ಉಗ್ರ ನಿಗ್ರಹಕ್ಕೆ ಪಾಕ್​ಗೆ ಇದು ಸಕಾಲ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಿಂದು ನಾಯಕಿ ತುಳಸಿ ಹೇಳಿಕೆ

ವಾಷಿಂಗ್ಟನ್​: ಪಾಕಿಸ್ತಾನವನ್ನು ಭಯೋತ್ಪಾದಕರ ಸುರಕ್ಷಿತ ತಾಣವಾಗಿ ಮಾಡುವುದನ್ನು ನಿಲ್ಲಿಸಿ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧಿ, ಅಮೆರಿಕ ಕಾಂಗ್ರೆಸ್​ನ ಮೊದಲ ಹಿಂದು ಸಂಸದೆ ತುಳಸಿ ಗಬ್ಬಾರ್ಡ್​ ಆಗ್ರಹಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಮಾತನಾಡಿರುವ ಅಮೆರಿಕದ ಹಿಂದು ನಾಯಕಿ ತುಳಸಿ, ಉಗ್ರ ನಿಗ್ರಹಕ್ಕೆ ಮತ್ತು ತೀವ್ರವಾದಿಗಳನ್ನು ಮಟ್ಟ ಹಾಕಲು ಪಾಕಿಸ್ತಾನಕ್ಕೆ ಇದು ಸಕಾಲ ಎಂದಿದ್ದಾರೆ.

ಪಾಕಿಸ್ತಾನ ಎಲ್ಲಿಯವರೆಗೆ ತನ್ನ ನೆಲದಲ್ಲಿ ಉಗ್ರಗಾಮಿಗಳಿಗೆ ಸ್ಥಾನ ನೀಡುತ್ತದೆಯೋ ಅಲ್ಲಿಯವರೆಗೆ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಈ ಉದ್ವಿಗ್ನ ಪರಿಸ್ಥಿತಿ ನಿವಾರಣೆಯಾಗದು ಎಂದೂ ಅವರು ಹೇಳಿದ್ದಾರೆ.