ತುಂಬೆ ಡ್ಯಾಂಗೆ ಎಎಂಆರ್ ನೀರು, ಅಣೆಕಟ್ಟಿನಲ್ಲಿ ಜಲಮಟ್ಟ 5.45 ಮೀ.ಗಿಂತ ಕೆಳಗಿಳಿಯದಂತೆ ಪಾಲಿಕೆ ನಿಗಾ

ಶ್ರವಣ್‌ಕುಮಾರ್ ನಾಳ ಮಂಗಳೂರು

ಬೇಸಿಗೆಯ ಪ್ರಖರತೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಒಳಹರಿವು ದಿಢೀರ್ ಕುಸಿತವಾಗಿದ್ದು, ನೀರು ಪೂರೈಕೆ ವ್ಯತ್ಯಯವಾಗದಂತೆ ತಡೆಯಲು ಎಎಂಆರ್ ಡ್ಯಾಂನಿಂದ ನೀರು ಪಡೆಯಲು ಪಾಲಿಕೆ ನಿರ್ಧರಿಸಿದೆ. ಅದರಂತೆ ಈಗಾಗಲೇ ಎಎಂಆರ್‌ನಿಂದ ತುಂಬೆ ಡ್ಯಾಂಗೆ ನೀರು ಹರಿಸಲಾಗಿದೆ.

ಏಪ್ರಿಲ್ ತಿಂಗಳ ಅಂತ್ಯದೊಳಗೆ ಮಳೆಯಾಗದಿದ್ದರೆ ಡ್ಯಾಂನಲ್ಲಿ ನೀರಿನ ಕೊರತೆಯಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ತುಂಬೆ ಡ್ಯಾಂನಲ್ಲಿ ಮಾ.3ಕ್ಕೆ 5.85 ಮೀಟರ್‌ಗೆ ಇಳಿಕೆಯಾಗಿದ್ದು, ಇದು 4 ವರ್ಷದಲ್ಲೇ ಅತಿ ಕಡಿಮೆಯಾಗಿದೆ. 2019ರ ನೀರಿನ ಬಳಕೆ ಹೋಲಿಸಿದರೆ ಈ ವರ್ಷಕ್ಕೆ ಶೇ.12ರಷ್ಟು ನೀರಿನ ಬೇಡಿಕೆ ಹೆಚ್ಚಳವಾಗಿದೆ. ಇದರಿಂದ ಈ ಬಾರಿ ನೀರಿನ ಕೊರತೆ ಸೃಷ್ಟಿಯಾಗುವ ಸಾಧ್ಯತೆ ಅಧಿಕ. ಪ್ರಸ್ತುತ ತುಂಬೆ ಡ್ಯಾಂ ನೀರಿನ ಮಟ್ಟ ಹೆಚ್ಚಿಸಲು ಎಎಂಆರ್ ನೀರು ಅನಿವಾರ್ಯವಾಗಿದ್ದರಿಂದ ಎಎಂಆರ್ ನೀರು ಪಡೆಯಲು ಪಾಲಿಕೆ ನಿರ್ಧರಿಸಿದೆ.

* ಡ್ಯಾಂಗೆ ಎಎಂಆರ್ ನೀರು ಪೂರೈಕೆ: ಎಎಂಆರ್‌ನಲ್ಲಿ ಪ್ರಸ್ತುತ 18.9 ಮೀ. (ಸಮುದ್ರ ಮಟ್ಟಕ್ಕಿಂತ ಮೇಲೆ) ನೀರು ಇದ್ದು, ಇದರಲ್ಲಿ 14.5 ಮೀ. ನೀರನ್ನು ತುಂಬೆ ವೆಂಟೆಡ್ ಡ್ಯಾಂಗೆ ಹರಿಸಲು ಎಎಂಆರ್ ನಿಯಂತ್ರಣ ಸಂಸ್ಥೆ ನಿರ್ಧರಿಸಿದೆ. ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 5.45 ಮೀ.ಗಿಂತ ಕೆಳಗಿಳಿಯದಂತೆ ನಿಗಾ ವಹಿಸಲು ಮಂಗಳೂರು ನಗರಪಾಲಿಕೆ ಸೂಚಿಸಿದೆ. ಡ್ಯಾಂನಲ್ಲಿ ನೀರಿನ ಮಟ್ಟ 5.45 ಮೀ.ಗಿಂತ ಕಡಿಮೆಯಾದ ಕೂಡಲೇ ಎಎಂಆರ್‌ನಿಂದ ನೀರನ್ನು ಪಡೆದು ಪ್ರತಿದಿನ 5.45 ಮೀ., 6 ಮೀ.ವರೆಗೆ ನೀರು ಹಿಡಿದಿಡಲು ಪಾಲಿಕೆ ನಿಧರ್ರಿಸಿದೆ.

