25.5 C
Bangalore
Monday, December 16, 2019

ತುಂಬೆಯಲ್ಲಿ 8 ದಿನಕ್ಕಾಗುವಷ್ಟೇ ನೀರು

Latest News

ಜೆಡಿಎಸ್ ಕಾರ್ಯಕರ್ತರನ್ನು ಸೂರಜ್ ರೇವಣ್ಣ ಪ್ರಚೋದಿಸಿರುವ ಆಡಿಯೋ ಇದೆ, ಮಾಜಿ ಸಚಿವ ಎ.ಮಂಜು ಹೊಸ ಬಾಂಬ್

ಹಾಸನ: ಕೆಆರ್ ಪೇಟೆ ಉಪಚುನಾವಣೆ ಸಂದರ್ಭದಲ್ಲಿ ನಂಬಿಹಳ್ಳಿಯಲ್ಲಿ ನಡೆದ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಗಲಾಟೆ ಪ್ರಕರಣದ ವೇಳೆ , ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಸೂರಜ್...

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ ಮಾಡಿದ : ಸಾಮರಸ್ಯದ ಕಾರ್ಯಕ್ರಮ

ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ ಬಡಿಸುವ ಮೂಲಕ ಸಾಮರಸ್ಯಕ್ಕೆ ಮುನ್ನುಡಿ ಬರೆದರು....

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ವಿಜಯವಾಣಿ ವಿಶೇಷ ಮಂಗಳೂರು
ನಗರಕ್ಕೆ ನೀರು ಪೂರೈಕೆಯಾಗುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕನಿಷ್ಠ 8 ದಿನಕ್ಕಾಗುವಷ್ಟೇ ನೀರಿದೆ. ಮುಂಗಾರು ಆಗಮನಕ್ಕೆ ಕ್ಷಣಗಣನೆ ಆರಂಭ ಆಗಿರುವುದರಿಂದ ನೀರಿಗೆ ಸಮಸ್ಯೆಯಾಗುವ ಸಾಧ್ಯತೆ ಕಡಿಮೆ.
ಈ ಕುರಿತು ಪರಿಶೀಲಿಸಲು ಸೋಮವಾರ ವಿಜಯವಾಣಿ ಪ್ರತಿನಿಧಿ ತುಂಬೆ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದಾಗ, ನೀರಿನ ಮಟ್ಟ 2.52 ಮೀ. ಕಂಡು ಬಂತು. ಪಂಪಿಂಗ್ ನಡೆಯುತ್ತಿರುವುದರಿಂದ ನೀರು ಕಡಿಮೆಯಾಗುತ್ತಿದೆ. ಹಳೇ ವೆಂಟೆಡ್ ಡ್ಯಾಂ ಹದಿನೈದು ದಿನಗಳ ಹಿಂದೆಯೇ ಗೋಚರಿದೆ. 4 ಮೀಟರ್ ಎತ್ತರದ ಹಳೇ ಡ್ಯಾಂನ ಲೆಕ್ಕಾಚಾರ ಪ್ರಕಾರ, ನೀರಿನ ಮಟ್ಟ 8 ಅಡಿ 10 ಇಂಚು. ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ನದಿಯಿಂದ ನೀರೆತ್ತುವ ಮೂರು ಪೈಪ್‌ಗಳ ಪೈಕಿ ಒಂದು ಪೈಪ್ ಮೇಲಕ್ಕೆ ಕಾಣಿಸುತ್ತಿದೆ.

- Advertisement -

ದಿನಕ್ಕೆ 10-12 ಸೆ.ಮೀ.ಇಳಿಕೆ:  ತುಂಬೆಯಿಂದ ನಿರಂತರ ಪಂಪಿಂಗ್ ನಡೆದರೆ 36 ಎಂಜಿಡಿ ನೀರು ಪ್ರತಿದಿನ ನಗರಕ್ಕೆ ಪೂರೈಕೆಯಾಗುತ್ತದೆ. ಮೂರು ದಿನಗಳ ರೇಷನಿಂಗ್ ಬಳಿಕ ಮೇ 31ರಿಂದ ನೀರು ಸರಬರಾಜು ಆರಂಭಗೊಂಡಿದೆ. ಅಣೆಕಟ್ಟಿನಲ್ಲಿ ನೀರಿನ ಮಟ್ಟ ದಿನಕ್ಕೆ 10-12 ಸೆ.ಮೀ.ಗಳಷ್ಟು ನೀರು ಕಡಿಮೆಯಾಗುತ್ತಿದೆ. ಮೋಡ ಕವಿದ ಬಿಸಿಲಿನ ವಾತಾವರಣವೂ ಇರುವ ಕಾರಣ ಒಂದು ಕೆಲವೊಮ್ಮೆ ಒಂದು ಸೆ.ಮೀ. ಹೆಚ್ಚುವರಿಯಾಗಿಯೂ ಕಡಿಮೆಯಾಗುತ್ತದೆ. ರೇಷನಿಂಗ್ ಅವಧಿಯಲ್ಲಿ ಇದು ನೀರಿನ ಮಟ್ಟದಲ್ಲಿ ಕಾಣಿಸುತ್ತದೆ.

