ಸಿನಿಮಾ

ಮೇ.27ರಂದು ತಿರುಕಲ್ಯಾಣ ಮಹೋತ್ಸವ: ಟ್ರಸ್ಟ್ ಉಪಾಧ್ಯಕ್ಷ ಜಯರಾಮಣ್ಣ ಮಾಹಿತಿ

ಮಂಡ್ಯ: ನಗರದ ಹನಿಯಂಬಾಡಿ ರಸ್ತೆಯಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮೇ.27ರಂದು ಶ್ರೀನಿವಾಸ ತಿರುಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ ಎಂದು ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಜಯರಾಮಣ್ಣ ತಿಳಿಸಿದರು.
ಅಂದು ಬೆಳಗ್ಗೆ 6ಗಂಟೆಗೆ ವೆಂಕಟೇಶ್ವರಸ್ವಾಮಿಯ ಅಭಿಷೇಕ, 8ಗಂಟೆಗೆ ಮಹಾಮಂಗಳಾರತಿ, 9ಗಂಟೆಗೆ ಶ್ರೀನಿವಾಸ ತಿರುಕಲ್ಯಾಣೋತ್ಸವ ಮತ್ತು ಮಧ್ಯಾಹ್ನ 1.30ಕ್ಕೆ ತೀರ್ಥಪ್ರಸಾದ ವಿನಿಯೋಗವಿರಲಿದೆ. ಖ್ಯಾತ ಜ್ಯೋತಿಷಿ ವಿದ್ವಾನ್ ಡಾ.ರಂಗನಾಥ ಆಚಾರ್ಯ ಗುರೂಜಿ, ಉಪಾಸಕ ಲಕ್ಷ್ಮೀ ಹಯಗ್ರೀವ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಟ್ರಸ್ಟ್ ಅಧ್ಯಕ್ಷ ಮಂಚೇಗೌಡ, ಸಿದ್ದಪ್ಪ, ಮಹಾಂತಪ್ಪ, ನಿತ್ಯಾನಂದ ಇದ್ದರು.

Latest Posts

ಲೈಫ್‌ಸ್ಟೈಲ್