ಇಂಡಿ: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರನ್ನು ಟಿಪ್ಪು ಸುಲ್ತಾನ್ ನಡುಗಿಸಿದ್ದರು ಎಂದು ಪುರಸಭೆ ಅಧ್ಯ ಲಿಂಬಾಜಿ ರಾಠೋಡ ಹೇಳಿದರು.
ಟಿಪ್ಪು ಸುಲ್ತಾನ್ ಜನ್ಮದಿನದ ಅಂಗವಾಗಿ ಇಂಡಿ ಯುವ ಕವರೆಜ್ ಸಮಿತಿಯಿಂದ ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಕೇವಲ ಒಂದು ಧರ್ಮಕ್ಕೆ ಸೀಮಿತರಲ್ಲ ಎಂದರು.
ಮುಫ್ತಿ ಅಬ್ದುಲ್ ರೆಹಮಾನ್ ಅರಬ್ ಮಾತನಾಡಿ, ಟಿಪ್ಪುಗೆ ತೋಟಗಾರಿಕೆ ಮತ್ತು ತೋಟಗಾರಿಕೆಯಲ್ಲಿ ಅಪಾರ ಪ್ರೀತಿ ಇತ್ತು. ಬೆಂಗಳೂರಿನಲ್ಲಿ 40 ಎಕರೆ ಲಾಲ್ಬಾಗ್ ಸಸ್ಯೋದ್ಯಾನ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಇಂಡಿ ಯುವ ಕವರೇಜ್ ಸಂದ ಅಧ್ಯ ಜಾಕಿರ ಮಲಗಾಣ ಮಾತನಾಡಿ, ದಾನಗಳಲ್ಲಿ ಶ್ರೇಷ್ಠ ದಾನ ಎಂದರೆ ರಕ್ತದಾನ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯ ಜಾವಿದ ಮೋಮಿನ, ಸುದೀರ ಕರಕಟ್ಟಿ, ಅಂಜುಮನ್ ಇಸ್ಲಾಂ ಅಧ್ಯ ಮುನ್ನಾ ಬಾಗವಾನ, ಹಸನ ಮುಜಾವರ, ಐ.ವೈ.ಸಿ ಸಂದ ಕಾರ್ಯದರ್ಶಿ ಮುಜ್ಮಿಲ ಬಾಗವಾನ, ಉಪಾಧ್ಯ ಸಮೀರ ಶೇಖ್, ಮುಜ್ಪರ, ವಸೀಮ, ಶೌಕತ ಖಾಜಿ, ಇಜಾಜ್, ನಿಸಾರ ಬಳ್ಳಾರಿ ಇದ್ದರು.