ಇಲ್ಲ ನೀರಿನ ಒಳಹರಿವು:  ತುಂಬೆ ಡ್ಯಾಂಗೆ ನೀರಿನ ಒಳ ಹರಿವು ಮಾರ್ಚ್ ತಿಂಗಳಲ್ಲೇ ಸ್ಥಗಿತಗೊಂಡಿದೆ. ಆ ಬಳಿಕ ಎರಡು ಬಾರಿ ಎಎಂಆರ್ ಡ್ಯಾಂನಿಂದ ಬಿಡಲಾಗಿತ್ತು. ಪ್ರಸ್ತುತ ಎಎಂಆರ್ ಡ್ಯಾಂನಲ್ಲೂ ನೀರು ಖಾಲಿಯಾಗಿ, ಗೇಟ್ ತೆರೆದಿಡಲಾಗಿದೆ. ಸುಬ್ರಹ್ಮಣ್ಯ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿ ಅಣೆಕಟ್ಟು ಭರ್ತಿಯಾಗಿದೆ. ಆದರೆ, ಅದರಿಂದ ಹೊರಕ್ಕೆ ಹರಿಯುತ್ತಿರುವ ನೀರು ಇನ್ನೂ ತುಂಬೆಗೆ ಬಂದಿಲ್ಲ. ಕಾರಣ, ಉಪ್ಪಿನಂಗಡಿಯಿಂದ ತುಂಬೆಗೆ ಬರುವ ಹಾದಿಯಲ್ಲಿ ನದಿಯಲ್ಲಿ ಹಲವು ಬೃಹತ್ ‘ಕಯ’ಗಳಿದ್ದು, ಅವು ತುಂಬಿ ಎಎಂಆರ್ ಡ್ಯಾಮ್‌ಗಳು ತುಂಬಿ ನೀರು ತುಂಬೆಗೆ ಬರಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ನಿರಂತರ ಮೂರರಿಂದ ನಾಲ್ಕು ದಿನ ಮಳೆಯಾದರೆ ಮಾತ್ರ ತುಂಬೆಗೆ ಒಳ ಹರಿವು ಆರಂಭವಾಗಬಹುದು ಎನ್ನುತ್ತಾರೆ ಅಧಿಕಾರಿಗಳು.

ಡ್ರೆಜ್ಜಿಂಗ್‌ಗೆ ಚಾಲನೆ:  ತುಂಬೆ ಅಣೆಕಟ್ಟಿನ ಒಳಭಾಗದಲ್ಲಿ ಡ್ರೆಜ್ಜಿಂಗ್ ನಡೆಸಿ, ಹೂಳು ತೆಗೆಯುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ಗಣಿ ಇಲಾಖೆ ಅಧಿಕಾರಿಗಳು, ಡೆಮೋ ವೀಕ್ಷಿಸಿ, ಡ್ರೆಜ್ಜಿಂಗ್‌ಗೆ ಅನುಮತಿ ನೀಡಿದ್ದಾರೆ. ನವದೆಹಲಿಯ ನೆಲ್ಕೋ ಸಂಸ್ಥೆ ಕಾಮಗಾರಿ ಗುತ್ತಿಗೆ ಪಡೆದಿದೆ. ಪಂಟೂನ್‌ಗೆ(ತೇಲುವ ಡ್ರಮ್‌ಗಳು) ಜನರೇಟರ್ ಅಳವಡಿಸಿ, ಮೋಟರ್ ಫಿಕ್ಸ್ ಮಾಡಿ ಪೈಪ್ ಮೂಲಕ ಹೂಳೆತ್ತಲಾಗುತ್ತದೆ. ಪೈಪ್ ಮೂಲಕ ನೀರಿನ ಅಡಿಯಲ್ಲಿರುವ ಮರಳು, ಮಣ್ಣು, ಕಸ ಮೇಲೆತ್ತಲಾಗುತ್ತದೆ. ಗಂಟೆಗೆ 100 ಎಂ.ಕ್ಯೂ.(ಕ್ಯುಬಿಕ್ ಮೀಟರ್) ಹೂಳನ್ನು ಮೇಲೆತ್ತಬಹುದು. ಮಳೆಗಾಲದಲ್ಲೂ ಕೆಲಸ ನಡೆಯಲಿದೆ. ವಿಜಯವಾಣಿ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ ತಾಂತ್ರಿಕ ಕಾರಣದಿಂದ ಡ್ರೆಜ್ಜಿಂಗ್ ಸ್ಥಗಿತಗೊಳಿಸಲಾಗಿತ್ತು. ಹೂಳು ಹೊರ ಬರುವ ಪೈಪನ್ನು ಹೊರ ತೆಗೆದು ಮತ್ತೆ ಜೋಡಿಸಲಾಗುತ್ತಿತ್ತು.

ಜಿಲ್ಲಾ ಉಸ್ತುವಾರಿ ಸಚಿವರು ಸೋಮವಾರ ತುಂಬೆ ನೀರಿನ ವಿಚಾರವಾಗಿ ಸಭೆ ನಡೆಸಿದ್ದಾರೆ. ಪ್ರಸ್ತುತ ಇರುವ ರೇಷನಿಂಗ್ ವೇಳಾಪಟ್ಟಿಯನ್ನು ಜೂನ್ 12ರವರೆಗೆ ವಿಸ್ತರಿಸಲಾಗಿದೆ. ಈ ನಡುವೆ ಮಳೆಯಾದರೆ ರೇಷನಿಂಗ್ ರದ್ದಾಗಲಿದೆ.
ಬಿ.ಎಚ್. ನಾರಾಯಣಪ್ಪ, ಮನಪಾ ಆಯುಕ್ತ

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...