ಬ್ಯಾಂಕ್ ಷೇರುದಾರರಿಗೆ ಶೇ. ೧೨ರಷ್ಟು ಲಾಭಾಂಶ

ಚಿಕ್ಕಮಗಳೂರು: ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಷೇರುದಾರರಿಗೆ ಶೇ. ೧೨ರಷ್ಟು ಲಾಭಾಂಶ ನೀಡಲಿದೆ ಎಂದು ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ ಘೋಷಿಸಿದರು.

ನಗರದ ರಂಗಣ್ಣನವರ ಛತ್ರದಲ್ಲಿ ನಡೆದ ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ೨೫ನೆ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೪ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬ್ಯಾಂಕ್ ಉತ್ತಮ ವ್ಯವಹಾರ ನಡೆಸುತ್ತಿದೆ. ಅಂದಿನಿAದ ಇಂದಿನವರೆಗೂ ಲಾಭದಾಯಕವಾಗಿ ಮುನ್ನಡೆದಿದೆ. ಆರ್‌ಬಿಐ ನಿರ್ದೇಶನಗಳನ್ನೆಲ್ಲ ಪಾಲಿಸುತ್ತಾ ಎಫ್‌ಎಸ್‌ಡಬ್ಲೂಎಂ ಹಿರಿಮೆಗೆ ಪಾತ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ೬೪೨.೦೭ಲಕ್ಷ ರೂ. ಲಾಭ ಗಳಿಕೆ ಮಾಡಿದ್ದು, ಆದಾಯ ತೆರಿಗೆ ಪಾವತಿ ನಂತರ ರೂ.೩೦೬.೨೨ಲಕ್ಷ ನಿವ್ವಳ ಲಾಭ ಗಳಿಸಿದೆ. ಇಂದಿನ ಮಹಾಸಭೆಯ ಸಮ್ಮತಿಯ ಮೆರೆಗೆ ಷೇರುದಾರರಿಗೆ ಶೇ. ೧೨ರಷ್ಟು ಲಾಭಾಂಶವÀನ್ನು ಘೋಷಿಸÀÄತ್ತಿರುವುದಾಗಿ ತಿಳಿಸಿದರು.
ಬ್ಯಾಂಕಿನಲ್ಲಿ ಒಟ್ಟು ೩೧೧ ಕೋಟಿ ರೂ. ಬಂಡವಾಳವಿದ್ದು, ೨೮೦ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. ೧೯೦ಕೋಟಿ ಸಾಲ ಹೊರಬಾಕಿ ಇರುತ್ತದೆ. ಈ ಸಾಲಿನಲ್ಲಿ ಸಾಲದ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಬ್ಯಾಂಕಿನ ನಿವ್ವಳ ಎನ್‌ಪಿಎ ಆಗಿದೆ ಎಂದರು.
ಈ ಸಾಲಿನಲ್ಲಿ ೪೫೬ ಕೋಟಿಗಳ ವ್ಯವಹಾರ ನಡೆಸಿದ್ದು, ಬ್ಯಾಂಕಿನ ಒಟ್ಟು ವಹಿವಾಟು ೧೫೧೩ ಕೋಟಿಗಳಾಗಿದೆ. ಈಗಾಗಲೇ ಕಡೂರು ಮತ್ತು ಶಿವಮೊಗ್ಗದಲ್ಲಿ ಮಹಿಳಾ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ರಜತ ಮಹೋತ್ಸವದ ಮುಂದಿನ ವರ್ಷದೊಳಗಾಗಿ ವ್ಯವಹಾರದ ಇನ್ನಷ್ಟು ಅಭಿವೃದ್ಧಿಗಾಗಿ ಹಾಸನ ಜಿಲ್ಲೆಯಲ್ಲಿ ಶಾಖೆ ತೆರೆಯಲು ಯೋಜನೆ ರೂಪಿಸಲಾಗಿದೆ. ಚಿಕ್ಕಮಗಳೂರಿನ ಪ್ರಧಾನ ಕಚೇರಿಯ ಕಟ್ಟಡದಲ್ಲಿ ಮೇಲಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬ್ಯಾಂಕಿನಲ್ಲಿ ಎಲ್ಲ ಆಧುನಿಕ ರೀತಿಯಲ್ಲಿ ಡಿಜಿಟಲ್ ಬ್ಯಾಂಕಿAಗ್ ಸೇವೆಯನ್ನು ನೀಡುತ್ತಿದ್ದು, ಮುಖ್ಯವಾಗಿ ಯುಪಿಐ ಸೇವೆಗಳನ್ನು ಗ್ರಾಹಕರು ಬಹಳ ಉತ್ತಮವಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಬ್ಯಾಂಕಿನ ದೈನಂದಿನ ವ್ಯವಹಾರ ನಾಲ್ಕರಿಂದ ಐದು ಪಟ್ಟು ಜಾಸ್ತಿಯಾಗಿದೆ. ಇದಕ್ಕೆ ಗ್ರಾಹಕರು, ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಸಹಕಾರ ಸ್ಮರಣೀಯ ಎಂದರು.
ಬ್ಯಾಂಕ್ ಉಪಾಧ್ಯಕ್ಷೆ ಸುಧಾರಾಜು, ನಿರ್ದೇಶಕರಾದ ಸುಜಾತಕೃಷ್ಣಮೂರ್ತಿ, ಸೌಭ್ಯಾಗ್ಯ ಗೋಪಾಲನ್, ಕಮಲಾ ಬಸವರಾಜ್, ಜಯಶ್ರೀ ನಂಜರಾಜ್, ಜಯಲಕ್ಷ್ಮೀ ರಾಮೇಗೌಡ, ತಾರಾ ಮೋಹನ್, ಕವಿತ ರಾಹುಲ್‌ನಾಯಕ್, ಅನುಪಮಾ, ಮೀನಾ, ಎಚ್.ಎನ್.ಅರುಂಧತಿ, ಆಶಾ ಹೇಮಂತ್‌ಕುಮಾರ್, ಬ್ಯಾಂಕಿನ ಜನರಲ್ ಮ್ಯಾನೇಜರ್ ಬಿ.ಆರ್.ಸತೀಶ್, ವ್ಯವಸ್ಥಾಪಕಿ ಕವಿತಾ, ಅಜಿತ್‌ಕುಮಾರ್, ಶ್ರೀರಾಮ್ ಮತ್ತಿತರರಿದ್ದರು.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…