ತಾಳಿಕೋಟೆ: ಪಟ್ಟಣದಲ್ಲಿ 26ರಂದು ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಬದ್ಧತೆಗಾಗಿ ನಮ್ಮ ನಾಗರಿಕರು ಸಜ್ಜಾಗಬೇಕಾಗಿದೆ. ಈಗಾಗಲೇ ಮುದ್ದೇಬಿಹಾಳದಲ್ಲಿ ತಿರಂಗಾ ಯಾತ್ರೆ ಯಶಸ್ವಿಯಾಗಿ ಜರುಗಿದ್ದು, ಪಟ್ಟಣದಲ್ಲಿ ನಡೆಯಲಿರುವ ತಿರಂಗಯಾತ್ರೆ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಅಂದು ಮದ್ಯಾಹ್ನ 3ಕ್ಕೆ ಶಿವಾಜಿ ಮಹಾರಾಜ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿ ರಾಣಾಪ್ರತಾಪ ಸರ್ಕಲ್, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶರಣಮುತ್ಯಾರ ದೇವಸ್ಥಾನದ ಮುಂಭಾಗದ ರಸ್ತೆ, ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಬಜಾರ್, ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆಯ ಮೂಲಕ ಸಾಗಿ ಮರಳಿ ಶಿವಾಜಿ ಮಹಾರಾಜರ ವೃತ್ತಕ್ಕೆ ಆಗಮಿಸಲಿದೆ. ಅಲ್ಲಿ ಸಾಮಾವೇಶ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಿ.ಪಂ. ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ರಾಜು ಹಂಚಾಟೆ, ವಾಸು ಹೆಬಸೂರ, ಜೈಸಿಂಗ್ ಮೂಲಿಮನಿ, ಎಂ.ಎಸ್. ಸರಶೆಟ್ಟಿ, ರಾಜಣ್ಣ ಸೊಂಡೂರ, ಮಲ್ಲಿಕಾರ್ಜುನ ಹಿಪ್ಪರಗಿ, ಮಲ್ಲು ಮೇಟಿ, ಕಾಶಿನಾಥ ಮುರಾಳ, ಸಂಬಾಜಿ ಡಿಸಲೆ, ಶ್ರೀಪಾಲ ಸಂಗ್ಮಿ, ವಿಠ್ಠಲ ಮೋಹಿತೆ, ಮುದಕಣ್ಣ ಬಡಿಗೇರ, ರಾಘು ವಿಜಾಪುರ, ರಾಘು ಮಾನೆ, ಸುಧೀರ ದೇಶಪಾಂಡೆ, ಈಶ್ವರ ಹೂಗಾರ, ದ್ಯಾಮನಗೌಡ ಪಾಟೀಲ, ಸುವರ್ಣಾ ಬಿರಾದಾರ, ದತ್ತು ಹೆಬಸೂರ, ರಾಜು ಅಲ್ಲಾಪುರ, ಬಿ.ಜಿ. ಮದರಕಲ್ಲ, ಶ್ರೀಕಾಂತ ಪತ್ತಾರ, ಸಾಹೇಬಗೌಡ ಬಿರಾದಾರ, ಪರಶುರಾಮ ಕಟ್ಟಿಮನಿ, ಯಂಕಪ್ಪ ಗೊಲ್ಲರ ಉಪಸ್ಥಿತರಿದ್ದರು.