ಸಿನಿಮಾ

ಗೊರಕೆ ಸಮಸ್ಯೆಯಿಂದ ಬೇಸತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಸುಲಭ ಪರಿಹಾರ…

ಬೆಂಗಳೂರು: ಗೊರಕೆ ಸಮಸ್ಯೆ ನಿಮ್ಮ ಹಾಗೂ ನಿಮ್ಮ ಮನೆಯವರ ನಿದ್ದೆಯನ್ನು ಕಸಿಯುತ್ತಿರಬಹುದು. ಹಲವಾರು ಸಂದರ್ಭಗಳಲ್ಲಿ ಈ ಗೊರಕೆ ಸಮಸ್ಯೆಯು ದಾಂಪತ್ಯ ಜೀವನದ ಮೇಲೂ ಪ್ರಭಾವವನ್ನು ಬೀರುತ್ತದೆ. ಇದರ ಪರಿಣಾಮವಾಗಿ ಅನ್ಯೋನ್ಯವಾಗಿದ್ದ ದಂಪತಿಗಳು ಏಕಾಏಕಿ ದೂರವಾಗಿರುವ ಅನೇಕ ಉದಾಹರಣೆಯಗಳು ನಮ್ಮಲ್ಲಿ ಸಾಕಷ್ಟಿವೆ. ಆದರೆ ಈ ಸಮಸ್ಯೆಯನ್ನು ಕೆಲವು ಮನೆಯ ಮದ್ದುಗಳಿಂದ ನಿವಾರಣೆ ಮಾಡಬಹುದು ಎನ್ನುವುದು ಹಲವರ ವಾದ. ಅದಕ್ಕಾಗಿ ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಂಡರೆ ಗೊರಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಇದನ್ನೂ ಓದಿ: ನೂತನ ಶಾಸಕ ಜಮೀರ್​ ಅಹ್ಮದ್​ಗೆ ಸಚಿವ ಸ್ಥಾನ ನೀಡಬಾರು ಎಂದು ಒತ್ತಡ…

ಒಂದು ಬಟ್ಟಲಿನಲ್ಲಿ ಸ್ವಲ್ಪ ಬಿಸಿನೀರನ್ನು ತೆಗೆದುಕೊಂಡು ಅದಕ್ಕೆ ನೀಲಗಿರಿ, ಬೇವು, ಪುದೀನಾ, ಯೂಕಲಿಪ್ಟಸ್ ಮತ್ತು ಲ್ಯಾವೆಂಡರ್ ಅಥವಾ ಯಾವುದೇ ಸಾರಭೂತ ಎಣ್ಣೆಯನ್ನು ಮೂರರಿಂದ ನಾಲ್ಕು ಹನಿಗಳನ್ನು ಸೇರಿಸಿ ಇದರ ಹಬೆಯನ್ನು ತೆಗೆದುಕೊಳ್ಳಿ. ಹಬೆಯನ್ನು ತೆಗೆದುಕೊಳ್ಳುವಾಗ ಉಚ್ಛ್ವಾಸ ಮತ್ತು ನಿಶ್ವಾಸಗಳನ್ನು ಮಾಡುವುದರಿಂದ ಮೂಗಿನಲ್ಲಿರುವ ಕಲ್ಮಶ ನಿವಾರಣೆಯಾಗಿ ಉತ್ತಮ ವಿಶ್ರಾಂತಿ ಹಾಗೂ ಶಾಂತವಾದ ನಿದ್ರೆ ಬರುತ್ತದೆ.

ನಾಸಲ್​ ಸ್ಟ್ರಿಪ್ಸ್​ಗಳು ಮೂಗಿನಲ್ಲಿ ಗಾಳಿಯ ಹರಿವನ್ನು ಸುಧಾರಿಸಲು ಮತ್ತು ಗೊರಕೆಯನ್ನು ಕಡಿಮೆ ಮಾಡಲು ಸಹಾಯಕ. ಇವು ಸುಲಭವಾಗಿ ಉಸಿರಾಟಕ್ಕೆ ಅನುವು ಮಾಡಿಕೊಡುತ್ತವೆ ಮತ್ತು ಗೊರಕೆಯನ್ನು ಕಡಿಮೆ ಮಾಡುತ್ತದೆ.

