ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿಲ್ಲ ಸಿಎಂ ಹೆಸರು: ಜಮೀರ್​ ಅಹ್ಮದ್​ ಹೇಳಿದ್ದು ಹೀಗೆ…

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸಂಜೆ ಮಾಡಿದರೆ ತಾವೂ ಆಗಮಿಸುವುದಾಗಿ ಹೇಳಿದ್ದರು. ಆದರೆ ಈಗ ಬರಲಾಗುತ್ತಿಲ್ಲ ಎಂದಿದ್ದಾರೆ ಎಂದು ಸಚಿವ ಜಮೀರ್​ ಅಹ್ಮದ್​ ಖಾನ್​ ಹೇಳಿದರು.

ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿ, ನಾನು ನ.3ರಂದು ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಆಗಮಿಸುವಂತೆ ಮನವಿ ಮಾಡಿದ್ದೆ. ಸಂಜೆ ಕಾರ್ಯಕ್ರಮ ಮಾಡಿ ಬರುತ್ತೇನೆ ಎಂದಿದ್ದರು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಹ್ವಾನ ಪತ್ರಿಕೆಯಲ್ಲಿ ಕುಮಾರಸ್ವಾಮಿಯವರ ಹೆಸರು ಇರಲಿಲ್ಲ. ಹೆಸರು ಹಾಕದೆ ಇದ್ದಿದ್ದಕ್ಕೆ ಕಾರಣ ಕೇಳಿದಾಗ, ಸಿಎಂ ಬರಲಾಗುವುದಿಲ್ಲ ಎಂದು ಹೇಳಿದ್ದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ನಮಗೆ ಅವರ ಆರೋಗ್ಯವೇ ಮುಖ್ಯ. ನನ್ನ ಮತ್ತು ಕುಮಾರಸ್ವಾಮಿಯವರ ಸಂಬಂಧ ಚೆನ್ನಾಗಿಯೇ ಇದೆ. ನಾನು ಸಮುದಾಯದ ದೊಡ್ಡ ನಾಯಕನಲ್ಲ. ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದರು.