18.5 C
Bangalore
Monday, December 16, 2019

ಪ್ಲಾಸ್ಟಿಕ್ ಹಾವಳಿ ವಿರುದ್ಧ ಸಮರಕ್ಕೆ ಸಕಾಲ

Latest News

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಕಾಲೇಜ್ ಆವರಣದಲ್ಲಿ ಮದ್ಯದ ಸದ್ದು

ಮೊಳಕಾಲ್ಮೂರು: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣ ಭದ್ರತೆ ಕೊರತೆಯ ಕಾರಣಕ್ಕೆ ಪುಂಡ ಪೋಕರಿಗಳ ತಾಣವಾಗಿ ಮಾರ್ಪಟ್ಟಿದೆ. ಈಚೆಗೆ ಕೆಲ ಕಿಡಿಗೇಡಿಗಳು ಕಾಲೇಜಿನ ಆವರಣದಲ್ಲಿರುವ...

ಶತಮಾನ ಶಾಲೆಗಿಲ್ಲ ಸೌಲಭ್ಯಗಳ ಭಾಗ್ಯ

ಕೆ.ಕೆಂಚಪ್ಪ ಮೊಳಕಾಲ್ಮೂರು: ಶತಮಾನ ಪೂರೈಸಿದ ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಲ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ. ಒಂದು ತಲೆಮಾರಿಗೆ ಅಕ್ಷರ ದಾಸೋಹ...

ಧನುರ್ಮಾಸ ಸ್ವಾಗತಕ್ಕೆ ದೇಗುಲಗಳಲ್ಲಿ ಸಿದ್ಧತೆ

ಚಿತ್ರದುರ್ಗ; ಮುಂಜಾನೆ ಪೂಜೆಯ ಧನುರ್ಮಾಸ ಸ್ವಾಗತಿಸಲು ಜಿಲ್ಲೆಯ ದೇವಸ್ಥಾನಗಳಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ದೇವಸ್ಥಾನದಲ್ಲಿ ಡಿ.17ರಿಂದ ಪೂಜೆ ಆರಂಭವಾದರೆ,...

ಆದ್ಯವೀರ್ ಹುಟ್ಟುಹಬ್ಬ ಫೋಟೊಗಳು ವೈರಲ್

ಮೈಸೂರು: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ದಂಪತಿಯ ಪುತ್ರ ಆದ್ಯವೀರ್‌ನ ಎರಡು ವರ್ಷ ಪೂರೈಸಿದ್ದು, ಇತ್ತೀಚೆಗೆ ಮೈಸೂರು ಅರಮನೆಯಲ್ಲಿ ನೆರವೇರಿದ್ದ...

ಹಿಂದೆ ಶಿಲಾಯುಗ, ಕಂಚಿನಯುಗದ ಬಗ್ಗೆ ಕೇಳಿದ್ದೇವೆ. ಆದರೆ ಇಂದು ಎಲ್ಲಿ ನೋಡಿದರೂ ಪ್ಲಾಸ್ಟಿಕ್ ವಸ್ತಗಳೇ. ಹಾಗಾಗಿ ಇದು ಪ್ಲಾಸ್ಟಿಕ್​ಯುುಗವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಎಷ್ಟು ಅಪಾಯಕಾರಿ ಎಂಬ ಅಂಶ ಈಗೀಗ ಅರಿವಾಗುತ್ತಿದೆ. 20ನೇ ಶತಮಾನದಲ್ಲಿ ಆದ ಒಂದು ಸಂಶೋಧನೆ ಪ್ಲಾಸ್ಟಿಕ್ ಹಾಳೆಗಳ ನಿರ್ವಣ, ಸುಲಭಬೆಲೆಗೆ ಲಭ್ಯವಾಗುವುದರಿಂದ ಮತ್ತು ಹಗುರವಾಗಿರುವುದರಿಂದ ಇವು ಶರವೇಗದಲ್ಲಿ ಜನರನ್ನು ಆಕರ್ಷಿಸಿ ಬಳಕೆಯಾಗಲಾರಂಭಿಸಿದವು. ಆದ್ದರಿಂದ ಇವು ಅತಿ ಬಳಕೆಗೆ ಕಾರಣವಾದುದಲ್ಲದೆ ಅನಿವಾರ್ಯವೆನ್ನುವ ಮಟ್ಟಿಗೆ ವಿಶ್ವದಾದ್ಯಂತ ಪಸರಿಸಿವೆ. ಒಮ್ಮೆ ಬಳಸಿ ಚೆಲ್ಲುವ ಈ ಪ್ಲಾಸ್ಟಿಕ್ ಹಾಳೆಗಳು ಭಸ್ಮಾಸುರನಂತೆ ನಮ್ಮನ್ನು ನಾಶಮಾಡಬಲ್ಲುದೆಂದು ಬಹುಶಃ ಅಂದಿನ ಸಂಶೋಧಕರು ಎಣಿಸಿರಲಿಕ್ಕಿಲ್ಲ.

