ಐನೂರಕ್ಕೂ ಅಧಿಕ ಶಿಬಿರಾರ್ಥಿಗಳಿಂದ ಗೋಷ್ಠಿಗಾಯನ

blank

ಬೆಂಗಳೂರು: ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ಬೆಂಗಳೂರಿನ 10 ಉಪ ಶಾಖೆಗಳು ೆ.9ರ ಭಾನುವಾರದಂದು ಶ್ರೀ ಪುರಂದರ ದಾಸರ ಹಾಗೂ ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವ ಹಮ್ಮಿಕೊಂಡಿದೆ.
ಕೆಂಗೇರಿ- ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಓಂಕಾರಾಶ್ರಮದಲ್ಲಿ ಅಂದು ಬೆಳಗ್ಗೆ 7.30ರಿಂದ ಪ್ರಾಕಾರ ಸಂಕೀರ್ತನೆ ನಡೆಯಲಿದ್ದು ಬಳಿಕ ಓಂಕಾರ ಆಶ್ರಮದ ಶ್ರೀ ಮಧುಸೂಧನಾನಂದಪುರಿ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡುವರು.
9.30ರಿಂದ ಮಹಾವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ಗೋಷ್ಠಿ ಗಾಯನ,, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಪಂಚರತ್ನ ಕೃತಿಗಳಲ್ಲಿ ಆಯ್ದ ಕೃತಿಗಳ ಗೋಷ್ಠಿ ಗಾಯನ ಇರಲಿದೆ. ಮಧ್ಯಾಹ್ನ 2ರಿಂದ ಮಹಾವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ಗೋಷ್ಠಿ ಗಾಯನ, ಶಿಬಿರಾರ್ಥಿ ಮಾತೆಯರಿಂದ ದೇವರನಾಮಗಳ ಗೋಷ್ಠಿ ಗಾಯನ ನಡೆಯುವುದು. ವಿದ್ವಾನ್ ಮೈಸೂರು ಪಿ.ಎಸ್.ಶ್ರೀಧರ್ ಹಾಗೂ ವಿದ್ವಾನ್ ನಿಖಿಲ್ ಕುಮಾರ್ ಮೃದಂಗದಲ್ಲಿ ಹಾಗೂ ಮಾಧವಿ ರಘುರಾಂ ವಯೋಲಿನ್ ಸಹಕಾರ ನೀಡುವರು.
ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ಪದ್ಮನಾಭನಗರ, ಯಲಹಂಕ ನ್ಯೂಟೌನ್, ಕೆಂಗೇಡಿ, ಕೆಂಗೇರಿ ಉಪನಗರ, ದೊಡ್ಡಕಲ್ಲಸಂದ್ರ, ಹೊಸಕೆರೆಹಳ್ಳಿ, ಕೋಣನಕುಂಟೆ, ರಾಜರಾಜೇಶ್ವರಿ ನಗರ, ಕತ್ರಿಗುಪ್ಪೆ, ಸಹಕಾರ ನಗ, ಭುವನೇಶ್ವರಿ ನಗರದಲ್ಲಿರುವ ಉಪ ಶಾಖೆಗಳಿಂದ ನಗರದ ವಿವಿಧ ಕಡೆಗಳಲ್ಲಿ ಕಳೆದ ಒಂದು ತಿಂಗಳಿಂದ ಉಚಿತ ದೇವರನಾಮ ಶಿಬಿರ ನಡೆದಿದ್ದು, ಐನೂರಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು. ಈ ಶಿಬಿರಾರ್ಥಿಗಳು ಗೋಷ್ಠಿ ಗಾಯನದಲ್ಲಿ ಪಾಲ್ಗೊಳ್ಳುವರು.

Share This Article

ಬೇಯಿಸಿದ ಮತ್ತು ಹಸಿ ಬೀಟ್ರೂಟ್: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಗೊತ್ತಾ? Beetroots

Beetroots: ಬೀಟ್‌ರೂಟ್‌ಗಳನ್ನು ಹಸಿಯಾಗಿ ಅಥವಾ ಕುದಿಸಿ ಸೇವಿಸುವ ಅತ್ಯುತ್ತಮ ಮಾರ್ಗವು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.…

ನೀವು ರಾತ್ರಿಯಲ್ಲಿ ಪದೇ ಪದೇ ನೀರು ಕುಡಿಯುತ್ತಿದ್ದೀರಾ? ಇದು ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಿವೆ.. ನಿರ್ಲಕ್ಷಿಸಬೇಡಿ Drinking Water

Drinking Water : ಮಾನವನ ಆರೋಗ್ಯಕ್ಕೆ ನೀರು ಅತ್ಯಗತ್ಯ. ಆದರೆ, ನಾವು ಅದನ್ನು ಯಾವಾಗ ಕುಡಿಯುತ್ತೇವೆ…