ಮೇಕೆ ಕಾಯುತ್ತಿದ್ದ ವೇಳೆ ಬಾವಿಯಲ್ಲಿ ಬಿದ್ದ ಮೂವರು ಬಾಲಕಿಯರ ಸಾವು

ದೀವಾಸ್​: ಮೇಕೆ ಕಾಯುತ್ತಿದ್ದ ಮೂವರು ಬಾಲಕಿಯರು ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಮಧ್ಯಪ್ರದೇಶದ ದಿವಾಸ್​ ಜಿಲ್ಲೆಯ ಬೆಸುನ್​ ಗ್ರಾಮದಲ್ಲಿ ನಡೆದಿದೆ. ಮೇಕೆ ಅಟ್ಟಿಸಿಕೊಂಡು ಬರುತ್ತಿದ್ದ ವೇಳೆ ನೋಡದೇ ಬಾಲಕಿಯೋರ್ವಳು ಬಾವಿಯಲ್ಲಿ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಹೋಗಿ ಇಬ್ಬರು ಬಾಲಕಿಯರು ನೀರು ಪಾಲಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, 12 ಅಡಿ ಬಾವಿ ಇದಾಗಿತ್ತು. ದುರ್ವೆ (9)ಸಂಧ್ಯಾ ಕುಮ್ರೆ(8), ಮತ್ತು ಸಾಧನಾ ಭಲ್ವಾಯಿ (8) ಮೃತ ಬಾಲಕಿಯರು ಎಂದು ಪೊಲೀಸರು ತಿಳಿಸಿದ್ದಾರೆ.