ಸಾಗರಗಳು ಕೂಡ ಪ್ಲಾಸ್ಟಿಕ್​ವುಯವಾಗಿದ್ದು ಇದರಿಂದ ಸಮುದ್ರಜೀವಿಗಳು ಇನ್ನಿಲ್ಲದ ಯಾತನೆ ಪಡುತ್ತಿವೆ. ಇಡೀ ಭೂಮಿ ಮೇಲೆ ನಾವು ಚೆಲ್ಲುವ ಪ್ಲಾಸ್ಟಿಕ್​ನ ಕನಿಷ್ಠ 80 ಪ್ರತಿಶತದಷ್ಟು ಭಾಗ ಒಂದಲ್ಲ ಒಂದು ರೀತಿಯಲ್ಲಿ ಹರಿಯುವ ನೀರಿನಲ್ಲಿ ಸೇರಿ ಸಾಗರವನ್ನು ತಲುಪುತ್ತದೆ. ಈವುಗಳೆಲ್ಲ ತೇಲುತ್ತ ಸಾಗಿ ಸುಳಿಯಲ್ಲಿ ಸಿಲುಕಿ ಒಂದೆಡೆ ಸಂಗ್ರಹವಾಗಿ ಪ್ಲಾಸ್ಟಿಕ್ ನಡುಗಡ್ಡೆಗಳನ್ನು ನಿರ್ವಿುಸಿದರೆ ಉಳಿದ ಪ್ರದೇಶಗಳಲ್ಲಿ ಅವು ಅಮಾಯಕ ಸಾಗರಜೀವಿಗಳಿಗೆ ಆಹಾರದಂತೆ ಕಂಡು ಬಂದು ಅವುಗಳ ಹೊಟ್ಟೆ ಸೇರುತ್ತವೆ. ಪ್ಲಾಸ್ಟಿಕ್ ಕೂಡಲೇ ನಾಶವಾಗದ ಕಾರಣ ನೂರಾರು ವರ್ಷ ಹಾಗೇ ಉಳಿಯುತ್ತದೆ. ಪ್ರತಿವರ್ಷ 8 ಮಿಲಿಯನ್ ಟನ್​ಗಳಷ್ಟು ಪ್ಲಾಸ್ಟಿಕ್ ಸಾಗರ ಸೇರುತ್ತದೆ. ಇದೇ ಪ್ರಮಾಣ ಮುಂದುವರಿದರೆ 2050ರ ಸುಮಾರಿಗೆ ಇರುವ ಮೀನುಗಳಿಗಿಂತ ಪ್ಲಾಸ್ಟಿಕ್ ಪ್ರಮಾಣ ಹೆಚ್ಚಾಗಲಿದೆ.

ಕ್ಯಾಲಿಫೋರ್ನಿಯಾದಲ್ಲಿ ಮೀನುಗಳ ಜೀರ್ಣಾಂಗ ಪರೀಕ್ಷಿಸಿದಾಗ ಪ್ರತಿ ನಾಲ್ಕರಲ್ಲಿ ಒಂದು ಮೀನಿನ ಕರುಳಿನಲ್ಲಿ ಪ್ಲಾಸ್ಟಿಕ್ ಅಂಶ ಇರುವುದು ಕಂಡುಬಂದಿದೆ. ಇದೇ ತೆರನಾಗಿ ಕಡಲಾಮೆಗಳು ಪ್ಲಾಸ್ಟಿಕ್ ಚೀಲಗಳನ್ನು ಸೇವಿಸಿರುವುದು ಕಂಡುಬಂದಿದೆ. ಹಕ್ಕಿಗಳು ತಿಂದಿರುವ ಪ್ಲಾಸ್ಟಿಕ್ ಜಠರದಲ್ಲೇ ಉಳಿದು ಸ್ಥಳಾಭಾವವಾಗಿ ಹೆಚ್ಚಿನ ಆಹಾರ ಸೇವಿಸಲಾರದೆ ಉಪವಾಸ ಬಿದ್ದು ಸಾವಿಗೀಡಾಗುತ್ತಿವೆ. ಚಿಕ್ಕ ಮರಿಹಕ್ಕಿಗಳಿಗೆ ಆಹಾರವೆಂದು ತಪ್ಪಾಗಿ ಭಾವಿಸಿ ಪಾಲಕ ಹಕ್ಕಿಗಳು ಪ್ಲಾಸ್ಟಿಕ್ ತಿನ್ನಿಸಿ ತಮ್ಮ ಮುಂದೆಯೇ ಮರಿಗಳು ಸಾಯುವುದನ್ನು ಕಾಣಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಒಂದು ಅಂದಾಜಿನ ಪ್ರಕಾರ, ಪ್ರತಿಶತ 60ರಷ್ಟು ಪಕ್ಷಿಗಳು ಪ್ಲಾಸ್ಟಿಕ್​ನ್ನು ಆಹಾರವೆಂದು ಗ್ರಹಿಸಿ ತಿನ್ನುತ್ತವೆ. ಮತ್ತು ಅದೇ ರೀತಿ ಮುಂದುವರಿದರೆ 2050 ಸುಮಾರಿಗೆ ಇದು ಪ್ರತಿಶತ 99ಕ್ಕೆ ಏರಲಿದೆ.

ವೇಸ್ಟ್​ವಾಟರ್ ಟ್ರೀಟ್​ವೆುಂಟ್​ನಲ್ಲಿ ಫಿಲ್ಟರ್ ಇರಲಾರದ ಕಾರಣ ಪ್ಲಾಸ್ಟಿಕ್ ಸೂಕ್ಷ್ಮಕಣಗಳು (ಮೈಕ್ರೋಪ್ಲಾಸ್ಟಿಕ್) (ಅಳತೆಯಲ್ಲಿ 5 ಮಿಲಿ ಮೀಟರ್​ಗಿಂತ ಕಡಿಮೆ) ತೆಗೆಯಲಿಕ್ಕೆ ಆಗುವುದಿಲ್ಲ. ಇವೆಲ್ಲವು ಹೊಳೆ ಸೇರಿ, ಕೊನೆಗೆ ಸಮುದ್ರಕ್ಕೆ ಹೋಗುತ್ತವೆ. ಸಾಗರಕ್ಕೆ ಸೇರುತ್ತಿರುವ ಪ್ಲಾಸ್ಟಿಕ್​ನಲ್ಲಿ ತೇಲುತ್ತಿರುವ ಪ್ಲಾಸ್ಟಿಕ್ ಕೇವಲ 5 ಪ್ರತಿಶತವಾಗಿದ್ದು ಉಳಿದ 95 ಭಾಗ ಸಾಗರದಾಳದಲ್ಲಿದೆ. ಅಪಾಯದ ಅಂಶವೆಂದರೆ ಶರವೇಗದಲ್ಲಿ ಸಾಗರ ಸೇರುವ ಸೂಕ್ಷ್ಮಪ್ಲಾಸ್ಟಿಕ್ ಚೂರುಗಳು (ಮೈಕ್ರೋ ಪ್ಲಾಸ್ಟಿಕ್) ನಮ್ಮ ದೈನಂದಿನ ಬಳಕೆಯ ಸೌಂದರ್ಯವರ್ಧಕಗಳು ಟೂತ್​ಬ್ರಶ್, ಬಣ್ಣ ಹಚ್ಚುವ ಮೆತ್ತಗಿನ ಬ್ರಶ್ ಇತ್ಯಾದಿಗಳಲ್ಲಿ ಅಳವಡಿಸಲ್ಪಟ್ಟಿದ್ದು, ಮುಖ ತೊಳೆಯುವಾಗ ನೀರಿನೊಡನೆ ಸೇರಿ ಚರಂಡಿಗಳ ಮೂಲಕ ಎಲ್ಲ ಜಲಜೀವಿ ಪರಿಸರಗಳನ್ನು ಸೇರುತ್ತವೆ. ಸಂಶ್ಲೇಷಿತ ನಾರಿನ ಬಟ್ಟೆಗಳನ್ನು (ಸಿಂಥೆಟಿಕ್ ಫೆಬ್ರಿಕ್ಸ್) ವಾಷಿಂಗ್ ಮಷಿನ್​ನಲ್ಲಿ ತೊಳೆದರೆ ಬಟ್ಟೆಯಲ್ಲಿರುವ ಪ್ಲಾಸ್ಟಿಕ್ ಸೂಕ್ಷ್ಮ ಚೂರುಗಳು ತುಂಡಾಗಿ ತೊಳೆದ ನೀರಿನ ಮೂಲಕ ನೇರವಾಗಿ ಚರಂಡಿಗೆ ಮತ್ತು ನಂತರ ನದಿ ಹಾಗೂ ಸಮುದ್ರಕ್ಕೆ ಸೇರುತ್ತವೆ.

ಹೀಗಿದೆ ಸ್ಥಿತಿ: ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದೇಶದ 60 ನಗರಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ನಗರಗಳಿಂದ ಪ್ರತಿನಿತ್ಯ ಸರಾಸರಿ 4,059 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಅಂದರೆ, ಇಡೀ ದೇಶದಲ್ಲಿ ದಿನಕ್ಕೆ ಸರಾಸರಿ 25,940 ಟನ್ ಪ್ಲಾಸ್ಟಿಕ್ ತ್ಯಾಜ್ಯ ತಯಾರಾಗುತ್ತಿದೆ. ಈ ಪೈಕಿ ಕೇವಲ ಶೇಕಡ 60 ಅಂದರೆ 15,384 ಟನ್ ರಿಸೈಕಲ್​ಗೊಳ್ಳುತ್ತಿದ್ದು, ಉಳಿದದ್ದು ಕೆರೆ, ನದಿ, ಸಮುದ್ರಗಳ ಒಡಲು ಸೇರುತ್ತಿದೆ!

2017-18ರ ವರದಿ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ಕಸ ಉತ್ಪಾದನೆ ಆಗುತ್ತಿರುವುದು ಗುಜರಾತ್​ನಿಂದ (ವರ್ಷಕ್ಕೆ 2,69,808 ಟನ್). ನಂತರದ ಸ್ಥಾನ ಉತ್ತರಪ್ರದೇಶದ್ದು (2,06,733 ಟನ್). ಮಧ್ಯಪ್ರದೇಶ, ಪಂಜಾಬ್, ಒಡಿಶಾ ನಂತರದ ಮೂರು ಸ್ಥಾನಗಳಲ್ಲಿವೆ.

ನೀರಿನ ಪ್ಲಾಸ್ಟಿಕ್ ಬಾಟಲ್​ಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಪ್ರಮಾಣ ಹೆಚ್ಚು. ಪ್ಲಾಸ್ಟಿಕ್​ನಲ್ಲಿ ಪ್ಯಾಕ್ ಮಾಡಿದ ತಿಂಡಿ ತಿನಿಸುಗಳನ್ನು ದೀರ್ಘಕಾಲ ಸೇವಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಪ್ಲಾಸ್ಟಿಕ್ ಹೊದಿಕೆ ಹೊಂದಿರುವ ಕ್ಯಾಪ್ಸೂಲ್​ಗಳನ್ನು ಸೇವಿಸುವುದರಿಂದ ಬಹಳಷ್ಟು ಕಾಯಿಲೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ನಯವಾಗಿ, ಸುಂದರವಾಗಿ ಕಾಣುವ ಪ್ಲಾಸ್ಟಿಕ್​ಗಳು ತೆರೆಮರೆಯಲ್ಲಿ ಕೊರಳಿಗೆ ಉರುಳಾಗುವ ಅಪಾಯಕಾರಿ ವಸ್ತು. ಬಕಾಸುರ ಒಬ್ಬ ದಾನವ ಮತ್ತು ಅವನು ಊರಿನ ಜನರನ್ನೆಲ್ಲ ಕೊಂದು ತಿನ್ನುತ್ತಿದ್ದನಂತೆ. ಇದೇ ರೀತಿ ಸಮುದ್ರದ ಎಲ್ಲ ಜೀವಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಈ ಪ್ಲಾಸ್ಟಿಕ್ ಮಾನವ ನಿರ್ವಿುತ ಬಕಾಸುರ. ಆ ಬಕಾಸುರನನ್ನು ಕೊಲ್ಲಲು ಭೀಮನ ಸಹಾಯ ಬೇಕಾಯಿತು. ಈಗ ಪ್ಲಾಸ್ಟಿಕ್ ಎನ್ನುವ ಬಕಾಸುರನನ್ನು ಕೊಲ್ಲಲು ನಾವೆಲ್ಲ ಬಲಭೀಮನಷ್ಟು ಶಕ್ತಿ ಪ್ರಯೋಗಿಸಿ ಒಂದು ಕಾರ್ಯಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ತರಬೇಕು. ಯಾವುದೇ ರೀತಿಯಲ್ಲಿ ಪ್ಲಾಸ್ಟಿಕ್ ಸಮುದ್ರ ಸೇರದಂತೆ ನೋಡಿಕೊಳ್ಳಬೇಕು. ಪರಿಸರ ಉಳಿಸುವ ನಿಟ್ಟಿನಲ್ಲಿ ಇದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ ಎಂಬುದನ್ನು ಅರಿತುಕೊಂಡು, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇದೇ ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ವಿರುದ್ಧ ಆಂದೋಲನ ಆರಂಭಿಸಲು ಪ್ರಧಾನಿ ಕರೆ ಕೊಟ್ಟಿದ್ದು, ಇದರ ಯಶಸ್ಸಿನಲ್ಲಿ ಜನರ ಸಹಭಾಗಿತ್ವ ತುಂಬ ಮುಖ್ಯ.

