ಗುಂಡ್ಲುಪೇಟೆ: ಪರ್ಮಿಟ್ ಇಲ್ಲದೆ ರಾತ್ರಿ ವೇಳೆ ಅಧಿಕ ತೂಕದ ಕಲ್ಲುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಟಿಪ್ಪರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ರಾತ್ರಿ ಗಸ್ತಿನಲ್ಲಿದ್ದ ಪಟ್ಟಣ ಠಾಣೆಯ ಪ್ರಭಾರ ಸರ್ಕಲ್ ಇನ್‌ಸ್ಪೆಕ್ಟರ್ ಸಾಗರ್ ನಸುಕಿನಲ್ಲಿ ಅಧಿಕ ತೂಕದ ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಕೇರಳ ನೋಂದಣಿಯ ಟಿಪ್ಪರ್‌ನ ದಾಖಲೆಗಳನ್ನು ಪರಿಶೀಲಿಸಿದಾಗ ಪರ್ಮಿಟ್ ಇಲ್ಲದಿರುವುದು ಕಂಡುಬಂದಿದೆ. ಕೂಡಲೇ ಟಿಪ್ಪರನ್ನು ವಶಕ್ಕೆ ಪಡೆದು ತೆರಕಣಾಂಬಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪತ್ರ ಬರೆಯಲಾಗಿದೆ. ಅವರು ವಿಧಿಸುವ ದಂಡ ಪಾವತಿಸಿದ ನಂತರ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