ನಾಲಿಗೆ ಮತ್ತು ಗಂಟಲಿನ ಸ್ನಾಯುಗಳ ವ್ಯಾಯಾಮ ಮಾಡುವುದರಿಂದ ಅವುಗಳನ್ನು ಬಲಪಡಿಸಿ ಗೊರಕೆಯ ಸಾಧ್ಯತೆ ಕಡಿಮೆ ಮಾಡಬಹುದು. ಬಾಯಿಯ ಮೇಲ್ಛಾವಣಿಯ ವಿರುದ್ಧ ನಾಲಿಗೆಯನ್ನು ಹಿಂದಕ್ಕೆ ಮುಂದಕ್ಕೆ ಮಾಡುವುದು. ಅಥವಾ ಸ್ವರಗಳ ಧ್ವನಿಯನ್ನು ಗಟ್ಟಿಯಾಗಿ ಪುನರಾವರ್ತಿಸುವಂತಹ ಸರಳ ವ್ಯಾಯಾಮಗಳು ಈ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರ ನಿಯಮಿತ ಅಭ್ಯಾಸವು ಸುಧಾರಿತ ಸ್ನಾಯು ನಿಯಂತ್ರಣಕ್ಕೆ ಮತ್ತು ಕಡಿಮೆ ಗೊರಕೆಗೆ ಕಾರಣವಾಗಬಹುದು.

ಇದನ್ನೂ ಓದಿ: ಕಡಿಮೆ ಬೆಲೆಗೆ ಸಿಕ್ತು ಅಂತ ಮೊಬೈಲ್​ ಖರೀದಿಸಿದ್ರೆ ಸಂಕಟ ಗ್ಯಾರಂಟಿ! ಮಂಡ್ಯ ಪೊಲೀಸರಿಂದ ಎಚ್ಚರಿಕೆ

ಬೆಳ್ಳುಳ್ಳಿಯು ಒಂದು ರೋಗ ನಿರೋಧಕವಾಗಿದ್ದು, ಇದು ಹಲವು ಆರೋಗ್ಯದ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ. ಸಾಮಾನ್ಯ ಶೀತದಿಂದಾಗಿ ನೀವು ಗೊರಕೆ ಹೊಡೆಯುತ್ತಿದ್ದರೆ, ಬೆಳ್ಳುಳ್ಳಿಯು ಮೂಗಿನಲ್ಲಿರುವ ಲೋಳೆಯನ್ನು ತೊಡೆದು ಹಾಕಿ, ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತದೆ.

ಪ್ರತಿದಿನ ರಾತ್ರಿ ಮಲಗುವ ಮುನ್ನ ತಪ್ಪದೇ ಬಿಸಿ ನೀರನ್ನು ಕುಡಿಯುವದರಿಂದ ಗಂಟಲಿನಲ್ಲಿ ಸಂಗ್ರಹವಾಗಿರುವ ಲೋಳೆಯಂತಹ ಅಂಶ ಕರಗಿ, ಗೊರಕೆ ಸಮಸ್ಯೆ ನಿವಾರಣೆಯಾಗುತ್ತದೆ.

ಆರೋಗ್ಯ ಸಮಸ್ಯೆಗೆ ಅರಿಶಿನ ಪ್ರಬಲವಾದ ಔಷಧಿಯಾಗಿದ್ದು, ಇದನ್ನು ನಂಜು ನಿರೋಧಕ ಎಂದು ಕರೆಯುತ್ತಾರೆ. ಎರಡು ಚಮಚ ಅರಿಶಿನ ಪುಡಿಯನ್ನು ಒಂದು ಗ್ಲಾಸ್ ಬಿಸಿ ಹಾಲಿಗೆ ಸೇರಿಸಿ, ಮಲಗುವ ಮುನ್ನ ಕುಡಿದರೆ ಗೊರಕೆ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತದೆ.(ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್