ಡಿಸೆಂಬರ್‌ನಲ್ಲಿ ಟಿಐಇ ಜಾಗತಿಕ ಶೃಂಗಸಭೆ; 25 ಸಾವಿರ ಉದ್ಯಮಿಗಳ ಸಮಾಗಮ

ಬೆಂಗಳೂರು: ಮುಂಬರುವ ಡಿಸೆಂಬರ್ 9 ರಿಂದ 11ರವರೆಗೆ ಬೆಂಳೂರಿನಲ್ಲಿ ಟಿಐಇ ಜಾಗತಿಕ ಶೃಂಗಸಭೆ ಆಯೋಜಿಸಲಾಗಿದೆ ಎಂದು ಟಿಐಇ ಅಧ್ಯಕ್ಷ ಮದನ್ ಪದಕಿ ತಿಳಿಸಿದ್ದಾರೆ.

ಗುರುವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉದ್ಯಮಶೀಲತೆಗೆ ಪ್ರಥಮ ಆದ್ಯತೆ’ ಎಂಬ ಧ್ಯೇಯ ವಾಕ್ಯದೊಂದಿಗೆ 9ನೇ ಟಿಐಇ ಗ್ಲೋಬಲ್ ಸಮಿಟ್ (ಟಿಜಿಎಸ್) 2024 ಏರ್ಪಡಿಸಲಾಗಿದ್ದು, ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಡಿ.9 ರಿಂದ 11ರವರೆಗೆ ನಡೆಯಲಿದೆ. ಇದೇ ವೇಳೆ ಡಿ.12ರಂದು ಮೈಸೂರಿನಲ್ಲಿ ಸಮಾವೇಶ ನಡೆಯಲಿದೆ.

ಈ ಬಾರಿಯ ಟಿಜಿಎಸ್‌ನಲ್ಲಿ 50 ಕ್ಕೂ ಹೆಚ್ಚು ದೇಶಗಳ 25 ಸಾವಿರ ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಶೇಷವಾಗಿ 10 ಸಾವಿರ ಯುವ ಉದ್ಯಮಿಗಳು, 5ಸಾವಿರಕ್ಕೂ ಹೆಚ್ಚಿನ ನವೋದ್ಯಮಿಗಳು ಹಾಗೂ 750ಕ್ಕೂ ಹೆಚ್ಚು ಹೂಡಿಕೆದಾರರು ಮತ್ತು 300ಕ್ಕೂ ಹೆಚ್ಚು ಕಾರ್ಪೊರೇಟ್ ಕಂಪನಿಗಳು ಪಾಲ್ಗೊಲ್ಳುವ ನಿರೀಕ್ಷೆ ಇದೆ. 150ಕ್ಕೂ ಹೆಚ್ಚು ಪರಿಣಿತರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ.

ಬೆಂಗಳೂರಿನ ಜಾಗತಿಕ ಉದ್ಯಮಶೀಲರ ಸಂಘಟನೆ (ಟಿಐಇ)ಗೆ 25 ವರ್ಷಗಳು ಪೂರೈಸಿರುವ ಸಂದರ್ಭದಲ್ಲಿಯೇ ಶೃಂಗಸಭೆ ನಡೆಯುತ್ತಿರುವುದು ಸಮಾವೇಶದ ಮತ್ತೊಂದು ವಿಶೇಷತೆ. ಟಿಐಇ ಹಮ್ಮಿಕೊಂಡಿರುವ ಬೃಹತ್ ಕಾರ್ಯಕ್ರಮಕ್ಕೆ ಡಿಜಿಟಲ್ ಎಕಾನಮಿ ಮಿಷನ್, ಕರ್ನಾಟಕ ಸರ್ಕಾರವು ಕೈ ಜೋಡಿಸಿದ್ದು, ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಹಾಗೂ ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಶೃಂಗಸಭೆಯ ಲೋಗೋವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಐಟಿ ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕರೂಪ್ ಕೌರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ, ಸ್ಟಾರ್ಟಪ್ ವಿಷನ್ ಗ್ರೂಪ್‌ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ. ನಾಯ್ಡು, ಟಿಐಇ ಗ್ಲೋಬಲ್ ಅಧ್ಯಕ್ಷ ಅಮಿತ್ ಗುಪ್ತಾ, ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಮತ್ತಿತರರು ಪಾಲ್ಗೊಂಡಿದ್ದರು. ಟಿಜಿಎಸ್ 2024ಕ್ಕೆ ನೋಂದಣಿ ಆರಂಭವಾಗಿದ್ದು, ನೋಂದಣಿ ಮಾಡಿಕೊಳ್ಳಲು https://tgs2024.org ಗೆ ಭೇಟಿ ನೀಡಬಹುದು.

ಒಂದೇ ವೇದಿಯಲ್ಲಿ ಹಲವು ಕಾರ್ಯಕ್ರಮ

ಜಾಗತಿಕವಾಗಿ ಹೊಸ ಸ್ಟಾರ್ಟಪ್‌ಗಳನ್ನು ಒಗ್ಗೂಡಿಸಲು ಟಿಜಿಎಸ್ ವೇದಿಕಯಾಗಲಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಆವಿಷ್ಕಾರಗಳ ಪ್ರದರ್ಶನ, ಟಿಐಇ ಗ್ಲೋಬಲ್ ಮಹಿಳಾ ಕಾನ್‌ಕ್ಲೇವ್, ಭವಿಷ್ಯದ ಉದ್ಯಮಿಗಳ ಸಮ್ಮೇಳನ, ಟಿಐಇನ ಜಾಗತಿಕ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಗೋಷ್ಠಿಗಳನ್ನು ಶೃಂಗಸಭೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಡೀಪ್‌ಟೆಕ್, ಎಐ, ಬಯೋಟೆಕ್, ಅಗ್ರಿಟೆಕ್, ಫಿನ್‌ಟೆಕ್ ಸೇರಿದಂತೆ ಸಾಮಾಜಿಕ ಉದ್ದಿಮೆಗಳು, ಸ್ಟಾರ್ಟಪ್ ಅವಕಾಶ ಮತ್ತಿತರ ಮಹತ್ತರ ಅಂಶಗಳ ಕುರಿತು ಸಂವಾದಗಳು ನಡೆಯಲಿವೆ. ಉದ್ಯಮ ಕ್ಷೇತ್ರದಲ್ಲಿ ಈ ಶೃಂಗಸಭೆ ಓಲಂಪಿಕ್ ಇದ್ದಂತೆ ಎಂದು ಕರ್ನಾಟಕ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅಭಿಪ್ರಾಯಿಸಿದ್ದಾರೆ.

ಶೃಂಗಸಭೆಯ ಯಶಸ್ವಿಗೊಳಿಸಲು ಸರ್ಕಾರ ಬದ್ಧ

ನವೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದ್ದು, ಸ್ಟಾರ್ಟಪ್‌ಗಳ ಮೂಲಕ ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ಕೇಂದ್ರವನ್ನಾಗಿ ಮಾಡುವ ಹೆಗ್ಗುರಿ ಇದೆ. ಆ ನಿಟ್ಟಿನಲ್ಲಿ ಈ ಶೃಂಗಸಭೆಯನ್ನು ಯಶಸ್ವಿಗೊಳಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. 

Share This Article

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…