ಟಿಪ್ಪು ಜಯಂತಿ ಆಚರಣೆಯಲ್ಲಿ ತಲವಾರ್​ನಿಂದ ಕೇಕ್​ ಕತ್ತರಿಸಿದ ಜನಪ್ರತಿನಿಧಿಗಳು

ವಿಜಯಪುರ: ಸಿಂದಗಿ ತಾಲೂಕಿನ ಅಲಮೇಲ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಜನಪ್ರತಿನಿಧಿಗಳು ತಲವಾರ್​ನಿಂದ ಕೇಕ್​ ಕತ್ತರಿಸಿದ್ದಾರೆ ಎನ್ನಲಾಗಿದೆ.

ಅಲಮೇಲ ಪಪಂ ನಿಂದ ಬಸ್​ನಿಲ್ದಾಣದ ಬಳಿ ಟಿಪ್ಪುಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಸದಸ್ಯರಾದ ಪ್ರದೀಪ ಎಂಟಮಾನ, ಸಾಧಿಕ ಸುಂಬಡ, ಪಪಂ ಸದಸ್ಯೆ ಪತಿ ಪ್ರಭು ವಾಲೀಕಾರ್​ ತಲವಾರ್​ನಿಂದ ಕೇಕ್​ ಕಟ್ಟ ಮಾಡಿದ್ದಾರೆ.

ಐಜಿಪಿ ಅಲೋಕ್​ ಕುಮಾರ್​ ಇದ್ದಷ್ಟು ದಿನ ಈ ತಲವಾರ್​ ಸಂಸ್ಕೃತಿ ಮರೆಯಾಗಿತ್ತು. ಅವರು ಈಗ ವರ್ಗಾವಣೆಯಾಗಿ ಹೋಗಿದ್ದರಿಂದ ಮತ್ತೆ ಶುರುವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.