More

    ಜೀವನ ಖುಷಿಖುಷಿಯಾಗಿರಲು ನಿರಂತರ ಚಟುವಟಿಕೆಯೇ ಟಾನಿಕ್

    ಜೀವನ ಖುಷಿಖುಷಿಯಾಗಿರಲು ನಿರಂತರ ಚಟುವಟಿಕೆಯೇ ಟಾನಿಕ್ನನಗೆ ವಯಸ್ಸಾದರೆ ಬಹಳ ಕಷ್ಟ ಅಂತ ಹೆಂಡತಿ ಹೇಳುತ್ತಿರುತ್ತಾಳೆ. ಏಕೆಂದರೆ, ನನಗೆ ಸುಮ್ಮನೆ ಕೂರುವುದಕ್ಕೆ ಆಗುವುದಿಲ್ಲ. ಸದಾ ಏನಾದರೊಂದು ಮಾಡುತ್ತಿರಬೇಕು, ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು. ವಯಸ್ಸಾದ ಮೇಲೆ ಹಾಗೆ ಕೆಲಸ ಮಾಡುವುದು ಕಷ್ಟವಾಗಬಹುದು; ಆಗ ನಾನು ಏನು ಮಾಡಬಹುದು ಎಂಬ ಕುತೂಹಲ ಆಕೆಗೆ. ನನಗೆ ಆ ಭಯವಿಲ್ಲ. ವಯಸ್ಸಾದ ಮೇಲೂ ಏನೇನು ಮಾಡಬಹುದು ಎಂಬುದನ್ನು ಈಗಲೇ ಪ್ಲಾನ್ ಮಾಡಿಕೊಂಡಿದ್ದೇನೆ.

    ನಾನು ಅಂತಲ್ಲ, ಯಾರೂ ಯಾವತ್ತೂ ಸುಮ್ಮನೆ ಕೂರಬಾರದು, ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು ಎಂದು ಬಯಸುತ್ತೇನೆ. ಸುಮ್ಮನೆ ಕೂತಷ್ಟು ಮನುಷ್ಯ ನೆಗೆಟಿವ್ ಆಗುತ್ತ ಹೋಗುತ್ತಾನೆ. ಬೇಡದ ವಿಷಯಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಒಂದು ದಿನಕ್ಕೆ ನಾವು ಫೋನ್​ನಲ್ಲಿ ಎಷ್ಟು ಹೊತ್ತು ಕಾಲ ಕಳೆಯುತ್ತೇವೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಕೆಲಸದಲ್ಲಿ ತೊಡಗಿಸಿಕೊಂಡಷ್ಟು ನಾವು ್ಛ್ಞಠ್ಠಿ್ಞ ಆಗುತ್ತ ಹೋಗುತ್ತೇವೆ. ಉಟಛ್ಟಿಜಿಛ್ಞಿ್ಚ ಞಚkಛಿಠ ಞಚ್ಞ ಟಛ್ಟಿ್ಛ್ಚ ಎನ್ನುವ ಹಾಗೆ ನಾವು ಹೊಸ ಹೊಸ ಅನುಭವಗಳನ್ನು ಪಡೆಯುತ್ತ ಹೋಗಬೇಕು. ಹೊಸ ಜನರ ಜತೆಗೆ ಬೆರೆಯುತ್ತ ಹೋಗಬೇಕು. ನಮಗೆ ತಿಳಿಯದ ವಿಚಾರಗಳನ್ನು ಛ್ಡಿಟ್ಝಟ್ಟಛಿ ಮಾಡುತ್ತ ಹೋದಂತೆ ಹೊಸ ವಿಷಯಗಳನ್ನು ಕಲಿಯುತ್ತೇವೆ. ಇದು ನಮ್ಮಲ್ಲಿ ಪಾಸಿಟಿವಿಟಿ ಹುಟ್ಟುಹಾಕುತ್ತದೆ.

