ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ 3 ಆಸ್ತಿ ಹರಾಜು

ಮುಂಬೈ: ಭೂಗತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ದಾವೂದ್ ಇಬ್ರಾಹಿಂಗೆ ಸೇರಿದ ಮೂರು ಆಸ್ತಿಗಳನ್ನು ಮಂಗಳವಾರ 11.58 ಕೋಟಿ ರೂ.ಗೆ ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲಾಗಿದೆ.

ಕಳ್ಳಸಾಗಣಿಕೆ ಮತ್ತು ವಿದೇಶಿ ವಿನಿಮಯ ಮ್ಯಾನಿಪುಲೇಶನ್ ಆಕ್ಟ್ (ಎಸ್​ಎಎಫ್​ಇಎಂಎ) ಅಡಿ ಕೇಂದ್ರ ಹಣಕಾಸು ಸಚಿವಾಲಯ ಬಹಿರಂಗ ಹರಾಜು ಹಾಕಿತು. ಹರಾಜು ಪ್ರಕ್ರಿಯೆಯಲ್ಲಿ ದೆಹಲಿ ಝೈಕಾ ಖ್ಯಾತಿಯ ಹೋಟೆಲ್ ರೋಣಕ್ ಅಫ್ರೋಜ್, ಮಹಮ್ಮದ್ ಅಲಿ ರಸ್ತೆಯ ಶಬನಮ್ ಗೆಸ್ಟ್ ಹೌಸ್, ದಾಮರ್​ವಾಲ ಕಟ್ಟಡದಲ್ಲಿರುವ 6 ಕೋಣೆಗಳನ್ನು ಹರಾಜು ಹಾಕಲಾಯಿತು.

ಈ ಮೂರೂ ಆಸ್ತಿಗಳನ್ನು ಸೈಫಿ ಬುರ್ಹಾನಿ ಅಪ್​ಲಿಫ್ಟ್​ಮೆಂಟ್​ ಟ್ರಸ್ಟ್​ ಹೆಚ್ಚಿನ ಮೊತ್ತದ ಬಿಡ್​ ಮಾಡುವ ಮೂಲಕ ಖರೀದಿಸಿದೆ. ಸೈಫಿ ಟ್ರಸ್ಟ್​ ರೋಣಕ್ ಅಫ್ರೋಜ್ ಕಟ್ಟಡಕ್ಕೆ 4.53 ಕೋಟಿ ರೂ. ಶಬನಮ್​ ಗೆಸ್ಟ್​ ಹೌಸ್​ಗೆ 3.52 ಕೋಟಿ ರೂ. ಮತ್ತು ದಾಮರ್​ವಾಲ ಕಟ್ಟಡಕ್ಕೆ 3.53 ಕೋಟಿ ರೂ. ಬಿಡ್​ ಮಾಡಿ ಖರೀದಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *