ಆನೇಕಲ್​​ನಲ್ಲಿ ರಾತ್ರೋರಾತ್ರಿ 3 ಸಾವಿರ ಮರಗಳ ಮಾರಣಹೋಮ, ಪರಿಸರ ಪ್ರೇಮಿಗಳ ಆಕ್ರೋಶ

ಆನೇಕಲ್: ಅಭಿವೃದ್ಧಿ ಹೆಸರಿನಲ್ಲಿ ರಾತ್ರೋರಾತ್ರಿ 3 ಸಾವಿರ ಮರಗಳ ಮರಣಹೋಮವಾಗಿರುವ ಘಟನೆ ತಾಲೂಕಿನ ಬ್ಯಾಗಡದೇನಹಳ್ಳಿ ಕೆರೆಯಲ್ಲಿ ನಡೆದಿದೆ.

ಗ್ರಾಮದ ಕೆರೆಯ 6 ಎಕರೆ ಜಾಗದಲ್ಲಿ ಆಟದ ಮೈದಾನ ಹಾಗೂ ಕೆರೆಯ ಅಭಿವೃದ್ಧಿ ಮಾಡುವ ನೆಪದಲ್ಲಿ ಮರಗಳನ್ನು ರಾತ್ರೋರಾತ್ರಿ ಕಡಿದಿದ್ದಾರೆ ಎಂದು ಗ್ರಾಮಸ್ಥರು ಆನೇಕಲ್ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಕೆರೆಯ ಫವತ್ತಾದ ಮಣ್ಣು ಹಾಗೂ ಮರಗಳನ್ನು ಹತ್ತಿರದ ಇಟ್ಟಿಗೆ ಕಾರ್ಖಾನೆಗೆ ನೀಡಲಾಗಿದೆ. ಮರಗಳ ಮಾರಣಹೋಮದಿಂದ ಅನೇಕ ಪರಿಸರ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

2011ರಲ್ಲಿ 8 ಸಾವಿರ ಗಿಡಗಳನ್ನು ನೆಡಲಾಗಿತ್ತು. ಆದರೆ, ಈಗ ಮರಗಳನ್ನು ಜೆಸಿಬಿಯಿಂದ ಬುಡ ಸಮೇತ ನಾಶ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

One Reply to “ಆನೇಕಲ್​​ನಲ್ಲಿ ರಾತ್ರೋರಾತ್ರಿ 3 ಸಾವಿರ ಮರಗಳ ಮಾರಣಹೋಮ, ಪರಿಸರ ಪ್ರೇಮಿಗಳ ಆಕ್ರೋಶ”

  1. ಮನೆಹಾಳರು. ಇವರುಗಳು ನಾಶವಾಗಿ ಹೋಗಬಾರದೇ?

Comments are closed.