ಲಿಂಗಸುಗೂರು: ರಾಜ್ಯ ಸರ್ಕಾರ ಭರವಸೆ ನೀಡಿದ್ದ, ಆರನೇ ಗ್ಯಾರಂಟಿಯಾದ 15 ಸಾವಿರ ರೂ. ಗೌರವಧನವನ್ನು ತಕ್ಷಣದಿಂದ ನೀಡಬೇಕೆಂದು ಒತ್ತಾಯಿಸಿ ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ಮನವಿ ಸಲ್ಲಿಸಿದರು.
ಮೂರು ತಿಂಗಳು ಕಳೆದರೂ ಮೊಟ್ಟೆ ಹಣ ನೀಡದ ಕಾರ್ಯಕರ್ತೆಯರು ಮತ್ತು ಫಲಾನುಭವಿಗಳಿಗೆ ತೊಂದರೆಯಾಗಿದೆ. ನಿವೃತ್ತ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 1972 ರ ಗ್ರಾಚ್ಯುಟಿ ಕಾಯ್ದೆ ಆದೇಶ ಜಾರಿಗೊಳಿಸಬೇಕು. ಮಾತೃ ವಂದನಾ ಕಾರ್ಯಕ್ರಮದ ವೆಚ್ಚಗಳಿಗೆ 2023 ರಿಂದ ಹಣ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಬೆಲ್ಲ, ರವಾ ಇತ್ಯಾದಿ ಆಹಾರ ಧಾನ್ಯಗಳು ನಿಗದಿತ ಅವಧಿಯೊಳಗೆ ಪೂರೈಕೆ ಮಾಡಬೇಕು. ಎಲ್‌ಕೆಜಿ, ಯುಕೆಜಿಯನ್ನು ಅಂಗನವಾಡಿ ಕೇಂದ್ರದಲ್ಲಿ ಆರಂಭಿಸಬೇಕೆಂದು ಒತ್ತಾಯಿಸಿದರು. ರೇಣುಕಾ ಕಲ್ಲೂರು, ಫಾತೀಮಾ ಬೇಗಂ, ಸುಜಾತ, ಗಂಗಮ್ಮ, ಸುಮಿತ್ರಾ, ಗೋಪಾಬಾಯಿ, ಶಕುಂತಲಾ, ಶಾಂತಾ, ಶಶಿಕಲಾ, ಸುಮಂಗಲಾ, ಹುಲಿಗೆಮ್ಮ, ಸಾವಿತ್ರಿ, ಚಾಂದಬೀ ಇತರರು ಇದ್ದರು.