ಇಂಡೋನೇಷ್ಯಾ: ಹಂದಿ ಮಾಂಸ ಸೇವನೆ ಇಸ್ಲಾಂನಲ್ಲಿ ಹರಾಮ್ (ನಿಷೇಧಿತ) ಆಗಿದೆ. ಆದರೆ ಯುವತಿಯೊಬ್ಬಳು ಮುಸಲ್ಮಾನರ ಪ್ರಾರ್ಥನೆ ‘ಬಿಸ್ಮಿಲ್ಲಾ’ ಪಠಿಸಿ ಹಂದಿ ಮಾಂಸ ಸೇವಿಸಿದಕ್ಕೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಲೀನಾ ಮುಖರ್ಜಿ ಬಂಧಿತ ಯುವತಿ. ಈಕೆ ಮುಸ್ಲಿಂ ಪ್ರಾರ್ಥನೆ “ಬಿಸ್ಮಿಲ್ಲಾ” ಅನ್ನು ಓದಿದ ನಂತರ ಪೋರ್ಕ್ ಸೇವನೆ ಮಾಡಿದ್ದಾಳೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾಳೆ.
ಈ ವಿಡಿಯೋ ಇಂಡೋನೇಷ್ಯಾದ ಬಾಲಿಯಲ್ಲಿ ಚಿತ್ರೀಕರಿಸಲಾಗಿದೆ. ದೇವರ ಹೆಸರಿನಲ್ಲಿ ಹಂದಿಮಾಂಸ ಸೇವಿಸುತ್ತಿದ್ದೇನೆ ಎಂಬರ್ಥದಲ್ಲಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವರು ಆಕ್ರೋಶವ್ಯಕ್ತಪಡಿಸಿದ್ದಾರೆ.
Ada Indonesia guys … 🥲
Lina Mukherjee pic.twitter.com/JNNuUltAZF
— 🌸 Bebeb Bubu 🌸 (@NyaiiBubu) September 21, 2023
ಪಾಲೆಂಬಾಂಗ್‌ನ ನ್ಯಾಯಾಲಯದಲ್ಲಿ “ಧಾರ್ಮಿಕ ವ್ಯಕ್ತಿಗಳು ಮತ್ತು ನಿರ್ದಿಷ್ಟ ಗುಂಪುಗಳ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಗುರಿಯನ್ನು ಹೊಂದಿರುವ ಮಾಹಿತಿಯನ್ನು ಹರಡಿದ” ಮಹಿಳೆಯು ತಪ್ಪಿತಸ್ಥಳೆಂದು ಕಂಡುಬಂದ ಹಿನ್ನೆಲೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ಮಹಿಳೆ ನನಗೆ ಈ ಬಗ್ಗೆ ಏನು ಗೊತ್ತಿಲ್ಲವೆಂದು ಕ್ಷಮಿಸುವಂತೆ ಕೇಳಿಕೊಂಡಿದ್ದಾಳೆ.