* ರೇಷನಿಂಗ್ ವ್ಯವಸ್ಥೆ ಚಿಂತನೆ: ಮಂಗಳೂರು ನಗರಕ್ಕೆ ತುಂಬೆಯಿಂದ 1959ರಲ್ಲಿ 2.25 ಎಂಜಿಡಿ (12.27 ಎಂಎಲ್‌ಡಿ)ನೀರು ಪೂರೈಸುವ ಯೋಜನೆ ಪ್ರಾರಂಭಿಸಿತ್ತು. ನಂತರ ಕೆಯುಡಬ್ಲುೃಎಸ್ ಹಾಗೂ ಒಳಚರಂಡಿ ಮಂಡಳಿಯವರು 1974ರಲ್ಲಿ 18 ಎಂಜಿಡಿ ನೀರು ಪೂರೈಕೆಯ (80 ಎಂಎಲ್‌ಡಿ)ಯೋಜನೆ ಅನುಷ್ಠಾನಗೊಳಿಸಿದ್ದರು. ಈ ಯೋಜನೆ 1997ರಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದೆ. 2007ರಲ್ಲಿ ಕುಡ್ಸೆಂಪ್‌ನವರು ಎಡಿಬಿ ಸಹಾಯದಿಂದ 80 ಎಂಎಲ್‌ಡಿ ನೀರು ಪೂರೈಸುವ ಯೋಜನೆ ಅನುಷ್ಠಾನಗೊಳಿಸಿದೆ. ಪ್ರಸ್ತುತ ಯಥಾ ಸ್ಥಿತಿಯಲ್ಲಿ 155 ಎಂಎಲ್‌ಡಿ ನೀರು ನಗರಕ್ಕೆ ಪೂರೈಕೆಯಾಗುತ್ತಿದ್ದು, ಅನಿವಾರ್ಯವಾದರೆ ರೇಷನಿಂಗ್ ವ್ಯವಸ್ಥೆ ಆಧಾರದಲ್ಲಿ ನೀರು ಪೂರೈಕೆಗೆ ಪಾಲಿಕೆ ಚಿಂತನೆ ನಡೆಸಿದೆ.

—————–

ಕೈಗಾರಿಕೆಗೆ ನೀರು ಸ್ಥಗಿತ ಸಾಧ್ಯತೆ

ಮಂಗಳೂರಿಗೆ ಪೂರೈಕೆಯಾಗುವ ನೀರಿನಲ್ಲಿ ಪ್ರಸ್ತುತ ಒಟ್ಟು 18 ಎಂಜಿಡಿ ನೀರು ಕೈಗಾರಿಕೆಗಳಿಗೆ ರವಾನೆಯಾಗುತ್ತಿದೆ. ತುಂಬೆ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ, ಎನ್‌ಎಂಪಿಟಿಗೆ 0.5 ಎಂಜಿಡಿ, ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಎಎಂಆರ್‌ನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ ಹಾಗೂ ಎಸ್‌ಇಜಡ್‌ಗೆ 8 ಎಂಜಿಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಕೊರತೆಯಾದರೆ ಅನಿವಾರ್ಯವಾಗಿ ಎಎಂಆರ್ ನೀರನ್ನು ಕುಡಿಯುವ ನೀರಿನ ಬಳಕೆಗೆ ಬಳಸಿಕೊಳ್ಳಬೇಕಾಗುತ್ತದೆ. ಈ ಸಂದರ್ಭ ಕೈಗಾರಿಕೆಗಳು, ಕಾಮಗಾರಿಗಳಿಗೆ ನೀರು ಸ್ಥಗಿತಗೊಳಿಸುವುದು ಅನಿವಾರ್ಯ ಎಂದು ಮಂಗಳೂರು ಪಾಲಿಕೆ ತಿಳಿಸಿದೆ.

———————————-

ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. 2019ರಲ್ಲಿ ಆದ ನೀರಿನ ಸಮಸ್ಯೆ ಈ ಬಾರಿಯೂ ನಗರದಲ್ಲಿ ಕಾಣಿಸಿಕೊಳ್ಳಬಹುದು. ಡ್ಯಾಂನಲ್ಲಿ ನೀರು ಗಣನೀಯವಾಗಿ ಇಳಿಕೆಯಾಗಿರುವುದರಿಂದ ಎಎಂಆರ್ ಡ್ಯಾಂನ ನೀರು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಜಯಾನಂದ ಅಂಚನ್, ಮೇಯರ್, ಮಂಗಳೂರು ಮಹಾನಗರ ಪಾಲಿಕೆ

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…