    ಮೊದಲೇ ಹೇಳಿದಂತೆ, ಕೆಲಸವಿಲ್ಲದೆ ನನಗೆ ಸುಮ್ಮನೆ ಕೂರುವುದಕ್ಕೆ ಆಗುವುದಿಲ್ಲ. ಒಂದು ದಿವಸ ಸುಮ್ಮನೆ ಮನೆಯಲ್ಲಿದ್ದೆ ಎಂದರೆ, ನಾನೇನೂ ಮಾಡುತ್ತಿಲ್ಲ ಎನಿಸುವುದಕ್ಕೆ ಶುರುವಾಗುತ್ತದೆ. ಲಾಕ್​ಡೌನ್ ಸಮಯದಲ್ಲಿ ಎರಡು ತಿಂಗಳ ಕಾಲ ಊರಿಗೆ ಹೋಗಿದ್ದೆ. ಆರಂಭದಲ್ಲಿ ಚೆನ್ನಾಗಿತ್ತು. ದಿನಗಳು ಉರುಳಿದಂತೆ ಸುಸ್ತಾಯಿತು. ಲಾಕ್​ಡೌನ್ ಕಾಯಂ ಆದರೆ ಜೀವನ ಹೇಗೆ? ಸಿನಿಮಾ ಮಾಡೋದು ಹೇಗೆ? ಎಂಬ ಯೋಚನೆ ಬಂತು. ತಕ್ಷಣವೇ ಬೆಂಗಳೂರಿಗೆ ಹೊರಟೆ. ನಮ್ಮ ತಂಡದವರನ್ನೆಲ್ಲ ಕರೆಸಿ ಮೀಟಿಂಗ್ ಮಾಡಿದೆ. ನಮ್ಮ ಬಳಿ ಎಷ್ಟು ಕಥೆಗಳಿವೆ ಮತ್ತು ಇಂತಹ ಸಂದರ್ಭದಲ್ಲಿ ಯಾವ ತರಹದ ಚಿತ್ರ ಮಾಡಬಹುದು ಎಂದು ಯೋಚಿಸಿದೆವು. ಆಗ ಹುಟ್ಟಿಕೊಂಡಿದ್ದೇ ‘ಹೀರೋ’. 24 ಜನರನ್ನು ಒಂದು ಕಡೆ ಸೇರಿಸಿ, ಒಂದೇ ಲೊಕೇಶನ್​ನಲ್ಲಿ ಚಿತ್ರ ಮಾಡುವ ಯೋಚನೆ ಮಾಡಿದೆವು. ಆ ಚಿತ್ರ ಅದ್ಭುತ ಯಶಸ್ಸೇನಲ್ಲ. ಆದರೆ, ಆ ತರಹದ್ದೊಂದು ಚಿತ್ರ ಮಾಡುವುದೇ ನಮಗೆ ಯಶಸ್ಸು. ಸುಮ್ಮನೆ ಕೂತಿದ್ದರೆ, ಅಂಥದ್ದೊಂದು ಚಿತ್ರ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನಾವು ಪಾಸಿಟಿವ್ ಆಗಿದ್ದರೆ, ನಮ್ಮ ಜತೆಗೂ ಅಂಥವರೇ ಬಂದು ಸೇರಿಕೊಳ್ಳುತ್ತಾರೆ. ಒಂದು ಚಿತ್ರ ಮಾಡುವುದಕ್ಕೆ 100 ಜನರಾದರೂ ಬೇಕು. ನಾವು ಇದ್ದಿದ್ದೇ 24 ಜನ. ಆದರೆ, ಕೆಲಸ ಮಾತ್ರ 100 ಜನ ಮಾಡಿದಷ್ಟು ಆಗಬೇಕು. ಒಬ್ಬೊಬ್ಬರಿಗೆ ನಾಲ್ಕು ಜನ ಮಾಡುವಷ್ಟು ಕೆಲಸವಿತ್ತು. ಒಂದು ಮುಗಿಯುತ್ತಿದ್ದಂತೆಯೇ, ಇನ್ನೊಂದು ಕೆಲಸಕ್ಕೆ ಕೈ ಜೋಡಿಸಬೇಕಿತ್ತು. ಆಗಲ್ಲ ಎನ್ನುವ ಮಾತೇ ಇಲ್ಲ.