ಪರ್ಯಾಯ ಉತ್ಪನ್ನ ಬಳಕೆ

ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ 2 ಕೆ.ಜಿ. ಪ್ಲಾಸ್ಟಿಕ್ ಉತ್ಪತ್ತಿ ಮಾಡುತ್ತಾರೆ. ಪ್ಲಾಸ್ಟಿಕ್ ಪರಿಸರದಲ್ಲಿ ಎಂದೂ ಕೊಳೆಯದೆ ಹಾಗೆ ಉಳಿಯುತ್ತದೆ. ಹೀಗೆ ಪ್ರತಿವರ್ಷ 200 ಕೋಟಿ ಕೆ.ಜಿ. ಪ್ಲಾಸ್ಟಿಕ್ ಉತ್ಪತ್ತಿಯಾಗಿ ಪರಿಸರ ಸೇರುತ್ತದೆ. ಇದೇ ರೀತಿ ಮುಂದುವರಿದರೆ ನಮ್ಮ ದೇಶದಲ್ಲಿ ಮುಂದಿನ ಪೀಳಿಗೆಗೆ ದೊಡ್ಡ ಪ್ಲಾಸ್ಟಿಕ್ ಪರ್ವತವನ್ನು ಬಿಟ್ಟು ಹೋಗುತ್ತೇವೆ. ಪ್ಲಾಸ್ಟಿಕ್​ನ್ನು ಸುಟ್ಟರೆ ಡೈ ಆಕ್ಸಿನ್ ಎಂಬ ಕ್ಯಾನ್ಸರ್​ಕಾರಕ ಅನಿಲ ಉತ್ಪತ್ತಿಯಾಗುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಸುಡುವುದು ಹಾನಿಕರ. ಈ ಕಾರಣಕ್ಕಾಗಿ ಎಲ್ಲರೂ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದರೆ ತಾನೇ ತಾನಾಗಿ ಪ್ಲಾಸ್ಟಿಕ್ ಉತ್ಪಾದನೆ ನಿಲ್ಲುತ್ತದೆ. ಅಂಗಡಿಗಳಿಂದ ಸಾಮಾನು ತರಲು ಪ್ಲಾಸ್ಟಿಕ್ ಬದಲಾಗಿ ಬಟ್ಟೆ ಚೀಲಗಳನ್ನು ಬಳಸಬೇಕು. ಪ್ಲಾಸ್ಟಿಕ್ ತಟ್ಟೆ, ಲೋಟಗಳ ಬದಲು ಬಾಳೆಎಲೆ, ಅಡಿಕೆ ತಟ್ಟೆ, ದೊನ್ನೆಗಳನ್ನು ಬಳಸಬೇಕು. ಸ್ತ್ರೀಶಕ್ತಿ ಸಂಘಗಳು ಇಂಥ ಉತ್ಪನ್ನಗಳನ್ನು ಸಿದ್ಧಗೊಳಿಸುತ್ತಿದ್ದು, ಅವುಗಳ ಬಳಕೆ ಬಗ್ಗೆ ಅರಿವು ಮೂಡಿಸಬೇಕು.

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...