ಕೊವಿಡ್​-19 ಸೋಂಕಿನಿಂದ ಮೃತಪಟ್ಟ ಶಾಸಕ: ಕಂಬನಿ ಮಿಡಿದ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತ: ಮಹಾಮಾರಿ ಕರೊನಾ ಸೋಂಕಿಗೆ ಇನ್ನೋರ್ವ ಜನಪ್ರತಿನಿಧಿ ಬಲಿಯಾಗಿದ್ದಾರೆ. ಪಶ್ಚಿಮಬಂಗಾಳದ ತೃಣಮೂಲಕ ಕಾಂಗ್ರೆಸ್​ ಶಾಸಕ ತಮೋನಾಶ್ ಘೋಷ್ (60) ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಘೋಷ್​ ಅವರಲ್ಲಿ ಕಳೆದ ತಿಂಗಳು ಕರೊನಾ ಇರುವುದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಫಲಕಾರಿಯಾಗಲಿಲ್ಲ. ತಮೋನಾಶ್​ ಘೋಷ್​ ಸಾವಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಫಾಲ್ಟಾದಿಂದ ಮೂರು ಬಾರಿ ಶಾಸಕರಾಗಿದ್ದ ತಮೋನಾಶ್​ ಘೋಷ್​ ಅವರು 1998ರಿಂದಲೂ ಪಕ್ಷದ ಖಜಾಂಚಿಯಾಗಿದ್ದರು. 35 ವರ್ಷಗಳಿಂದ ನಮ್ಮ ಜತೆ ಇದ್ದ ಅವರೀಗ … Continue reading ಕೊವಿಡ್​-19 ಸೋಂಕಿನಿಂದ ಮೃತಪಟ್ಟ ಶಾಸಕ: ಕಂಬನಿ ಮಿಡಿದ ಸಿಎಂ ಮಮತಾ ಬ್ಯಾನರ್ಜಿ