತಿಯಾಗಿರುವುದು ರೈತರಲ್ಲಿ ಸಂತೋಷ ಮೂಡಿಸಿದ್ದು, ಕಾಲಕ್ಕೆ ತಕ್ಕಂತೆ ಮಳೆಯಾಗಿ ಬೆಳೆ ಬಂದು ನಾಡು ಸಮೃದ್ಧಿ ಹೊಂದಲಿ ಎಂದು ರೈತಪರ ಹೋರಾಟಗಾರ ಪಂಚನಗೌಡ ದ್ಯಾಮನಗೌಡರ ಆಶಿಸಿದರು.
ಪಟ್ಟಣದ ಮಲಪ್ರಭಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕರ್ನಾಟಕ ರೈತ ಸೇನಾ ಸವದತ್ತಿ ತಾಲೂಕು ಘಟಕದ ವತಿಯಿಂದ ಶುಕ್ರವಾರ ಉತ್ತರ ಕರ್ನಾಟಕದ ಜೀವನದಿ ಪಟ್ಟಣದ ಮಲಪ್ರಭಾ ನದಿಗೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದರು.
ಹೂಲಿಕಟ್ಟಿ ಗವಿ ಅಜ್ಜ ಸಾನ್ನಿಧ್ಯ ವಹಿಸಿದ್ದರು. ವೇ.ಮೂ. ಮಡಿವಾಳಸ್ವಾಮಿ ಹಿರೇಮಠ, ವೇ.ಮೂ. ಎಂ.ಕೆ.ಹಿರೇಮಠ. ಮಹಾಂತಶಾಸ್ತ್ರಿ ಸಂಬಾಳಮಠ, ರೈತಸೇನೆ ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ಪಂಚಪ್ಪ ಹನಸಿ, ಡಾ.ನಯನಾ ಭಸ್ಮೆ, ಬಸಪ್ಪ ಮೇಟಿ, ಶೇಖರ ಗೋಕಾಂವಿ, ಪಂಚಪ್ಪ ಗುಂಡ್ಲೂರ, ಕಲ್ಲಪ್ಪ ನಲವಡೆ, ಪಂಚು ಬಾರಕೇರ, ಶ್ರೀಕಾಂತ ಮಲಗೌಡ್ರ, ಸುಭಾಸ ಗೀದಿಗೌಡ್ರ, ಪ್ರಕಾಶ ನಲವಡೆ, ಗುರು ಚಂದರಗಿ, ಸುರೇಶ ಜಾವೂರ, ಮಹಾಂತೇಶ ಕುರಬಗಟ್ಟಿ, ನಾಗರಾಜ ನೇಗಿನಾಳ, ಪಂಚಪ್ಪ ಅಬ್ಬಾರ, ಪಂಚು ಸುಣಗಾರ, ಮಲ್ಲೇಶ ಸುಳೆಭಾವಿ, ಬಸು ಶಿಗ್ಗಾಂವಿ, ಆನಂದ ಬಕರಿ ಇತರರು ಇದ್ದರು.