ಈತನ ಡಾನ್ಸ್ ನೋಡಿ ಫಿದಾ ಆಗದವರೇ ಇಲ್ಲ. ಟಿಕ್ಟಾಕ್ ಕಲಾವಿದನ ನೃತ್ಯಕ್ಕೆ ಬಾಲಿವುಡ್ನ ನಟರೇ ಮನಸೋತಿದ್ದಾರೆ.
ಬಾಲಿವುಡ್ನಲ್ಲಿ ಅತ್ಯುತ್ತಮ ಡಾನ್ಸರ್ ಎಂದೇ ಪ್ರಸಿದ್ಧರಾದ ಹೃತಿಕ್ ರೋಷನ್ ಕೂಡ ಈತನ ನೃತ್ಯಕ್ಕೆ ಮಾರು ಹೋಗಿದ್ದು ಸ್ಮೂತೆಸ್ಟ್ ಏರ್ ವಾಕರ್ ಎಂದು ಬಣ್ಣಿಸಿದ್ದಾರೆ.
ಯುವರಾಜ್ ಸಿಂಗ್ ಅಕಾ ‘@babajackson2020’ ಎನ್ನುವ ಟಿಕ್ಟಾಕ್ನ ಈ ನೃತ್ಯಪಟುವಿಗೆ ಹೃತಿಕ್ ರೋಷನ್ ಮಾತ್ರವಲ್ಲ ಬಾಲಿವುಡ್ನ ಹಲವು ನಟ ನಟಿಯರು ಬಹುಪರಾಕ್ ಎಂದಿದ್ದಾರೆ. ಅಮಿತಾಬ್ ಬಚ್ಚನ್, ಸುನೀಲ್ ಶೆಟ್ಟಿ, ನೃತ್ಯ ನಿದೇರ್ಶಕ ರೆಮೊ ಡಿಸೋಜಾ, ರವೀನಾ ಟಂಡನ್ ಮುಂತಾದವರು ಯುವರಾಜ್ನ ನೃತ್ಯಕ್ಕೆ ಸೈ ಎಂದಿದ್ದಾರೆ.
ಯುವರಾಜ್ನ ಟಿಕ್ಟಾಕ್ಗೆ 10 ಲಕ್ಷ ಮಂದಿ ಫಾಲೋವರ್ಗಳಿದ್ದಾರೆ. ಇದುವರೆಗೆ ಈತನ ಡಾನ್ಸ್ನ ವಿಡಿಯೋಗಳನ್ನು 11 ಮಿಲಯನ್ ಮಂದಿ ವೀಕ್ಷಿಸಿದ್ದಾರೆ. ಅಭಿಮಾನಿಯೊಬ್ಬ ಡಾನ್ಸ್ನ ವಿಡಿಯೋವನ್ನು ಟ್ವೀಟರ್ ಹಾಕಿದ ನಂತರ ಯುವರಾಜ್ ಬಾಲಿವುಡ್ ನಟರ ಗಮನ ಸೆಳೆದಿದ್ದಾನೆ.
ಮುಕ್ಕಾಲಾ ಮುಕ್ಕಾಬುಲಾ…. ಹಾಡಿಗೆ ಯುವರಾಜ್ನ ನೃತ್ಯದ ವಿಡಿಯೋವನ್ನು ಟ್ವೀಟ್ ಮಾಡಿದ ಅಭಿಮಾನಿ ಹೃತಿಕ್ ರೋಷನ್ ಮತ್ತು ಪ್ರಭುದೇವ ಅವರನ್ನು ಟ್ಯಾಗ್ ಮಾಡಿದ್ದಾನೆ. ಅಲ್ಲದೆ ಯುವರಾಜ್ನ ನೃತ್ಯವನ್ನು ನೋಡಿ, ಇವನ್ನು ಪ್ರಖ್ಯಾತಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಭಾನುವಾರ ಪೊಸ್ಟ್ ಮಾಡಿದ ಈ ವಿಡಿಯೋವನ್ನು ಈಗ 9.3 ಮಂದಿ ವೀಕ್ಷಿಸಿ, 52 ಸಾವಿರ ಲೈಕ್ ಪಡೆದಿದೆ. ಅಲ್ಲದೆ 15 ಸಾವಿಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ. (ಏಜೆನ್ಸೀಸ್)
Smoothest airwalker I have seen. Who is this man ? https://t.co/HojQdJowMD
— Hrithik Roshan (@iHrithik) January 13, 2020