    ಮುಖ್ಯವಾಗಿ, ನಮಗೆ ಯಾವತ್ತೂ ಆಗಲ್ಲ ಎನ್ನುವುದಿರಬಾರದು. ಒಂದು ಕೆಲಸ ಆಗುವುದಿಲ್ಲ ಎಂದು ನಮಗೆ ನಾವೇ ತೀರ್ವನಿಸಿಬಿಟ್ಟರೆ, ಏನೂ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ, ಯಾವುದೇ ಕೆಲಸವಾದರೂ, ಮೊದಲು ಇದು ನನ್ನಿಂದ ಸಾಧ್ಯ ಎಂದು ಹೊರಡುತ್ತೇನೆ. ನಮ್ಮ ಸುತ್ತ ನಾವೇ ಟಟಠಜಿಠಿಜಿಡಛಿ ಡಜಿಚ್ಟಿಚಠಿಜಿಟ್ಞ ಹುಟ್ಟ್ಟುಹಾಕಬೇಕು. ಅದನ್ನು ನಂಬಿ ಮುನ್ನಡೆದರೆ ಏನೋ ಆಗುತ್ತದೆ. ಫಲಿತಾಂಶ ನಮ್ಮ ಬಳಿ ಇರುವುದಿಲ್ಲ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಅಷ್ಟೇ. ಅದಕ್ಕೆ ಪ್ರತಿಫಲ ಸಿಗುತ್ತ ಹೋಗುತ್ತದೆ. ಯಾವುದೇ ಸಿನಿಮಾವನ್ನು ಸಾಧ್ಯವಾದಷ್ಟೂ ಚೆನ್ನಾಗಿ ಮಾಡುವ ಪ್ರಯತ್ನ ಮಾಡುತ್ತೇವೆ. ಅದರಲ್ಲೇ ಬೆಳೆಯುತ್ತೇವೆ, ಅದರಲ್ಲೇ ತಪು್ಪಗಳನ್ನು ಮಾಡುತ್ತೇವೆ, ಕಲಿಯುತ್ತೇವೆ. ಇಲ್ಲಿ ಸರಿ ಎನ್ನುವುದು ಇಲ್ಲ ಮತ್ತು ಪ್ರತೀ ಬಾರಿ ಸರಿ ಮಾಡುವುದಕ್ಕೂ ಸಾಧ್ಯವಿಲ್ಲ. ಏನು ತೋಚುತ್ತದೋ ಅದನ್ನು ಮಾಡಿಬಿಡಬೇಕು. ತಪ್ಪಾಯಿತೋ, ಸರಿಯಾಯಿತೋ ಎಂಬುದನ್ನು ಯೋಚಿಸುತ್ತ ಕೂರಬಾರದು. ಯೋಚನೆ ಮಾಡುತ್ತ ಕುಳಿತರೆ, ನಾವು ತಪು್ಪಗಳನ್ನು ಮಾಡುವುದಕ್ಕೆ ಆಗುವುದಿಲ್ಲ. ತಪು್ಪ ಮಾಡದಿದ್ದರೆ ಸರಿ ಗೊತ್ತಾಗುವುದಿಲ್ಲ.

    ಯಾವುದೇ ಕೆಲಸ ದೊಡ್ಡದು, ಚಿಕ್ಕದು ಎಂದಿರುವುದಿಲ್ಲ. ಎಲ್ಲ ಕೆಲಸಗಳೂ ಒಂದೇ. ಅದನ್ನು ಗೌರವಯುತವಾಗಿ ಮಾಡಬೇಕಷ್ಟೇ. ನಾನು ನಟನಾಗುವ ಮುನ್ನ ಟೀ ಪುಡಿ, ಮಿನರಲ್ ವಾಟರ್, ಸೋಲಾರ್ ಹೀಟರ್ ಮಾರುತ್ತಿದ್ದೆ. ಹೋಟೆಲ್​ನಲ್ಲಿ ಕೆಲಸ ಮಾಡಿದ್ದೆ. ನಾನೇ ಹೋಟೆಲ್ ಇಟ್ಟಿದ್ದೆ. ಸ್ವಲ್ಪ ದಿನ ಸಿವಿಲ್ ಕಾಂಟ್ರಾಕ್ಟ್ ಮಾಡುತ್ತಿದ್ದೆ. ಸೆಕ್ಯುರಿಟಿಯವರು ಇಲ್ಲದಿದ್ದಾಗ, ನನ್ನ ಸೈಟ್​ನ ನಾನೇ ಕಾದಿದ್ದೂ ಉಂಟು. ಈಗ ನಟ, ನಿರ್ದೇಶಕ, ನಿರ್ವಪಕನಾಗಿದ್ದೇನೆ. ಮುಂದೆ? ಗೊತ್ತಿಲ್ಲ. ನಾನೊಬ್ಬ ಯಶಸ್ವಿ ನಟ ಎಂದು ಮನಸ್ಸಿಗೆ ಬಂದುಬಿಟ್ಟರೆ, ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಯಶಸ್ಸು ಎನ್ನುವುದು ನಮ್ಮ ಪ್ರಯಾಣದ ಒಂದು ಭಾಗವಷ್ಟೇ. ಅದೇ ಕೆಲಸವಲ್ಲ. ನಾನು ಮಾಡಿದ ಕೆಲಸಕ್ಕೆ ಜನ ಕೊಟ್ಟಿರುವ ಫಲಿತಾಂಶ ಅದು. ಸರಿ ಈಗೇನೋ ಯಶಸ್ಸು ಸಿಕ್ಕಿದೆ. ಮುಂದೇನು? ನಾಳೆಯೂ ಕೆಲಸ ಮಾಡಬೇಕು. ಸಿನಿಮಾ ಆದರೆ ಸಿನಿಮಾ, ಇಲ್ಲವಾದರೆ ಇನ್ನೊಂದು ಕೆಲಸ ಮಾಡುವುದಕ್ಕೂ ನಾನು ರೆಡಿ. ಒಬ್ಬ ನಟ, ನಿರ್ದೇಶಕ ಮತ್ತು ನಿರ್ವಪಕನಾಗಿದ್ದುಕೊಂಡು, ಬೇರೆ ಕೆಲಸಕ್ಕೆ ಕೈ ಹಾಕುವುದು ಹೇಗೆ ಎಂಬ ಆತಂಕ ನನಗಿಲ್ಲ. ನಾಳೆ ಸಿನಿಮಾಗಳಲ್ಲಿ ಸೋತರೆ ಏನು? ಆಗ ಇನ್ನೊಂದೇನೋ ಕೆಲಸ ಮಾಡಿಕೊಂಡು ಹೋಗುತ್ತೇನೆ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲಿಯವರೆಗೆ ನನ್ನ ಕಥೆಗಳು ಇಷ್ಟ ಆಗುತ್ತದೋ, ಅಲ್ಲಿಯವರೆಗೂ ಮಾಡುತ್ತೇನೆ. ಇಷ್ಟವಾಗಲಿಲ್ಲ ಎಂದರೆ ಬೇರೇನೋ ಮಾಡುತ್ತೀನಿ. ಸುಮ್ಮನೆ ಮಾತ್ರ ಕೂರುವುದಿಲ್ಲ.

