More

    ಒಣಗಿದ ನಿಮ್ಮ ತುಟಿಗಳ ಆರೈಕೆಗೆ ಇಲ್ಲಿದೆ ಮಾಹಿತಿ…

    ಬೆಂಗಳೂರು: ಮಹಿಳೆಯರು ಸೌಂದರ್ಯ ಪ್ರಿಯರು. ತಮ್ಮ ಆರೋಗ್ಯ ಮತ್ತು ಸೌಂದರ್ಯ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ. ಮಾರುಕಟ್ಟೆಗೆ ಬರುವ ಎಲ್ಲಾ ಉತ್ಪನ್ನಗಳನ್ನು ಬಳಸುತ್ತಾರೆ. ದೇಹದ ಚರ್ಮ, ಕೂದಲು ಎಂದು ಆರೈಕೆ ಮಾಡುವ ಹೆಣ್ಣು ಮಕ್ಕಳಿಗೆ ಒಣಗಿದ ತುಟಿಗಳ ಸಮಸ್ಯೆ ಸದಾ ಕಾಡುತ್ತದೆ.

    ತುಟಿಗಳು ಒಣಗಲು ಕಾರಣ:
    ತುಟಿಗಳ ಚರ್ಮವು ನಮ್ಮ ದೇಹದಲ್ಲಿ ಅತ್ಯಂತ ತೆಳುವಾದ ಮತ್ತು ಸೂಕ್ಷ್ಮವಾದ ಚರ್ಮವಾಗಿರುವುದರಿಂದ ತುಟಿಗಳು ಒಣಗುವುದು ಮತ್ತು ಅದರ ಸಮಸ್ಯೆಗಳು ಸಾಮಾನ್ಯವಾಗಿದೆ. ತುಟಿಗಳು ಶೀತ, ಬಿಸಿಲು ಮತ್ತು ಗಾಳಿಗೆ ಒಡ್ಡಿಕೊಳ್ಳುವುದರಿಂದ ಅವುಗಳು ಸಾಮಾನ್ಯವಾಗಿ ಬಿರುಕು ಬಿಡುತ್ತವೆ ಮತ್ತು ಶುಷ್ಕತೆಯನ್ನು ಹೊಂದುತ್ತವೆ.

    ತುಟಿಗಳ ಸಮಸ್ಯೆ ಉಂಟಾಗಲು ನಿರ್ಜಲೀಕರಣ ಮತ್ತು ವಿಟಮಿನ್ ಕೊರತೆಯ ಸಂಕೇತವು ಆಗಿರಬಹುದು. ಈ ರೀತಿಯ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ನಿಮ್ಮ ತುಟಿಗಳನ್ನು ಮೃದುವಾಗಿಸಲು ಕೆಲವು ಸುಲಭವಾದ ಮನೆಮದ್ದುಗಳಿವೆ.

    ಒಣಗಿದ ತುಟಿಗಳಿಗೆ ಮನೆಮದ್ದು:
    ತೆಂಗಿನ ಎಣ್ಣೆಯನ್ನು ತುಟಿಗೆ ಹಚ್ಚಿಕೊಳ್ಳಿ. ಇದು ನಿಮ್ಮ ತುಟಿಗಳಿಗೆ ಮೃದು ಮತ್ತು ಹೊಳಪು ನೀಡುವಲ್ಲಿ ಸಹಾಯ ಮಾಡುತ್ತದೆ.

    ಸೌತೆಕಾಯಿಯ ಸಿಪ್ಪೆಯನ್ನು ತೆಗೆದು ತೆಳುವಾದ ಹೋಳುಗಳಾಗಿ ಕತ್ತರಿಸಿ. ಈ ತುಣುಕುಗಳನ್ನು ನಿಮ್ಮ ತುಟಿಗಳ ಮೇಲೆ ಕೆಲವು ನಿಮಿಷಗಳ ಕಾಲ ಉಜ್ಜಿಕೊಳ್ಳಿ.

    ಇದನ್ನೂ ಓದಿ: ಭೀಕರ ಅಪಘಾತ: ಮೂರು ಕುಟುಂಬದ 9 ಮಂದಿ ಸಾವು, ಮೂವರ ಪರಿಸ್ಥಿತಿ ಗಂಭೀರ

    ಸ್ವಲ್ಪ ಜೇನುತುಪ್ಪವನ್ನು ನಿಮ್ಮ ತುಟಿಗಳಿಗೆ ಹಚ್ಚಿ. ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ನಿಮ್ಮ ತುಟಿಯ ಮೇಲೆ ಯಾವುದೇ ರೀತಿಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಬಿಡುವುದಿಲ್ಲ.

    ತುಟಿಗಳು ಒಡೆಯದಿರಲು ಏನು ಮಾಡಬೇಕು?: ತಣ್ಣನೆಯ ಅಥವಾ ಬಿಸಿ ನೀರಿನಿಂದ ನಿಮ್ಮ ಮುಖವನ್ನು ಪದೇ ಪದೇ ತೊಳೆಯಬೇಡಿ.

    ರಾತ್ರಿ ಮಲಗುವ ಮುನ್ನ ಲಿಪ್ ಬಾಮ್ ಬಳಸಿ. ಗಾಢ ಬಣ್ಣದ, ಆಲ್ಕೋಹಾಲ್ ಹೊಂದಿರುವ ಉತ್ಪನ್ನಗಳನ್ನು ಬಳಸಬೇಡಿ.
    ತುಟಿಗಳ ಸುತ್ತಲಿನ ಚರ್ಮವನ್ನು ಸ್ವಚ್ಛವಾಗಿಡಿ.ತುಟಿಗಳು ಮತ್ತು ಚರ್ಮವನ್ನು ಸರಿಯಾಗಿ ತೇವಗೊಳಿಸಬೇಕು.

    ಹೆಂಡತಿ ಶೀಲ ಶಂಕಿಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿಗೆ ಜೀವಾವಧಿ ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts