23.2 C
Bangalore
Saturday, December 14, 2019

ಪಂಚಾಯಿತಿಗೆ ಕರೆಂಟ್ ಶಾಕ್ !

Latest News

ಆರ್‌ಎಫ್‌ಐಡಿ ಸ್ಟಿಕರ್​ಗಳ ಕೊರತೆ: ಫಾಸ್ಟ್ಯಾಗ್​ ಅಳವಡಿಕೆ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರಿಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್​ ಮೂಲಕ ಟೋಲ್​ ಶುಲ್ಕ ವಸೂಲಿ ಪ್ರಕ್ರಿಯೆ ಡಿ.1 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಆದರೆ, ಎಲ್ಲ ವಾಹನ ಮಾಲೀಕರೂ ಫಾಸ್ಟ್ಯಾಗ್​...

ದಾವಣಗೆರೆ ಲೋಕ ಅದಾಲತ್‌ನಲ್ಲಿ 21 ನ್ಯಾಯಾಧೀಶರು ಭಾಗಿ, 678 ಕೇಸ್ ವಿಲೆ, 7.34 ಕೋಟಿ ಪರಿಹಾರ ಇತ್ಯರ್ಥ

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲಾದ್ಯಂತ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲೆಯ...

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡನೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡನೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

ವಿದ್ಯುತ್ ಬಿಲ್ ಪಾವತಿ ಹಿನ್ನೆಲೆ ಹೆಸ್ಕಾಂ ಮತ್ತು ಗ್ರಾಪಂ ನಡುವಿನ ತಾಂತ್ರಿಕ ಸಮಸ್ಯೆ ತಾರಕಕ್ಕೇರಿದ್ದು ಇಬ್ಬರ ನಡುವಿನ ಜಗಳದಿಂದಾಗಿ ಕಚೇರಿಗಳು ಕತ್ತಲೆ ಕೂಪಗಳಾಗುತ್ತಿವೆ !
ಹೌದು, ಬರಬೇಕಾದ ಬಾಕಿ ಹಣಕ್ಕಾಗಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ ಕಡಿತಗೊಳಿಸಿದ್ದು ಪ್ರತಿಯಾಗಿ ಪಂಚಾಯಿತಿ ಅಭಿವೃದ್ಧಿ ಅಕಾರಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಲ್ ಪಾವತಿಗೆ ಪಂಚಾಯಿತಿ ತಯಾರಿದ್ದು ಅಕೃತವಾಗಿ ಆರ್‌ಆರ್ ಸಂಖ್ಯೆಗಳಿಗೆ ಮೀಟರ್ ಅಳವಡಿಸಿ ಆನ್‌ಲೈನ್ ಮೂಲಕ ಬಿಲ್ ಪಡೆಯಲಿ ಎನ್ನುತ್ತಿದ್ದಾರೆ ಪಿಡಿಒಗಳು. ಆದರೆ, ಹೆಸ್ಕಾಂ ಸಿಬ್ಬಂದಿ ಮಾತ್ರ ಮೀಟರ್ ಅಳವಡಿಸಿಕೊಳ್ಳುವುದು ಪಂಚಾಯಿತಿ ಅವರ ಕೆಲಸ ಎನ್ನುತ್ತಾರೆ.
ಈ ಇಬ್ಬರ ನಡುವಿನ ತಿಕ್ಕಾಟದಲ್ಲಿ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದ್ದು, ಜಿಪಂ ಸಿಇಒ ವಿಕಾಸ ಕಿಶೋರ್ ಸುರಳಕರ್ ನೇತೃತ್ವ ಸಮನ್ವಯ ಸಮಿತಿ ರಚನೆಯಾಗಿದೆ. ಈಗಾಗಲೇ ಸಮಿತಿ ಹಲವು ಸುತ್ತಿನ ಸಭೆ ನಡೆಸಿದಾಗ್ಯೂ ಇನ್ನೂ ಅಂತಿಮ ಪರಿಹಾರ ಕಂಡುಕೊಳ್ಳಲಾಗಿಲ್ಲ.

ಅಂದಾಜು 16.80 ಕೋಟಿ ರೂ.ಬಾಕಿ: ಜಿಲ್ಲೆಯ ಒಟ್ಟು 213 ಗ್ರಾಮ ಪಂಚಾಯಿತಿಗಳಿವೆ. ತಾಳಿಕೋಟೆ ಮತ್ತು ಮುದ್ದೇಬಿಹಾಳ ಭಾಗದಲ್ಲಿ ಬಹುತೇಕ ಪಂಚಾಯಿತಿಗಳು ಬಿಲ್ ಭರಣಾ ಮಾಡಿವೆ. ಇನ್ನುಳಿದ ಪಂಚಾಯಿತಿಗಳಿಂದ ಮೇ 31, 2019ರ ಅಂತ್ಯಕ್ಕೆ ಅಂದಾಜು 16.80 ಕೋಟಿ ರೂ. ವಿದ್ಯುತ್ ಬಿಲ್ ಬರಬೇಕಿದೆ. ಸಮರ್ಪಕ ಮಾನದಂಡವಿಲ್ಲದ ಕಾರಣ ಬಾಕಿ ಹಣ ಪಾವತಿಗೆ ಪಿಡಿಒಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬಾಕಿ ಹಣದ ಮೇಲಿನ ಬಡ್ಡಿ ಬೆಳೆಯುತ್ತಲೇ ಇದೆ.
ಈ ಮಧ್ಯೆ ಹೆಸ್ಕಾಂ ಸಿಬ್ಬಂದಿ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಕ್ಕೆ ಮುಂದಾಗಿದ್ದಾರೆ. ತಿಕೋಟಾ ತಾಲೂಕಿನ ಸಿದ್ದಾಪುರ ಕೆ. ಗ್ರಾಪಂ ಕಚೇರಿ ವಿದ್ಯುತ್ ಕಡಿತಗೊಳಿಸಿದ್ದು ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಇದರ ಪರಿಣಾಮ ಕುಡಿಯುವ ನೀರು ಪೂರೈಕೆ ಮೇಲೂ ಆಗಿತ್ತಾದರೂ ಈಗ ಮರುಸಂಪರ್ಕ ಕಲ್ಪಿಸಿದ್ದಾಗಿ ತಿಳಿಸುತ್ತಾರೆ.

ಏನಿದು ತಾಂತ್ರಿಕ ಸಮಸ್ಯೆ?: ಸರ್ಕಾರದ ಹಣ ಸರ್ಕಾರಕ್ಕೆ ನೀಡಲು ತೊಂದರೆ ಏನಿಲ್ಲವಾದರೂ ಸಮರ್ಪಕ ಲೆಕ್ಕ ತೋರಿಸಬೇಕಾದದ್ದು ಸಂಬಂಸಿದ ಅಕಾರಿಗಳ ಜವಾಬ್ದಾರಿ. ಹೀಗಾಗಿ ಅಕೃತವಾಗಿ ಬಿಲ್ ಪಡೆಯಲಿ ಎಂಬುದು ಪಿಡಿಒಗಳ ಅಭಿಮತ. ಆದರೆ, ಗ್ರಾಮದಲ್ಲಿ ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಹಲವು ಸಾರ್ವಜನಿಕ ಉದ್ಧೇಶಗಳಿಗೆ ಬಳಕೆಯಾಗುವ ವಿದ್ಯುತ್‌ಗೆ ಮೀಟರ್ ಅಳವಡಿಕೆ ಸಾಧ್ಯವಿಲ್ಲ. ಹೀಗಾಗಿ ವೈಜ್ಞಾನಿಕ ಅಂದಾಜಿನ ಪ್ರಕಾರವೇ ಬಿಲ್ ನಿಗದಿಪಡಿಸಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಾಗುವ ವಿದ್ಯುತ್ ಪೋಲು, ವಿದ್ಯುತ್ ಕಳ್ಳತನ ತಡೆಗಟ್ಟುವಲ್ಲಿ ಸ್ಥಳೀಯ ಆಡಳಿತದ ಪಾತ್ರವೂ ಇದೆ. ಅದಾಗ್ಯೂ ಬೋರ್‌ವೆಲ್‌ಗಳಿಗೆ ಮೀಟರ್ ಅಳವಡಿಸಲು ಗ್ರಾಪಂನವರು ಸಿದ್ದವಾಗಿದ್ದರೆ ಹೆಸ್ಕಾಂ ಅಳವಡಿಸಲು ಸಿದ್ದ ಎನ್ನುತ್ತಾರೆ ಹೆಸ್ಕಾಂನವರು.

ಸಮರ್ಪಕ ಮಾನದಂಡವಿಲ್ಲ: ಹೆಸ್ಕಾಂ ಮತ್ತು ಗ್ರಾಪಂ ನಡುವಿನ ವಿದ್ಯುತ್ ಬಿಲ್ ಪಾವತಿಗೆ ಸಮರ್ಪಕ ಮಾನದಂಡವೇ ಇಲ್ಲ. ಗ್ರಾಪಂನವರು ಕುಡಿಯುವ ನೀರು ಪೂರೈಕೆಗೆ ಎಲ್ಲೆಂದರಲ್ಲಿ ಬೋರ್‌ವೆಲ್ ಕೊರೆಯಿಸುತ್ತಾರೆ. ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾದದ್ದು ಹೆಸ್ಕಾಂನವರ ಜವಾಬ್ದಾರಿ. ಆದರೆ, ಮೀಟರ್ ಅಳವಡಿಸುವುದು ಎಲ್ಲಿ? ಬಯಲಿನಲ್ಲಿ ಮೀಟರ್ ಅಳವಡಿಸಲಾಗುತ್ತದಾ? ಕೆಲವು ದೇವಸ್ಥಾನಗಳ ಮುಂದೆ, ಸಮುದಾಯ ಭವನಗಳ ಮುಂದೆ ಗ್ರಾಪಂನವರೇ ವೈಯರ್ ಹಾಕಿ ಬಲ್ಬ್ ಹಾಕಿರುತ್ತಾರೆ. ಅಲ್ಲೆಲ್ಲಾ ‘ಆನ್ ಆಂಡ್ ಆ್’ ವ್ಯವಸ್ಥೆ ಮಾಡಿಕೊಳ್ಳದೇ ವಿದ್ಯುತ್ ಪೋಲು ಮಾಡಿದರೆ ಜವಾಬ್ದಾರರು ಯಾರು?. ಹೆಸ್ಕಾಂ ಪ್ರಕಾರ ಇದು ಸರಿ.
ಪಿಡಿಒಗಳು ಪ್ರಕಾರ ‘ಕೈ ಬರಹದ ಬಿಲ್’ ಕೊಟ್ಟರೆ ಕಟ್ಟಲು ಸಾಧ್ಯವಿಲ್ಲ. ಲೆಕ್ಕಪತ್ರದಲ್ಲಿ ಏನಂತ ತೋರಿಸೋದು? ವಿದ್ಯುತ್ ಬಳಕೆ ಪ್ರಮಾಣ ಎಷ್ಟು? ಆರ್‌ಆರ್ ನಂಬರ್ ಪ್ರಕಾರ ಮೀಟರ್ ಬಿಲ್ ಎಷ್ಟು? ಆನ್‌ಲೈನ್ ಬಿಲ್ ಎಷ್ಟು ಬಂದಿದೆ? ಲೆಕ್ಕಾ ಕೊಡಿ-ರೊಕ್ಕ ತಗೊಳ್ಳಿ ಎನ್ನುತ್ತಾರೆ. ಹೀಗಾಗಿ ಸಮಸ್ಯೆ ಜಟಿಲಗೊಂಡಿದ್ದು ಸಮನ್ವಯ ಸಮಿತಿ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಕಾದು ನೋಡಬೇಕು.

 

| ಪರಶುರಾಮ ಭಾಸಗಿ ವಿಜಯಪುರ

 

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...