    ಇಲ್ಲಿ ಕೆಲಸ ಎನ್ನುವುದಕ್ಕಿಂತ ನಮ್ಮನ್ನು ನಾವು ಎಂಗೇಜ್ ಮಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ಮನಸ್ಸು ಯಾವಾಗಲೂ ಯಾವುದರಲ್ಲಾದರೂ ತೊಡಗಿಸಿಕೊಂಡಿದ್ದರೆ ಆಗ ನಮಗೂ ಕ್ಷೇಮ, ಬೇರೆಯವರಿಗೂ ಕ್ಷೇಮ. ಈ ಜಗತ್ತಿನಲ್ಲಿ ಮನುಷ್ಯನಷ್ಟು ಕೆಟ್ಟ ಜೀವಿ ಇನ್ನೊಂದಿಲ್ಲ. ಅವನು ತನ್ನ ಲಾಭಕ್ಕಾಗಿ ಎಲ್ಲವನ್ನೂ ಬಳಸಿಕೊಳ್ಳುತ್ತಾನೆ. ಅದಕ್ಕೆ ಬದಲಿಯಾಗಿ ಈ ಭೂಮಿಗೆ, ಸಮಾಜಕ್ಕೆ ಯಾವುದೇ ರೀತಿಯ ಕೊಡುಗೆ ಕೊಡುವುದಿಲ್ಲ. ನನ್ನ ಸಮಾಧಾನಕ್ಕೆ, ಖುಷಿಗೆ, ಲಾಭಕ್ಕೆ, ನನಗೆ, ನನ್ನದು ಅಂತಲೇ ಮೂರು ಹೊತ್ತೂ ಯೋಚಿಸುತ್ತಿರುತ್ತಾನೆ. ಮನುಷ್ಯ ಮೊದಲು ಹಾಳು ಮಾಡುವುದನ್ನು ಕಡಿಮೆ ಮಾಡಬೇಕು. ಆಗ ಪರಿಸರ, ಸಮಾಜ ಎಲ್ಲವೂ ಚೆನ್ನಾಗಿ ಆಗುತ್ತದೆ. ಅದರಲ್ಲೂ ಸಮಯ ವ್ಯರ್ಥಮಾಡುವದನ್ನು ತಗ್ಗಿಸಬೇಕು. ನೆಗೆಟಿವ್​ಗಳನ್ನು ಕಡಿಮೆ ಮಾಡಿದರೆ, ಸುತ್ತಮುತ್ತಲಿನ ಪರಿಸರ ಸರಿಹೋಗುತ್ತದೆ; ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಆಗ ಜೀವನ ಖುಷಿಖುಷಿಯಾಗಿರುತ್ತದೆ.

    (ಲೇಖಕರು ನಟ, ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts